ಹ್ಯುಂಡೈ ಕಾರಿನೊಳಗೆ ಮಗುವನ್ನು ಬಿಟ್ಟು ಖರೀದಿಗೆ ತೆರಳಿದ ಪೋಷಕರು 2 ನಿಮಿಷದಲ್ಲಿ ವಾಪಾಸ್ ಬಂದಿದ್ದಾರೆ. ಅಷ್ಟರಲ್ಲಿ ಕಾರಿನ ಡೂರ್ ಲಾಕ್ ಆಗಿದೆ. 2 ಗಂಟೆಗಳ ಬಳಿಕ ಮಗುವನ್ನು ರಕ್ಷಣೆ ಮಾಡಲಾಗಿದೆ. ಈ ವೀಡಿಯೋ ಎಲ್ಲಾ ಪೋಷಕರಿಗೆ ಎಚ್ಚರಿಕೆ ಕರೆ ಗಂಟೆ.
ಪಂಜಾಬ್(ಜೂ.24): ಮಕ್ಕಳೊಂದಿಗೆ, ಸಾಕು ಪ್ರಾಣಿಯೊಂದಿಗೆ ಕಾರು ಅಥವಾ ಯಾವುದೇ ವಾಹನ ಬಳಸುವಾಗ ಎಚ್ಚರವಹಹಿಸುವುದು ಸೂಕ್ತ. ಸಣ್ಣ ತಪ್ಪು ಭಾರಿ ಅನಾಹುತಕ್ಕೆ ಕಾರಣವಾಗಬಲ್ಲದು. ಇದೀಗ ಪಂಜಾಬ್‌ನ ನಂಗಲ್ ಬಳಿ ಮಗವೊಂದು ಕಾರಿನೊಳಗೆ ಲಾಕ್ ಆಗಿ 2 ಗಂಟೆಗಳ ಕಾಲ ಆತಂಕದ ವಾತಾವರಣ ಸೃಷ್ಠಿಯಾಗಿತ್ತು.
ಇದನ್ನೂ ಓದಿ: ಮಹೀಂದ್ರ ಕಾರು ಬೆಲೆ ಹೆಚ್ಚಳ- ಇಲ್ಲಿದೆ ನೂತನ ದರ!
undefined
ಪೋಷಕರು ತಮ್ಮ ಹ್ಯುಂಡೈ ಕ್ರೆಟಾ ಕಾರು ನಿಲ್ಲಿಸಿದಾಗ ಮಗುವನ್ನು ಕಾರಿನಲ್ಲೇ ಉಳಿದುಕೊಳ್ಳಲು ಹೇಳಿದ್ದರು. ಕೆಲ ವಸ್ತುಗಳನ್ನು ಖರೀದಿಸಿ ವಾಪಾಸ್ ಬರುವಷ್ಟರಲ್ಲೇ ಕಾರು ಲಾಕ್ ಆಗಿದೆ. ಎಂಜಿನ್ ಸ್ಟಾರ್ಟ್ ಆಗಿದ್ದ ಕಾರಣ, ಕಾರಿನ ಡೂರ್ ಲಾಕ್ ಆಗಿದೆ. ಪುಟಾಣಿ ಮಗುವಿಗೆ ಕಾರಿನ ಡೋರ್ ಅನ್‌ಲಾಕ್ ಮಾಡಲು ತಿಳಿದಿಲ್ಲ. ಇತ್ತ ಕಾರಿನ ವಿಂಡೋ ಗ್ಲಾಸ್, ಫ್ರಂಟ್ ಗ್ಲಾಸ್ ಒಡೆಯಲು ಹಲವು ಪ್ರಯತ್ನ ಮಾಡಿದ್ದಾರೆ. ಆದರೆ ಯಾವುದೂ ಕೂಡ ಸಾಧ್ಯವಾಗಿಲ್ಲ.
ಇದನ್ನೂ ಓದಿ: ಮಾರುತಿ ಡಿಸೈರ್ BS-VI ಕಾರು ಬಿಡುಗಡೆ- ಬೆಲೆ ಬದಲಾವಣೆ!
ಕೊನೆಗೆ ಯಾವ ದಾರಿ ಕಾಣದಿದ್ದಾಗ, ಮಗುವಿನ ತಂದೆ ಬೈಕ್ ಏರಿ ಮನೆಗೆ ತೆರಳಿ ಡೂಪ್ಲಿಕೇಟ್ ಕೀ ತಂದು ಕಾರಿನ ಡೂರ್ ತೆರೆದಿದ್ದಾರೆ. ಈ ಮೂಲಕ ಮಗುವನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಆದರೆ 2 ಗಂಟೆಗಳ ಕಾಲ ಮಗು ಕಾರಿನೊಳಗೆ ಯಾತನೆ ಅನುಭವಿಸಿತ್ತು. ಕಾರಿನ ಎಂಜಿನ್ ಸ್ಟಾರ್ಟ ಆಗಿದ್ದರಿಂದ ಎಸಿ ಕೂಡ ಆನ್ ಆಗಿತ್ತು. ಹೀಗಾಗಿ ಮಗುವಿನ ಉಸಿರಾಟಕ್ಕೆ ಹೆಚ್ಚಿನ ಸಮಸ್ಯೆ ಆಗಿಲ್ಲ. ಆದರೆ ಸುತ್ತಲು ಹೆಚ್ಚಿನ ಜನರು ಜಮಾಯಿಸಿದ ಕಾರಣ ಮಗು ಗಾಬರಿಯಾಗಿತ್ತು.ಇನ್ನು ಮಗುವಿನ ತಾಯಿ ಆತಂಕಕ್ಕೊಳಗಾಗಿ ಅಳುತ್ತಿದ್ದಾಗ, ಕಾರಿನೊಳಗಿದ್ದ ಮಗು ಕೂಡ ಅಳಲು ಆರಂಭಿಸಿತು.
ತುರ್ತು, ಸಮಯದ ಅಭಾವ, ಶಾಪಿಂಗ್, ಖರೀದಿ ಸೇರಿದಂತೆ ಹಲವು ಕಾರಣಗಳನ್ನು ನೀಡಿ ಮಕ್ಕಳನ್ನು ಕಾರಿನಲ್ಲಿ ಬಿಟ್ಟು ಬಿಡುವ ಪರಿಪಾಠ ಹಲವರಿಗಿದೆ. ಆದರೆ ಮಕ್ಕಳನ್ನು, ಸಾಕು ಪ್ರಾಣಿಗಳನ್ನು ಕಾರಿನಲ್ಲಿ ಬಿಟ್ಟು ಬಿಡುವುದು ಸೂಕ್ತವಲ್ಲ. ಕಾರಿನ ಎಂಜಿನ್ ಆನ್ ಇರಲಿ, ಆಫ್ ಇರಲಿ, ಒಬ್ಬರೇ ಕಾರಿನೊಳಗೆ ಬಿಡಬೇಡಿ. ಯಾವುದೇ ಕ್ಷಣದಲ್ಲೂ ಅಪಾಯ ತಪ್ಪಿದ್ದಲ್ಲ.