ಹೊಸ ಟ್ರಾಫಿಕ್ ನಿಯಮ ಜಾರಿಯಾದ ಬಳಿಕ ಟ್ರಾಫಿಕ್ ಪೊಲೀಸರ ದರ್ಪ ಅಟ್ಟಹಾಸಗಳು ವರದಿಯಾಗುತ್ತಿದೆ. ಬೆಂಗಳೂರಲ್ಲಿ ಮಿನಿ ಟ್ರಕ್ ಡ್ರೈವರ್‌ಗೆ ಥಳಿಸಿ ಎಲ್ಲರಿಂದ ಛೀಮಾರಿ ಹಾಕಿಸಿಕೊಂಡಿದ್ದ ಘಟನೆ ಮಾಸುವ ಮುನ್ನವೆ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ತುಮಕೂರು(ಸೆ.24): ಬೆಂಗಳೂರಿನಲ್ಲಿ ಮಿನಿ ಟ್ರಕ್ ಚಾಲಕನ ಮೇಲೆ ಟ್ರಾಫಿಕ್ ಪೊಲೀಸಪ್ಪನ ಹಲ್ಲೆ ನಡೆಸಿದ್ದಕ್ಕೆ ತೀವ್ರ ಆಕ್ರೋಷ ವ್ಯಕ್ತವಾಗಿತ್ತು. ಪೊಲೀಸರ ದರ್ಪದ ವಿರುದ್ದದ ಸಾಮಾಜಿಕ ಜಾಲತಾಣದಲ್ಲಿ ಟೀಕೆ ಹಾಗೂ ವಿರೋಧ ವ್ಯಕ್ತವಾಗಿತ್ತು. ಈ ಘಟನೆ ಮಾಸುವ ಮುನ್ನವೇ ತುಮಕೂರಿನಲ್ಲಿ ಇದೇ ರೀತಿ ಘಟನೆ ನಡಿದೆದೆ.
ಇದನ್ನೂ ಓದಿ: ಕಮಿಷನರ್ ಸಾಹೇಬ್ರೇ... ಇದೇನಾ ಟ್ರಾಫಿಕ್ ಪೊಲೀಸಿಂಗ್ ಅಂದ್ರೆ?
undefined
ತುಮಕೂರಿನಲ್ಲಿ ಬಸ್ ಚಾಲಕನ ಮೇಲೆ ಟ್ರಾಫಿಕ್ ಪೊಲೀಸಪ್ಪ ಅಟ್ಟಹಾಸ ಮೆರೆದಿದ್ದಾನೆ. ಕೋಡಿ ಸರ್ಕಲ್ ಬಳಿ ಬಸ್ ದಾಖಲೆ ಪರೀಶಿಲನೆ ಎಂದು ಬಸ್ ಹತ್ತಿದ ಪೊಲೀಸ್ ಚಾಲಕನಿಗೆ ಹಿಗ್ಗಾ ಮುಗ್ಗ ಥಳಿಸಿದ್ದಾನೆ. ಟ್ರಾಫಿಕ್ ಪೇದೆ ಶೇಷಾದ್ರಿ ಹದ್ದು ಮೀರಿ ವರ್ತಿಸಿ, ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.
ಇದನ್ನೂ ಓದಿ: ಟ್ರಾಫಿಕ್ ಪೊಲೀಸರ ಎಡವಟ್ಟು; ಹೆಲ್ಮೆಟ್ ಹಾಕದ ಬಸ್ ಚಾಲಕನಿಗೆ ದಂಡ!
ಈ ಘಟನೆ ಕಳೆದ ತಿಂಗಳು ನಡೆದಿದ್ದು, ಇದೀಗ ಬಯಲಾಗಿದೆ. ಇದಕ್ಕಿದ್ದಂತೆ ಟ್ರಾಫಿಕ್ ಪೇದೆಯ ದಾಳಿ ನಡೆಸಿ ಹಲ್ಲೆ ಮಾಡಿದ್ದಾನೆ. ಪೊಲೀಸಪ್ಪನ ದರ್ಪಕ್ಕೆ ಚಾಲಕ ಮತ್ತು ನಿರ್ವಾಹಕ ಬೆಚ್ಚಿ ಬಿದ್ದಿದ್ದಾರೆ. ಸಾಮಾಜಿಲ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದ್ದು, ವಿರೋಧ ವ್ಯಕ್ತವಾಗುತ್ತಿದೆ.