ಸವಾರರಿಗೆ ಉಚಿತ ಇನ್ಶೂರೆನ್ಸ್; ಬಂಪರ್ ಆಫರ್ ನೀಡಿದ ಉಬರ್ !

By Web Desk  |  First Published Sep 25, 2019, 7:52 PM IST

ಉಬರ್ ಸವಾರಿ ಮಾಡೋ ಪ್ರಯಾಣಿಕರಿಗೆ ಉಚಿತ ಇನ್ಶೂರೆನ್ಸ್ ನೀಡುತ್ತಿದೆ. ಹೊಸ ಆಫರ್ ಘೋಷಿಸಿರುವ ಉಬರ್ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದೆ.


ನವದೆಹಲಿ(ಸೆ.25): ಹೊಸ ಟ್ರಾಫಿಕ್ ರೂಲ್ಸ್ ಬಂದ ಮೇಲೆ ವಾಹನ ಸವಾರರು ಎಲ್ಲಾ ದಾಖಲೆಗಳನ್ನು ಮಾಡಿಸಿಕೊಂಡಿದ್ದಾರೆ.  ವಾಹನ ಇನ್ಶೂರೆನ್ಸ್ ಅವದಿ ಮುಗಿದಿದ್ದರೆ, ನವೀಕರಣ ಮಾಡದಿದ್ದರೆ ದುಬಾರಿ ದಂಡ ಬೀಳಲಿದೆ. ಇದೀಗ ಉಬರ್ ಬಂಪರ್ ಆಫರ್ ಘೋಷಿಸಿದೆ. ಉಬರ್ ಸವಾರಿ ಮಾಡೋ ಎಲ್ಲಾ ಪ್ರಯಾಣಿಕರಿಗೆ ಉಚಿತ ಇನ್ಶೂರೆನ್ಸ್ ನೀಡಲಿದೆ. 

ಇದನ್ನೂ ಓದಿ: ವಾಹನಗಳ ಥರ್ಡ್‌ಪಾರ್ಟಿ ವಿಮಾ ಪ್ರೀಮಿಯಂ ಹೆಚ್ಚಳ

Tap to resize

Latest Videos

ಉಬರ್ ಫೋರ್ ವೀಲ್ಹರ್, ಉಬರ್ ಆಟೋ ಹಾಗೂ ಉಬರ್ ಮೋಟೋ(ದ್ವಿಚಕ್ರ ವಾಹನ) ಬಳಸುವ ಎಲ್ಲಾ ಪ್ರಯಾಣಿಕರಿಗೆ ಉಚಿತ ವಿಮೆಯನ್ನು ಉಬರ್ ನೀಡಲಿದೆ. ಇದಕ್ಕಾಗಿ ಭಾರ್ತಿ ಎಕ್ಸಾ ಹಾಗೂ ಟಾಟಾ AIG ಜೊತೆ ಒಪ್ಪಂದ ಮಾಡಿಕೊಂಡಿದೆ. ಉಬರ್ ಪ್ರಯಾಣಿಕರು ವಾಹನ ಹತ್ತಿದಲ್ಲಿಂದ ವಾಹನದಿಂದ ಇಳಿಯುವ  ವರೆಗಿನ ವಿಮೆ ಜವಾಬ್ದಾರಿಯನ್ನು ಕಂಪನಿ ಹೊತ್ತುಕೊಂಡಿದೆ. 

ಇದನ್ನೂ ಓದಿ: ಕ್ಯಾಬ್, ಅಟೋ ಆಯ್ತು, ಭಾರತಕ್ಕೆ ಬಂತು ಉಬರ್ ಬೋಟ್!

ಉಬರ್ ವಿಮೆಯಲ್ಲಿ ಅಪಘಾತದಿಂದ ಸಾವನ್ನಪ್ಪಿದರೆ 5 ಲಕ್ಷ ರೂಪಾಯಿ, ಗಾಯಗೊಂಡು ಆಸ್ಪತ್ರೆ ಸೇರಿದರೆ 2 ಲಕ್ಷ ರೂಪಾಯಿ ಹಾಗೂ ಸಣ್ಣ ಪುಟ್ಟ ಗಾಯಗಳಾಗಿದ್ದಲ್ಲಿ 50,000 ರೂಪಾಯಿ ನೀಡಲಿದೆ. ಆಗಸ್ಟ್ 15 ರಿಂದಲೇ ಪ್ರಾಯೋಗಿಕವಾಗಿ ಈ ಯೋಜನೆ ಜಾರಿ ಮಾಡಿದ್ದೇವೆ. ಆದರೆ ಇದೀಗ ಎಲ್ಲಾ ಉಬರ್ ಪ್ರಯಾಣಿಕರಿಗೆ ವಿಮೆ ಸೌಲಭ್ಯ ಲಭ್ಯವಾಗಲಿದೆ ಎಂದು ಉಬರ್ ಹೇಳಿದೆ.

ವಿಶೇಷ ಅಂದರೆ ಉಬರ್ ಬುಕ್ ಮಾಡಿದ ಹಾಗೂ ಆತನ ಜೊತೆ ತೆರಳಿದ ಎಲ್ಲಾ ಪ್ರಯಾಣಿಕರಿಗೂ ಉಬರ್ ವಿಮೆ ಅನ್ವಯವಾಗಲಿದೆ. ಉಬರ್ ಪ್ರಯಾಣದ ವೇಳೆ ಯಾವುದೇ ಅಪಾಯ ಸಂಭವಿಸದಿರಲಿ.  ಅಹಿತರ ಘಟನೆ ಸಂಭವಿಸಿದರೆ ನಮ್ಮನ್ನು ಸಂಪರ್ಕಿಸಿದರೆ ಮಾಹಿತಿ ನೀಡಲಿದ್ದೇವೆ. ಆ್ಯಪ್ ಮೂಲಕ ಸುಲಭವಾಗಿ ಸಮಸ್ಯೆಗೆ ಪರಿಹಾರ ಸಿಗಲಿದೆ. ಅಪಘಾತವಾದಾಗ ಅಪಘಾತ ವಿಭಾಗವನ್ನು ಕ್ಲಿಕ್ ಮಾಡಿ ಫಾರ್ಮ್ ಭರ್ತಿ ಮಾಡಿದರೆ ಸಾಕು, ಉಬರ್ ತಂಡ ಎಲ್ಲಾ ಜವಾಬ್ದಾರಿ ನಿರ್ವಹಿಸಲಿದೆ. ಗರಿಷ್ಠ 60 ದಿನದಲ್ಲಿ ಅಪಘಾತದ ವಿಮೆ ಹಣ ಖಾತೆ ಸೇರಲಿದೆ. 

ಆಸ್ಪತ್ರೆಗಳಲ್ಲಿ ಕ್ಯಾಶ್‌ಲೆಸ್ ಸೌಲಭ್ಯವಿಲ್ಲದಿದ್ದರೆ, ಫಾರ್ಮ್ ಫಿಲ್ ಮಾಡಿದರೆ ಸಾಕು, ನಿಮ್ಮ ಖಾತೆಗೆ ಹಣ ಸಂದಾಯವಾಗಲಿದೆ. ಹಲವು ಸೇವೆಯೊಂದಿಗೆ ಉಬರ್ ಭಾರತದಲ್ಲಿ ತನ್ನ ಮಾರುಕಟ್ಟೆ ವಿಸ್ತರಿಸುತ್ತಿದೆ. ಇದರ ಜೊತೆಗೆ ಪ್ರಯಾಣಿಕರ ಸುರಕ್ಷತೆ ಕಡೆಗೆ ಗಮನ ಹರಿಸಿರುವುದು ಶ್ಲಾಘನಿಯ.

click me!