ಸಂಜಯ್ ದತ್‌ 'ಹೈ-ರೇಂಜ್' ಪ್ರೀತಿ- ಮನೆಗೆ ಬಂದ ಹೊಸ ಆತಿಥಿ!

By Web Desk  |  First Published Mar 30, 2019, 6:24 PM IST

ಬಾಲಿವುಡ್ ಸ್ಟಾರ್‌ಗಳಿಗೆ 'ಹೈ ರೇಂಜ್' ಪ್ರೀತಿ ಸಾಕಷ್ಟು ಬಾರಿ ಸುದ್ದಿಯಾಗಿದೆ. ಬುಹುತೇಕ ಎಲ್ಲಾ ಬಾಲಿವುಡ್ ನಟ ನಟಿಯರು ಹೈ ರೇಂಜ್ ಪ್ರೀತಿಯಲ್ಲಿ ಮುಳುಗಿದ್ದಾರೆ. ಇದೀಗ ಸಂಜಯ್ ದತ್ ಕೂಡ ಹೈ ರೇಂಜ್ ಪ್ರೀತಿ ಬಲೆಗೆ ಸಿಕ್ಕಿಹಾಕಿಕೊಂಡಿದ್ದಾರೆ. ಹಾಗಾದರೆ ಈ ಹೈ-ರೇಂಜ್ ಪ್ರೀತಿ ಏನು? ಇಲ್ಲಿದೆ ವಿವರ.


ಮುಂಬೈ(ಮಾ.30): ಬಾಲಿವುಡ್ ಸಲೆಬೆಟ್ರಿಗಳಿಗೆ 'ಹೈ-ರೇಂಜ್' ಮೇಲೆ ಪ್ರೀತಿ ಜಾಸ್ತಿ. ಇದಕ್ಕೆ ಸಂಜಯ್ ದತ್ ಕೂಡ ಹೊರತಲ್ಲ. ಗೊಂದಲಕ್ಕೆ ಒಳಗಾಗಬೇಡಿ. ನಾವು ಹೇಳುತ್ತಿರುವುದು ರೇಂಜ್ ರೋವರ್ ಕಾರು ಪ್ರೀತಿ ಕುರಿತು. ಸಂಜಯ್ ದತ್ ಬಳಿಕ ಹಲವು ಐಷಾರಾಮಿ ಹಾಗೂ ದುಬಾರಿ ಕಾರುಗಳಿವೆ. ಅದರಲ್ಲೂ ರೇಂಜ್ ರೋವರ್ ಕಾರಿನ ಮೇಲೆ ಸಂಜಯ್ ದತ್ ಪ್ರೀತಿ ತುಸು ಹೆಚ್ಚೇ ಇದೆ. ಇದೀಗ ಸಂಜಯ್ ದತ್ ನೂತನ ರೇಂಜ್ ರೋವರ್ ವೊಗ್ಯೂ SUV ಕಾರು ಖರೀದಿಸಿದ್ದಾರೆ.

Tap to resize

Latest Videos

undefined

ಇದನ್ನೂ ಓದಿ: ತಾಯಿಗೆ 1.87 ಕೋಟಿ ರೂ ಕಾರು ಗಿಫ್ಟ್ ನೀಡಿದ ಸಲ್ಮಾನ್ - ದುಬಾರಿ ಕಾರಿನ ವಿಶೇಷತೆ ಇಲ್ಲಿದೆ!

ನೂತನ ಕಾರಿಗೆ ಸಂಜಯ್ ದತ್ ಲಕ್ಕಿ 4545 ನಂಬರ್ ರಿಜಿಸ್ಟ್ರೇಶನ್ ಮಾಡಿಸಿಕೊಂಡಿದ್ದಾರೆ. ಬಿಳಿ ಬಣ್ಣದ ನೂತನ ರೇಂಜ್ ರೋವರ್ ವೊಗ್ಯೂ ಡೀಸೆಲ್ ವೇರಿಯೆಂಟ್ ಕಾರಿನಲ್ಲಿ ಸಂಜಯ್ ದತ್ ಒಂದು ರೌಡ್ ಹೊಡೆದಿದ್ದಾರೆ. ಈ ಕಾರಿನ ಬೆಲೆ ಬರೋಬ್ಬರಿ 2.33 ಕೋಟಿ(ಎಕ್ಸ್ ಶೋ ರೂಂ). ಇದು ಭಾರತದಲ್ಲಿ ದುಬಾರಿ SUV ಕಾರು ಅನ್ನೋ ಹೆಗ್ಗಳಿಗೆಕೂ ಪಾತ್ರವಾಗಿದೆ.

ಇದನ್ನೂ ಓದಿ: ರೇಂಜ್ ರೋವರ್ ಕಾರು ಖರೀದಿಸಿದ ಕತ್ರಿನಾ ಕೈಫ್

ಸಂಜಯ್ ದತ್ ರೇಂಜ್ ರೋವರ್ ವೊಗ್ಯೂ SUV ಕಾರು  4.4-ಲೀಟರ್ SDV8, 8-ಸಿಲಿಂಡರ್ ಎಂಜಿನ್ ಹೊಂದಿದ್ದು, 335 Bhp ಪವರ್(@ 3,500 rpm) ಹಾಗೂ 740 Nm ಪೀಕ್ ಟಾರ್ಕ್(@ 1,740 rpm)ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 8 ಸ್ಪೀಡ್ ಅಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹೊಂದಿದೆ. 

click me!