ಬಜಾಜ್‌ ಪ್ಲಾಟಿನಾ 100 KS ಬೈಕ್ ಬಿಡುಗಡೆ- ಬೆಲೆ ಎಷ್ಟು?

By Web Desk  |  First Published Mar 30, 2019, 2:53 PM IST

ಬಜಾಜ್ ಪ್ಲಾಟಿನಾ ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ. ಪ್ಲಾಟಿನಾ 100 KS ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಹಲವು ವಿಶೇಷತೆ ಹಾಗೂ ಹೆಚ್ಚುವರಿ ಫೀಚರ್ಸ್ ಹೊಂದಿದೆ. ಇಲ್ಲಿದೆ ನೂತನ ಬೈಕ್ ಹೆಚ್ಚಿನ ವಿವರ.


ನವದೆಹಲಿ(ಮಾ.30):  ಬಜಾಜ್‌ ಅಟೋ ಕಂಪೆನಿ ಇದೀಗ ಕಿಕ್‌ಸ್ಟಾರ್ಟ್‌ನ ಪ್ಲಾಟಿನ 100 ಬೈಕ್‌ ಬಿಡುಗಡೆಮಾಡಿದೆ. ಇದರಲ್ಲಿ ಡಿಡಿಎಸ್‌ ತಂತ್ರಜ್ಞಾನವಿದ್ದು, ಅತ್ಯುತ್ತಮ ಮೈಲೇಜ್‌ ನೀಡುವ ಬೈಕ್‌ ಎಂದು ಕಂಪೆನಿ ಹೇಳಿಕೊಂಡಿದೆ. ಕಾಂಬಿ ಬ್ರೇಕ್‌ ಸಿಸ್ಟಮ್‌ ಇದರಲ್ಲಿದೆ. ಹಾಗಾಗಿ ಕಂಟ್ರೋಲ್‌ ಚೆನ್ನಾಗಿರುತ್ತೆ. 

ಇದನ್ನೂ ಓದಿ: ಸುಜುಕಿ ಆಕ್ಸೆಸ್ 125 CBS ಸ್ಕೂಟರ್ ಬಿಡುಗಡೆ- ಬೆಲೆ ಎಷ್ಟು?

Tap to resize

Latest Videos

undefined

ಈ ಬೈಕ್‌ಬಲ್ಲಿ ಶೇ.20ರಷ್ಟು ಜರ್ಕ್ ಕಡಿಮೆ. ರಬ್ಬರ್‌ ಫುಟ್‌ಪ್ಯಾಡ್‌ಗಳು, ಡೈರೆಕ್ಷನಲ್‌ ಟೈರ್‌ಗಳು ಮತ್ತು ಸ್ಟ್ರಿಂಗ್‌ ಹೊಂದಿದ ಮೃದುವಾದ ಸೀಟ್‌ಗಳಿವೆ. ಇದರಿಂದ ಬೈಕ್‌ ಸವಾರ ಮತ್ತು ಹಿಂಬದಿ ಸವಾರರಿಗೆ ಆರಾಮದಾಯಕ ಸವಾರಿ ಅನುಭವವಾಗುತ್ತೆ. ನೂತನ ಬಜಾಜ್‌ ಪ್ಲಾಟಿನಾ 100 KS ಬೆಲೆ 40,500 (ಎಕ್ಸ್‌ ಶೋ ರೂಂ ).

ಇದನ್ನೂ ಓದಿ: ಹುತಾತ್ಮ ಯೋಧರ ಮಕ್ಕಳಿಗಾಗಿ ಜಾವಾ ಬೈಕ್ ಹರಾಜು!
 

click me!