TVS ವಿಕ್ಟರ್ CBS ಬೈಕ್ ಬಿಡುಗಡೆ- ಬೆಲೆ ಎಷ್ಟು?

Published : Mar 31, 2019, 04:32 PM IST
TVS ವಿಕ್ಟರ್ CBS ಬೈಕ್ ಬಿಡುಗಡೆ- ಬೆಲೆ ಎಷ್ಟು?

ಸಾರಾಂಶ

TVS ಮೋಟಾರ್ ಕಂಪನಿ ನೂತನ ವಿಕ್ಟರ್ ಬೈಕ್ ಬೈಕ್ ಬಿಡುಗಡೆ ಮಾಡಿದೆ. ನೂತನ ನಿಯಮದ ಪ್ರಕಾರ ಗರಿಷ್ಠ ಸುರಕ್ಷತೆ ಸೌಲಭ್ಯಗಳೊಂದಿಗೆ TVS ವಿಕ್ಟರ್ ಬಿಡುಗಡೆಯಾಗಿದೆ.  ಕಡಿಮೆ ಬೆಲೆಯಲ್ಲಿ ಉತ್ತಮ ಬೈಕ್ ಖರೀದಿಸಲು ಗ್ರಾಹಕರಿಗೆ ಈಗ ಹಲವು ಆಯ್ಕೆಗಳಿವೆ. 

ಚೆನ್ನೈ(ಮಾ.31): TVS ಮೋಟಾರ್ ಕಂಪನಿ ಇದೀಗ ವಿಕ್ಟರ್ ಬೈಕ್‌ಗೆ ಹೊಸ ರೂಪ ನೀಡಿದೆ. TVS ವಿಕ್ಟರ್ ಬೈಕ್ ಇದೀಗ CBS(ಕಂಬೈಂಡ್ ಬ್ರೇಕಿಂಗ್ ಸಿಸ್ಟಮ್) ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗಿದೆ. ನೂತನ ಬೈಕ್‌ SBT(ಸಿಂಕ್ರೋನೈಸಡ್ ಬ್ರೇಕಿಂಗ್ ಸಿಸ್ಟಮ್) ತಂತ್ರಜ್ಞಾನ ಕೂಡ ಹೊಂದಿದೆ. 

ಇದನ್ನೂ ಓದಿ: ಸಂಜಯ್ ದತ್‌ 'ಹೈ-ರೇಂಜ್' ಪ್ರೀತಿ- ಮನೆಗೆ ಬಂದ ಹೊಸ ಆತಿಥಿ!

ನೂತನ ಬೈಕ್ 110 cc ಸಿಂಗಲ್-ಸಿಲಿಂಡರ್, ಆಯಿಲ್ ಕೂಲ್ಡ್, 3-ವೇಲ್ವ್ ಎಂಜಿನ್ ಹೊಂದಿದ್ದು, 9.3 bhp ಪವರ್(@7500 rpm) ಹಾಗೂ 9.4 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.  4 ಸ್ಪೀಡ್ ಗೇರ್ ‌ಬಾಕ್ಸ್ ಹೊಂದಿರು ನೂತನ ವಿಕ್ಟರ್ CSB ಇದೀಗ ಬಜಾಜ್ ಸೇರಿದಂತೆ ಇತರ ಬೈಕ್‌ಗಳಿಗೆ ತೀವ್ರ ಪೈಪೋಟಿ ನೀಡಲಿದೆ.

ಇದನ್ನೂ ಓದಿ: ಬಜಾಜ್‌ ಪ್ಲಾಟಿನಾ 100 KS ಬೈಕ್ ಬಿಡುಗಡೆ- ಬೆಲೆ ಎಷ್ಟು?

TVS ವಿಕ್ಟರ್ CBS ಬೈಕ್ ಬೆಲೆ 54,682 ರೂಪಾಯಿಂದ ₹ 57,662 ರೂಪಾಯಿ(ಎಕ್ಸ್ ಶೋ ರೂಂ).  ಟಿವಿಎಸ್ ಕಂಪನಿಯ NTorq, ಜುಪಿಟರ್, ವೆಗೋ, ಪೆಪ್+ ಹಾಗೂ ಮೊರ್ರ್ SBT ತಂತ್ರಜ್ಞಾನ ಹೊಂದಿದ್ದರೆ, TVS ಅಪಾಚೆ ABS(ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ಹೊಂದಿದೆ.

PREV
click me!

Recommended Stories

ಏಪ್ರಿಲ್ ತಿಂಗಳ ಡಿಸ್ಕೌಂಟ್ ಆಫರ್, ವೆನ್ಯೂ, ಕ್ರೆಟಾ ಸೇರಿ ಹ್ಯುಂಡೈ ಕಾರುಗಳಿಗೆ ಭಾರಿ ರಿಯಾಯಿತಿ
ಕರ್ನಾಟಕದ ಎಮೊಬಿ ಎಲೆಕ್ಟ್ರಿಕ್ ಸ್ಕೂಟರ್ ಅತೀ ಕಡಿಮೆ ಬೆಲೆಯಲ್ಲಿ ಬಿಡುಗಡೆ