ಹೊಸ ಅವತಾರದಲ್ಲಿ TVS Nಟಾರ್ಕ್ 125 ಸ್ಕೂಟರ್ ಬಿಡುಗಡೆ!

By Web Desk  |  First Published Jun 25, 2019, 5:07 PM IST

2018ರಲ್ಲಿ ಮೊದಲ ಬಾರಿಗೆ  TVS Nಟಾರ್ಕ್ 125 ಸ್ಕೂಟರ್ ಬಿಡುಗಡೆಯಾಗಿತ್ತು. ಒಂದೇ ವರ್ಷದಲ್ಲಿ Nಟಾರ್ಕ್ ಜನರ ನೆಚ್ಚಿನ ಸ್ಕೂಟರ್ ಆಗಿ ಸ್ಥಾನ ಸಂಪಾದಿಸಿತು. ಇದೀಗ Nಟಾರ್ಕ್ ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ. 


ಚೆನ್ನೈ(ಜೂ.25): TVS ಮೋಟಾರ್ ಕಂಪನಿಯ Nಟಾರ್ಕ್ 125 ಸ್ಕೂಟರ್ ಹೆಚ್ಚು ಜನಪ್ರಿಯವಾಗಿದೆ. ಆಕರ್ಷಕ ವಿನ್ಯಾಸ, ಹೊಸತನ ಹಾಗೂ ಅತ್ಯುತ್ತಮ ಎಂಜಿನ್ ಸಾಮರ್ಥ್ಯ ಹೊಂದಿರುವ TVS Nಟಾರ್ಕ್ 125 , 2018-19ರಲ್ಲಿ ಪ್ರತಿಷ್ಠಿತ 9 ಪ್ರಶಸ್ತಿ ಪಡೆದಿದೆ. ಇದೀಗ TVS Nಟಾರ್ಕ್ 125  ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ. 

ಇದನ್ನೂ ಓದಿ: ಭಾರತಕ್ಕೆ ಬರುತ್ತಿದೆ ಚೀನಾದ CF ಮೋಟೋ ಬೈಕ್-ಜುಲೈನಲ್ಲಿ ಅನಾವರಣ!

Tap to resize

Latest Videos

undefined

ನೂತನ TVS Nಟಾರ್ಕ್ 125 ಹೊಸ ಬಣ್ಣದಲ್ಲಿ ಬಿಡುಗಡೆಯಾಗಿದೆ. ಮ್ಯಾಟ್ ಸಿಲ್ವರ್ ಶೇಡ್ ಕಲರ್‌ನಲ್ಲಿ ನೂತನ ಸ್ಕೂಟರ್ ಮಾರುಕಟ್ಟೆ ಪ್ರವೇಶಿಸಿದೆ. ಡಿಸ್ಕ್ ಬ್ರೇಕ್ ವೇರಿಯೆಂಟ್ ಸ್ಕೂಟರ್ ಬೆಲೆ 59,995 ರೂಪಾಯಿ(ಎಕ್ಸ್ ಶೋ ರೂಂ). ಡ್ರಂ ಬ್ರೇಕ್ ವೇರಿಯೆಂಟ್ ಬೈಕ್ ಬೆಲೆ  58,552 ರೂಪಾಯಿ(ಎಕ್ಸ್ ಶೋ ರೂಂ).

ಇದನ್ನೂ ಓದಿ: ಕಡಿಮೆ ಬೆಲೆ, ಗರಿಷ್ಠ ಮೈಲೈಜ್ BattRE ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ!

2018ರಲ್ಲಿ TVS Nಟಾರ್ಕ್ 125 ಮೊದಲ ಬಾರಿಗೆ ಬಿಡುಗಡೆಯಾಗಿತ್ತು. ಸ್ಮಾರ್ಟ್‌ಫೋನ್ ಕನೆಕ್ಟ್, ಡಿಜಿಟಲ್ ಇನ್ಸ್‌ಟ್ರುಮೆಂಟ್ ಕ್ಲಸ್ಟರ್, ಬ್ಲೂಟೂಥ್ ಕನೆಕ್ಟಿವಿಟಿ, ನಾವಿಗೇಶನ್ ಸೇರಿದಂತೆ ಹಲವು ಫೀಚರ್ಸ್ ಈ ಸ್ಕೂಟರ್‌ನಲ್ಲಿದೆ. 124.79cc, ಸಿಂಗಲ್ ಸಿಲಿಂಡರ್ ,4 ಸ್ಟ್ರೋಕ್, 3 ವೇಲ್ವ್, ಏರ್ ಕೂಲ್ಡ್ SOHC ಎಂಜಿನ್ ಹೊಂದಿದ್ದು,  9.3 bhp ಪವರ್ ಹಾಗೂ 10.5 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ.

click me!