ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಟೊಯೋಟಾ ಕಿರ್ಲೋಸ್ಕರ್ ನೆರವು ಮುಂದುವರಿಸಿದೆ. ಇದೀಗ ಕರ್ನಾಟಕ ಆರೋಗ್ಯ ಇಲಾಖೆಗೆ ಸಹಾಯ ಹಸ್ತ ಚಾಚಿದೆ. ಆರೋಗ್ಯ ಸೇವೆಗೆ ಹಾಗೂ ಆರೋಗ್ಯ ಸಿಬ್ಬಂದಿಗೆ ಟೊಯೋಟಾ ಕಿರ್ಲೋಸ್ಕರ್ ನೆರವಿನ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಬೆಂಗಳೂರು(ಏ.10): ದೇಶದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ದಿನೆದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪರಿಣಾಮಕಾರಿ ಸೋಂಕು ನಿಯಂತ್ರಣಕ್ಕೆ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಮತ್ತಷ್ಟು ನೆರವು ನೀಡಲು, ಕೋವಿಡ್ ವಿರುದ್ಧದ ಆರೋಗ್ಯ ಸೇವೆಗೆ ತನ್ನ 14 ಬಸ್‍ಗಳನ್ನು ನಿಯೋಜಿಸುವುದರ ಜೊತೆಗೆ ಆರೋಗ್ಯ ಸಿಬ್ಬಂದಿಗೆ ಆತ್ಮರಕ್ಷಣಾ ಕವಚಗಳನ್ನು ಹಸ್ತಾಂತರಿಸಿದೆ.
ಟೊಯೋಟಾ ಇನ್ನೋವಾ ಕ್ರಿಸ್ಟಾ ಲೀಡರ್‌ಶಿಪ್ ಆವೃತ್ತಿ; ಈ ಕಾರಿಗೆ ಸರಿಸಾಟಿ ಇಲ್ಲ
undefined
ಸಾಂಕ್ರಾಮಿಕ ರೋಗಗಳ ವಿರುದ್ಧದ ಹೋರಾಟದಲ್ಲಿ ಸರ್ಕಾರ ಎಲ್ಲಾ ರೀತಿಯಲ್ಲೂ ಹೋರಾಟ ಮುಂದುವರೆಸಿದೆ. ಈ ಹೋರಾಟದಲ್ಲಿ ವೈದ್ಯರು, ಅರೆವೈದ್ಯಕೀಯ ಮತ್ತು ಆಸ್ಪತ್ರೆಯ ಇತರ ಸಿಬ್ಬಂದಿಗಳು, ಆರೋಗ್ಯ ಕಾರ್ಯಕರ್ತರು ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿದ್ದಾರೆ. ವೈದ್ಯಕೀಯ ಸಿಬ್ಬಂದಿಯ ಆರೋಗ್ಯ ರಕ್ಷಣೆಯೂ ಅತೀ ಮುಖ್ಯ. ಇದನ್ನು ಅರಿತ ಟೊಯೋಟಾ ಮೋಟಾರ್ಸ್ ಆರೋಗ್ಯ ಇಲಾಖೆಯ ಕಾರ್ಯಪಡೆ ಸಂಚಾರಕ್ಕೆ ನೆರವಾಗಲು 14 ಬಸ್‍ಗಳನ್ನು ನಿಯೋಜಿಸಿದ್ದು, ಇದರ ಜೊತೆಗೆ ಆರೋಗ್ಯ ಸಿಬ್ಬಂದಿಯ ವೈಯಕ್ತಿಕ ರಕ್ಷಣೆಗೆ 1000 ಆತ್ಮರಕ್ಷಣಾ ಕವಚಗಳನ್ನು ವಿತರಿಸಿದೆ.
ನಟ ಮೋಹನ್‌ಲಾಲ್ ಕೈಸೇರಿತು ಮೊದಲ ಟೊಯೊಟಾ ವೆಲ್‌ಫೈರ್ ಕಾರು!
ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗೆ (ಬಿಎಂಸಿಆರ್‍ಐ) 10 ಬಸ್ಸುಗಳನ್ನು ನಿಯೋಜಿಸಿದೆ. ಟೊಯೋಟಾ ಮೊಬಿಲಿಟಿ ಫೌಂಡೇಶನ್ (ಟಿಎಂಎಫ್) ರಾಮನಗರ ಜಿಲ್ಲೆಯ ಆರೋಗ್ಯ ಇಲಾಖೆಗೆ 4 ಬಸ್ಸುಗಳನ್ನು ನಿಯೋಜಿಸಿದೆ. ಆರೋಗ್ಯ ಕಾರ್ಯಕರ್ತರ ಅನುಕೂಲಕ್ಕೆ ಮತ್ತು ಸುವ್ಯವಸ್ಥಿತ ಸಂಚಾರ ವ್ಯವಸೆ, ತ್ವರಿತ ಚಿಕಿತ್ಸಾ ಔಷಧಿ ಸರಬರಾಜು ಸೇರಿದಂತೆ ಪರಿಣಾಮಕಾರಿ ಆರೋಗ್ಯ ಸೇವೆಗೆ ಬಸ್‍ಗಳು ನೆರವಾಗಲಿವೆ. ಈ ಬಸ್‍ಗಳು ಏಪ್ರಿಲ್ 30ವರೆಗೆ ದಿನದ 24 ಗಂಟೆಗಳೂ ಸೇವೆಗೆ ಲಭ್ಯವಿರಲಿವೆ.
ಮೋದಿ ಕನಸಿಗೆ ಕೈಜೋಡಿಸಿದ ಟೊಯೊಟಾ, ಮಹೀಂದ್ರ!
ದಾದಿಯರು, ಆರೋಗ್ಯ ಭದ್ರತಾ ತಂಡ ಮತ್ತು ಇತರ ಸಾರ್ವಜನಿಕ ಆರೋಗ್ಯ ಕಾರ್ಯಕರ್ತರು ರಕ್ಷಣೆಯಾಗಿ 1000 ಹಜ್ಮತ್ ಸೂಟ್‍ಗಳನ್ನು ನೀಡಿದ್ದು, ಇಂದು ಬೆಂಗಳೂರು ವೈದ್ಯಕೀಯ ನಿರ್ದೇಶಕ ಮತ್ತು ಪ್ರಾಂಶುಪಾಲರಾದ ಡಾ. ಸಿ ಆರ್ ಜಯಂತಿ ಅವರಿ ಆರೋಗ್ಯ ರಕ್ಷಣಾ ಕವಚಗಳನ್ನು ಹಸ್ತಾಂತರಿಸಲಾಯಿತು. ಅಲ್ಲದೆ ಶೀಘ್ರದಲ್ಲೇ 2000 ಸೂಟ್‍ಗಳನ್ನು ಟಿಕೆಎಂ ಹಸ್ತಾಂತರಿಸಲಿದೆ.
ಅನಿಶ್ಚಿತ ಮತ್ತು ಸಾಮಾಜಿಕ ಸಾಮಾಜಿಕ ತೊಂದರೆಯ ಸಂದರ್ಭದಲ್ಲಿ, ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಜವಾಬ್ದಾರಿಯುತ ಮತ್ತು ಬದ್ಧ ಕಾಪೆರ್Çರೇಟ್ ಆಗಿ ಸೋಂಕು ನಿಯಂತ್ರಣಕ್ಕೆ ಸಹಕಾರ ನೀಡಲಿದೆ. ತುರ್ತು ಸಂದರ್ಭವನ್ನು ನಿಭಾಯಿಸಲು ಕರ್ನಾಟಕ ಸರ್ಕಾರಕ್ಕೆ ತನ್ನ ಬೆಂಬಲವನ್ನು ಮುಂದುವರೆಸುವ ಸಂಕಲ್ಪವನ್ನು ಟಿಕೆಎಂ ಮಾಡಿದೆ ಎಂದು ಟಿಕೆಎಂನ ಮುಖ್ಯಸ್ಥರು ವಿಕ್ರಂ ಗುಲಾಟಿ ಹೇಳಿದ್ದಾರೆ.
ಸಾರ್ವಜನಿಕರ ಆರೋಗ್ಯ ಸುರಕ್ಷತೆ ಒದಗಿಸುವ ಟಿಕೆಎಂ ಧ್ಯೆಯವಾಕ್ಯವು ಎಂದಿಗೂ ಕೊನೆಗೊಳ್ಳುವುದಿಲ್ಲ. ಕೇವಲ ಟೊಯೋಟಾ ವ್ಯಾಪ್ತಿಯಲ್ಲದೇ ಎಲ್ಲಾ ಕ್ಷೇತ್ರಗಳಲ್ಲೂ ಎಲ್ಲಾ ವರ್ಗಗಳಿಗೂ ನೆರವು ನೀಡಲಿದೆ ಎಂದು ವಿವರಿಸಿದ ಅವರು, ಇಂತರ ಸಂದರ್ಭದಲ್ಲಿ ಪರಸ್ಪರ ಸಹಕಾರ ಮಹತ್ವವನ್ನು ಅರಿತ ಟಿಕೆಎಂ ಸರ್ಕಾರದೊಂದಿಗೆ ಕೈ ಜೋಡಿಸಿ ಕೆಲಸ ಮಾಡುತ್ತಿದೆ ಎಂದು ವಿವರಿಸಿದರು.
ಕೋವಿಡ್-19 ಸೋಂಕು ನಿಯಂತ್ರಣದ ಬಗ್ಗೆ ಸಮುದಾಯದಲ್ಲಿ ಆಗುತ್ತಿರುವ ಎಲ್ಲಾ ಬದಲಾವಣೆಗಳನ್ನು ಟಿಕೆಎಂ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಸಮಾಜದ ಆರೋಗ್ಯ ರಕ್ಷಣೆಗೆ ಪರಿಹಾರೋಪಾಯ ಕಂಡುಕೊಳ್ಳಲು ಅಗತ್ಯ ಕ್ರಮ ತೆಗೆದುಕೊಳ್ಳುತ್ತಿದೆ. ಟಿಎಂಎಫ್ ಅನ್ನು ಪ್ರತಿನಿಧಿಸುತ್ತಾ, ಏಷ್ಯಾ ಪ್ರದೇಶದ ಕಾರ್ಯಕ್ರಮ ನಿರ್ದೇಶಕ ಪ್ರಸೇಶ ಗಣೇಶ್ ಅವರು ಈ ಕುರಿತು ಮಾತನಾಡಿ, ಪರಿಸ್ಥಿತಿಯನ್ನು ನಿಭಾಯಿಸಲು ಆರೋಗ್ಯ ಕಾರ್ಯಕರ್ತರಿಗೆ ಅತ್ಯಗತ್ಯ ನೆರವನ್ನು ನೀಡಲಿದ್ದು, ಇದು ನಮ್ಮ ಗುರಿಯೂ ಹೌದು. ಈ ಅನಿಶ್ಚಿತ ಸಮಯದಲ್ಲಿ ಆರೋಗ್ಯ ಸಿಬ್ಬಂದಿ ಸುರಕ್ಷಿತ, ತ್ವರಿತ ಮತ್ತು ಉಚಿತ ಪ್ರಯಾಣವನ್ನು ಹೊಂದಲು ಅವರಿಗೆ ಅನುವು ಮಾಡಿಕೊಡುತ್ತದೆ ಎಂದರು.
ಆಗ್ನೇಯ ಏಷ್ಯಾದ ದೇಶಗಳಲ್ಲೂ ಇದೇ ರೀತಿಯ ಸೇವೆಯನ್ನು ಮುಂದುವರಿಸುತ್ತಿದ್ದು, ಕೊರೊನಾ ವಿರುದ್ಧದ ಯುದ್ಧದಲ್ಲಿ ಮುಂಚೂಣಿಯಲ್ಲಿರುವ ಈ ವೀರರರ ಆರೋಗ್ಯ ರಕ್ಷಣೆ ಜೊತೆಗೆ ಇತರ ನೆರವು ನೀಡುತ್ತೇವೆ ಎಂದರು. ಟಿಕೆಎಂ ಇತ್ತೀಚೆಗೆ 1000 ಅಗತ್ಯ ಕಿಟ್‍ಗಳು ಮತ್ತು ಆಹಾರ ಸಾಮಗ್ರಿಗಳನ್ನು ವಿತರಿಸಿತು. ದೈನಂದಿನ ಕೂಲಿ ಕಾರ್ಮಿಕರು, ಸಮುದಾಯದಲ್ಲಿ 5000 ಕ್ಕೂ ಹೆಚ್ಚು ಸದಸ್ಯರಿಗೆ ಪ್ರಯೋಜನ ದೊರೆತಿದೆ. ಅಲ್ಲದೇ ಟಿಕೆಎಂ ಐಕೇರ್ ( ಉದ್ಯೋಗಿ ಸ್ವಯಂಸೇವಕ ವೇದಿಕೆ)ಯ ಸ್ವಯಂ ಸೇವಕರು ಡಿಜಿಟಲ್ ಫ್ಲಾಟ್‍ಫಾರ್ಮ್‍ಗಳನ್ನು ಬಳಸಿಕೊಂಡು ನೈರ್ಮಲ್ಯ ಅಭ್ಯಾಸಗಳು, ಕೋವಿಡ್-19 ಜಾಗೃತಿ, ನಿಯಂತ್ರಣ ತಂತ್ರಗಳ ಬಗ್ಗೆ ಎಲ್ಲೆಡೆ ಜಾಗೃತಿ ಮೂಡಿಸಲಾಗುತ್ತಿದೆ.