ಬೆಂಗಳೂರಲ್ಲಿ ಲೀಸ್‌ಗೆ ಸಿಗಲಿದೆ ಎದರ್ ಎಲೆಕ್ಟ್ರಿಕ್ ಸ್ಕೂಟರ್!

Published : Feb 13, 2019, 04:20 PM IST
ಬೆಂಗಳೂರಲ್ಲಿ ಲೀಸ್‌ಗೆ ಸಿಗಲಿದೆ ಎದರ್ ಎಲೆಕ್ಟ್ರಿಕ್ ಸ್ಕೂಟರ್!

ಸಾರಾಂಶ

ಬೆಂಗಳೂರಿನ ಎದರ್ ಎಲೆಕ್ಟ್ರಿಕ್ ಸ್ಕೂಟರ್ ಹೊಸ ಸ್ಕೀಮ್ ಜಾರಿಗೆ ತಂದಿದೆ. ನೂತನ ಸ್ಕೀಮ್ ಮೂಲಕ ಗ್ರಾಹಕರು ಎದರ್ ಎಲೆಕ್ಟ್ರಿಕ್ ಸ್ಕೂಟರ್ ಲೀಸ್‌ಗೆ ಪಡೆಯಬಹುದು. 13 ತಿಂಗಳು, 25 ತಿಂಗಳು ಹಾಗೂ 26 ತಿಂಗಳ ಲೀಸ್ ಪ್ಲಾನ್ ಜಾರಿಯಲ್ಲಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ಬೆಂಗಳೂರು(ಫೆ.14): ದೇಶದ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರೋ ಬೆಂಗಳೂರಿನ ಎದರ್ ಸ್ಕೂಟರ್ ಇದೀಗ ಹೊಸ ಸೇವೆ ಆರಂಭಿಸಿತ್ತಿದೆ. ಹೊಸ ಗ್ರಾಹಕರನ್ನ ಆಕರ್ಷಿಸಲು ಎದರ್ ಎನರ್ಜಿ ಲೀಸ್‌ಗೆ ಸ್ಕೂಟರ್ ನೀಡಲು ಮುಂದಾಗಿದೆ. ಇದಕ್ಕಾಗಿ ಹೊಸ ಯೋಜನೆ ಜಾರಿಗೊಳಿಸಿದೆ.

ಇದನ್ನೂ ಓದಿ: ನೆಲಕ್ಕೆ ಬಿದ್ದ ರಾಯಲ್ ಎನ್‌ಫೀಲ್ಡ್ ಬೈಕ್ ಸುಲಭವಾಗಿ ಎತ್ತಲು ಇಲ್ಲಿದೆ ಟಿಪ್ಸ್!

ಎದರ್ ಎಲೆಕ್ಟ್ರಿಕ್ ಎನರ್ಜಿ ಇದೀಗ ಲೀಸ್‍‌ಗೆ ಸ್ಕೂಟರ್ ನೀಡಲಿದೆ. 13 ತಿಂಗಳು, 25 ತಿಂಗಳು ಹಾಗೂ 36 ತಿಂಗಳ 3 ಸ್ಕೀಮ್‌ಗಳಲ್ಲಿ ಎದರ್ ಎಲೆಕ್ಟ್ರಿಕ್ ಸ್ಕೂಟರ್ ಗ್ರಾಹಕರಿಗೆ ಲಭ್ಯವಾಗಲಿದೆ. 30,000 ರೂಪಾಯಿ ಪಾವತಿಸಿ 13 ತಿಂಗಳ ಲೀಸ್ ಸ್ಕೀಮ್‌ಗೆ ಗ್ರಾಹಕರು ಸೇರಿಕೊಳ್ಳಬಹುದು.

 

 

ಇದನ್ನೂ ಓದಿ: ಮೋದಿ ಸರ್ಕಾರದ ಹೊಸ ಯೋಜನೆ- ಎಲೆಕ್ಟ್ರಿಕ್ ವಾಹನಕ್ಕೆ ಸುಲಭ ಸಾಲ!

48,000 ರೂಪಾಯಿ ಮುಂಗಡ ಪಾವತಿಸಿ 25 ತಿಂಗಳ ವರೆಗೆ ಲೀಸ್(ಬಾಡಿಗೆ) ಸ್ಕೂಟರ್ ಪಡೆಯಬಹುದಾಗಿದೆ. ಇನ್ನು 65,000 ರೂಪಾಯಿ ನೀಡಿ 36 ತಿಂಗಳ ಕಾಲ ಲೀಸ್‌ಗೆ ಎದರ್ ಎಲೆಕ್ಟ್ರಿಕ್ ಸ್ಕೂಟರ್ ಪಡೆಯಬಹುದು. ಈ ಮೂಲಕ ಹೊಸ ಗ್ರಾಹಕರನ್ನ ಆಕರ್ಷಿಸಿಲು ಸುಲಭ ಪ್ಲಾನ್ ಜಾರಿ ಮಾಡಿದೆ.
 

PREV
click me!

Recommended Stories

ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ
ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ