ಟ್ರಾಫಿಕ್ ನಿಯಮ ಉಲ್ಲಂಘಿಸಿದ ಶೇನ್ ವಾರ್ನ್; 1.6 ಲಕ್ಷ ರೂ ದಂಡ, ಡ್ರೈವಿಂಗ್ ನಿಷೇಧ!

By Web Desk  |  First Published Sep 24, 2019, 8:56 PM IST

ಭಾರತದಲ್ಲಿ ಹೊಸ ಟ್ರಾಫಿಕ್ ನಿಯಮ ಜಾರಿಯಾದ ಬೆನ್ನಲ್ಲೇ ಹಲವರು ಲಕ್ಷ ಲಕ್ಷ ರೂಪಾಯಿ ದಂಡ ಪಾವತಿಸಿದ್ದಾರೆ. ಇದೀಗ ಆಸ್ಟ್ರೇಲಿಯಾ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಬರೋಬ್ಬರಿ 1.6 ಲಕ್ಷ ರೂಪಾಯಿ ದಂಡ ಕಟ್ಟಿದ್ದಾರೆ. ಇಷ್ಟೇ ಅಲ್ಲ ಒಂದು ವರ್ಷ ಡ್ರೈವಿಂಗ್ ನಿಷೇಧದ ಶಿಕ್ಷೆಯನ್ನು ಪಡೆದಿದ್ದಾರೆ.


ಲಂಡನ್(ಸೆ.24): ಭಾರತದಲ್ಲಿ ಹೊಸ ಟ್ರಾಫಿಕ್ ರೂಲ್ಸ್ ಜಾರಿಯಾಗಿದೆ. ಕುಡಿದು ವಾಹನ ಚಲಾವಣೆ ಸೇರಿದಂತೆ ಗಂಭೀರ ನಿಯಮ ಉಲ್ಲಂಘನೆ ಮಾಡಿದ್ದಲ್ಲಿ ದಂಡದ ಜೊತೆಗೆ ಡ್ರೈವಿಂಗ್ ಲೈ,ಸೆನ್ಸ್ ಕೂಡ ಸಸ್ಪೆಂಡ್ ಆಗಲಿದೆ. ಭಾರತದಲ್ಲಿ ನಿಯಮ ಜಾರಿಯಾಗಿದ್ದೇ ತಡ, ಲಂಡನ್‌ನಲ್ಲಿ ಮಾಜಿ ಕ್ರಿಕೆಟಿಗ ಶೇನ್ ವಾರ್ನ್ ಡ್ರೈವಿಂಗ್ ಲೈಸೆನ್ಸ್ ಸಸ್ಪೆಂಡ್ ಮಾಡಲಾಗಿದೆ.

ಇದನ್ನೂ ಓದಿ: ಸ್ವಿನ್ ಮಾಂತ್ರಿಕ ಶೇನ್ ವಾರ್ನ್‌ಗೆ ಕೋಚ್ ಪಟ್ಟ!

Latest Videos

undefined

ಆಸ್ಟ್ರೇಲಿಯಾ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಲಂಡನ್ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಾರೆ. 6 ಬಾರಿ ಮೀತಿ ಮೀರಿದ ವೇಗದಲ್ಲಿ ವಾಹನ ಚಲಾಯಿಸಿದ ಕಾರಣ ಶೇನ್ ವಾರ್ನ್‌ 1.6 ಲಕ್ಷ ರೂಪಾಯಿ ದಂಡ ಹಾಗೂ 1 ವರ್ಷ ಲಂಡನ್‌ನಲ್ಲಿ ಡ್ರೈವಿಂಗ್ ನಿಷೇಧಿಸಲಾಗಿದೆ. 

ಇದನ್ನೂ ಓದಿ: ಅಬ್ಬಬ್ಬಾ! 24 ತಾಸು, 18 ಸಾವಿರ ಕೇಸು : 60 ಲಕ್ಷ ದಂಡ

ಶೇನ್ ವಾರ್ನ್ 2016ರಲ್ಲಿ ಮಿತಿ ಮೀರಿದ ವೇಗದಲ್ಲಿ ಕಾರು ಚಲಾಯಿಸಿ ನಿಯಮ ಉಲ್ಲಂಘಿಸಿದ್ದಾರೆ. 2016ರಿಂದ ಇಲ್ಲೀವೆರೆಗೆ 6 ಬಾರಿ ನಿಯಮ ಉಲ್ಲಂಘಿಸಿದ ವಾರ್ನ್‌ಗೆ ಲಂಡನ್ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ. ಸೆಪ್ಟೆಂಬರ್ 20, 2019ರಿಂದ 12 ತಿಂಗಳುಗಳ ಕಾಲ ಶೇನ್ ವಾರ್ನ್ ಲಂಡನ್‌ನಲ್ಲಿ ಡ್ರೈವಿಂಗ್ ಮಾಡುವಂತಿಲ್ಲ.

ಇದನ್ನೂ ಓದಿ: ರೋಬ್ಬರಿ 2 ಲಕ್ಷ ರೂಪಾಯಿ ದಂಡ; ಫೈನ್ ನೋಡಿ ಚಾಲಕ ಕಂಗಾಲು!

ಶೇನ್ ವಾರ್ನ್ ಲಂಡನ್‌ನಲ್ಲೂ ಮನೆ ಹೊಂದಿದ್ದಾರೆ. ವಾರ್ನ್ ಲಂಡನ್ ವಾಸದ ವೇಳೆ ಜಾಗ್ವರ್ XK ಕಾರು ಬಳಸುತ್ತಾರೆ. ಇದೇ ಕಾರಿನಲ್ಲಿ ಸ್ಪೀಡ್ ಲಿಮಿಟ್ ನಿಯಮ ಉಲ್ಲಂಘಿಸಿ ಭಾರೀ ದಂಡ ತೆರಬೇಕಾಗಿದೆ. 

ಇದನ್ನೂ ಓದಿ: ₹100 ಪಾವತಿಸಿದರೆ ಸಾಕು, ದುಬಾರಿ ದಂಡದಿಂದ ಸಿಗಲಿದೆ ಮುಕ್ತಿ!

ಭಾರತದಲ್ಲೂ ಇದೀಗ ಹೊಸ ಟ್ರಾಫಿಕ್ ನಿಯಮ ಜಾರಿ ಮಾಡಲಾಗಿದೆ. ದುಬಾರಿ ದಂಡದ ಕಾರಣದಿಂದ ವಾಹನ ಸವಾರರ ಟ್ರಾಫಿಕ್ ನಿಯಮ ಉಲ್ಲಂಘನೆ ಕಡಿಮೆಯಾಗಿದೆ. 

click me!