ಕಾರು ನಿಲ್ಲಿಸುವಾಗ ಕ್ಲಚ್ ಮೊದಲೋ, ಬ್ರೇಕ್ ಮೊದಲೋ? ಯಾವುದು ಉತ್ತಮ ವಿಧಾನ? ಇಲ್ಲಿದೆ ಟಿಪ್ಸ್!

By Suvarna NewsFirst Published Apr 8, 2020, 8:24 PM IST
Highlights

ಕಾರು ಕಲಿಯುತ್ತಿರುವವರು ಹಾಗೂ ಕಲಿತ ಅನೇಕರಲ್ಲಿ ಈ ಗೊಂದಲ ಇದ್ದೇ ಇದೆ. ಕಾರು ನಿಲ್ಲಿಸುವಾಗ ಬ್ರೇಕ್ ಮೊದಲೋ ಅಥವಾ ಕ್ಲಚ್ ಮೊದಲೋ ಅನ್ನೋ  ಕನ್ಫ್ಯೂಸ್? ಹಲವರು ತಾವು ಅಭ್ಯಾಸ ಮಾಡಿದಂತೆ ಮಾಡುತ್ತಾರೆ. ಆದರೆ ಕಾರಿನ ಎಂಜಿನ್‌‍ಗೆ ಯಾವುದೇ ಸಮಸ್ಯೆಯಾಗದಂತೆ ಕಾರು ಚಲಾಯಿಸಲು ಯಾವ ವಿಧಾನ ಉತ್ತಮ? ಇಲ್ಲಿದೆ ಟಿಪ್ಸ್!

ಬೆಂಗಳೂರು(ಏ.08): ಕಾರು ನಿಲ್ಲಿಸುವಾಗ ಕ್ಲಚ್ ಮೊದಲೋ, ಬ್ರೇಕ್ ಮೊದಲೋ ? ಸಣ್ಣ ವಿಷಯವಾದರೂ, ಗಂಭೀರವಾಗಿದೆ.  ಕಾರಣ ಸಣ್ಣ ತಪ್ಪಿನಿಂದ ಕಾರಿನ ಆಯಸ್ಸು ಕಡಿಮೆಯಾಗಲಿದೆ. ಅಲ್ಲದೇ ಸರಿಯಾದ ಸಮಯದಲ್ಲಿ ಕಾರು ಕೈಕೊಡಲಿದೆ. ಹೀಗಾಗಿ ಕಾರಿನ ಸಣ್ಣ ಸಣ್ಣ ವಿಚಾರಗಳನ್ನು ಸೂಕ್ಷ್ಮವಾಗಿ ಹಾಗೂ ಸರಿಯಾದ ವಿಧಾನದಲ್ಲಿ ಬಳಕೆ ಮಾಡುವುದು ಉತ್ತಮ. ಕಾರು ನಿಲ್ಲಿಸುವಾಗ ಕ್ಲಚ್ ಮೊದಲೋ ಅಥವಾ ಬ್ರೇಕ್ ಮೊದಲೋ ಅನ್ನೋ ವಿಚಾರ ತಿಳಿದುಕೊಳ್ಳುವುದು ಉತ್ತಮ. 

ಲಾಕ್‌ಡೌನ್ ವೇಳೆ ನಿಮ್ಮ ಕಾರು ನಿರ್ವಹಣೆ ಹೇಗೆ? ಪಾಲಿಸಿ 5 ಸೂತ್ರ!..

ಎಂಜಿನ್, ಗೇರ್‌ಬಾಕ್ಸ್ ಹಾಗೂ ಚಕ್ರಗಳ ನಡುವೆ ಕ್ಲಚ್ ಕೊಂಡಿಯಾಗಿ ಕೆಲಸ ಮಾಡುತ್ತದೆ. ಕ್ಲಚ್ ಒತ್ತಿದಾಗ ಗೇರ್‌ಬಾಕ್ಸ್‌ನಿಂದ ಚಕ್ರಗಳನ್ನು ಸ್ವತಂತ್ರವಾಗಿಸುತ್ತದೆ. ಕಾರು ನಿಲ್ಲಿಸುವಾಗ ಕ್ಲಚ್ ಹಿಡಿಯದೇ ಬ್ರೇಕ್ ಮಾತ್ರ ಹಿಡಿದರೆ ಕಾರು ನಿಲ್ಲುತ್ತದೆ. ಆದರೆ ಎಂಜಿನ್‌ಗೆ ಸಮಸ್ಯೆ ಎದುರಾಗುತ್ತದೆ. ಕಾರಣ ಬ್ರೇಕ್‌ನಿಂದ ಕಾರು ನಿಲ್ಲುತ್ತದೆ ಆದರೆ ಎಂಜಿನ್ ಕಾರನ್ನು ಚಲಿಸುವಂತೆ ತಳ್ಳುತ್ತದೆ. ಇದು ಅಪಾಯ. ಹೀಗಾಗಿ ಕಾರು ನಿಲ್ಲಿಸುವಾಗ ಕ್ಲಚ್ ಮೊದಲೋ ಅಥವಾ ಬ್ರೇಕ್ ಮೊದಲೋ ಅನ್ನೋ ಗೊಂದಲಕ್ಕೆ ಇಲ್ಲಿದೆ ಉತ್ತರ.

ಲಾಂಗ್ ಬೈಕ್ ರೈಡ್‌ಗೆ ಸಿದ್ಧತೆ ಹೇಗಿರಬೇಕು? ಇಲ್ಲಿದೆ ಸುಲಭ ಟಿಪ್ಸ್

ಅತೀ ಕಡಿಮೆ ವೇಗದಲ್ಲಿ; ಮೊದಲು ಕ್ಲಚ್ ಬಳಿಕ ಬ್ರೇಕ್:
ಕಾರು ಅತೀ ಕಡಿಮೆ ವೇಗದಲ್ಲಿ ಚಲಿಸುತ್ತಿರುವಾಗ ಅಂದರೆ 1 ಗೇರ್, ಅಥವಾ 2ನೇ ಗೇರ್‌ನಲ್ಲಿರುವಾಗ ವಾಹನ ನಿಧಾನವಾಗಿ ಚಲಿಸುತ್ತಿರುತ್ತದೆ. ಉದಾಹರಣೆಗೆ ಮೊದಲ ಗೇರ್‌ನಲ್ಲಿ ಕಾರಿನ ಸರಾಸರಿ ವೇಗ 10KMPH ಇದ್ದರೆ, ನೀವು ಚಲಾಯಿಸುತ್ತಿರುವ ಕಾರ 8KMPH ಇದ್ದರೆ ಮೊದಲು ಕ್ಲಚ್ ಹಾಗೂ ಬಳಿಕ ಬ್ರೇಕ್ ಹಾಕಿ ನಿಲ್ಲಿಸಬೇಕು. ಸಾಮಾನ್ಯವಾಗಿ ಟ್ರಾಫಿಕ್ ರಸ್ತೆಗಳಲ್ಲಿ, ನಗರ ಪ್ರದೇಶಗಳಲ್ಲಿ ಈ ರೀತಿಯ ಚಲನೆ ಹಾಗೂ ಅಭ್ಯಾಸ ಅವಶ್ಯಕ.

ದಿಢೀರ್ ನಿಲ್ಲಿಸಬೇಕು ಎಂದಾಗ; ಕ್ಲಚ್ ಹಾಗೂ ಬ್ರೇಕ್ ಜೊತೆಗೆ
ತುರ್ತು ಪರಿಸ್ಥಿತಿ ಎದುರಾದಾಗ ಅಂದರೆ ಕಾರು ಚಲಿಸುತ್ತಿರುವಾಗ ದಿಢೀರ್ ಆಗಿ ಪ್ರಾಣಿಗಳು ಅಥವಾ ಯಾರಾದರೂ ಅಡ್ಡ ಬಂದಾಗ ತಕ್ಷಣವೇ ಕಾರು ನಿಲ್ಲಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಈ ವೇಳೆ ಕ್ಲಚ್ ಹಾಗೂ ಬ್ರೇಕ್ ಎರಡನ್ನೂ ಜೊತೆಯಾಗಿ ಹಾಕಿದರೆ ಕಾರಿನ ಎಂಜಿನ್‌ಗೆ ಯಾವುದೇ ಅಪಾಯ ಎದುರಾಗುವುದಿಲ್ಲ, ಇಷ್ಟೇ ಅಲ್ಲ ಕಾರನ್ನು ಸುಲಭವಾಗಿ ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದು.

ಅತೀ ವೇಗದಲ್ಲಿ: ಮೊದಲು ಬ್ರೇಕ್ ಬಳಿಕ ಕ್ಲಚ್;
ವೇಗವಾಗಿ ಚಲಿಸುತ್ತಿರುವಾಗ ಕಾರನ್ನು ನಿಲ್ಲಿಸಬೇಕು ಎಂದಾಗ ಅಂದರೆ 80KMPH ವೇಗದಲ್ಲಿ ಕಾರು ಚಲಿಸುತ್ತಿರುವಾಗ ಕಾರನ್ನು ನಿಲ್ಲಿಸಬೇಕು ಎಂದರೆ ಮೊದಲು ಬ್ರೇಕ್ ಪೆಡಲ್ ಬಳಕೆ ಮಾಡಿ. ಟಾಪ್‌ ಗೇರ್‌ನಲ್ಲೇ ಕಾರಿನ ವೇಗ ಕಡಿಮೆಯಾಗುತ್ತಾ ಬರುತ್ತದೆ. ಕಾರಿನ ವೇಗ ಕಡಿಮೆಯಾಗುತ್ತಾ ಬಂದ ಹಾಗೆ ಅಂದರೆ 15kmphಗೆ ಬಂದಾಗ ಕ್ಲಚ್ ಕೂಡ ಅಪ್ಲೈ ಮಾಡಬೇಕು. ಹೀಗೆ ಮಾಡುವುದರಿಂದ ಕಾರಿನ ಎಂಜಿನ್ ಹಾಗೂ ಮೆಕಾನಿಕ್ ಭಾಗಗಳಿಗೆ ಯಾವುದೇ ಅಪಾಯವಿಲ್ಲ.

ತಾತ್ಕಾಲಿಕವಾಗಿ ವೇಗ ಕಡಿಮೆ ಮಾಡಲು; ಕೇವಲ ಬ್ರೇಕ್ ಮಾತ್ರ
ವೇಗವಾಗಿ ಚಲಿಸುತ್ತಿರುವಾಗ ದಿಢೀರ್ ಪಥ ಬದಲಿಸಬೇಕು ಅಥವಾ ಕಾರಿನ ವೇಗ ಕಡಿಮೆ ಮಾಡಬೇಕು ಎಂದಾಗ ಬ್ರೇಕ್ ಅಪ್ಲೈ ಮಾಡಬೇಕು. ಉದಾಹರಣೆಗೆ 100 ಕಿ.ಮೀ ವೇಗದಲ್ಲಿ ಚಲಿಸುತ್ತಿರುವಾಗ ತಿರುವು ಅಥವಾ ಇನ್ಯಾವುದೋ ಕಾರಣಕ್ಕೆ ಕಾರಿನ ವೇಗ ಕಡಿಮೆ ಮಾಡಬೇಕು ಎಂದರೆ ಬ್ರೇಕ್ ಅಪ್ಲೈ ಮಾಡಿ. ಆದರೆ ಟಾಪ್‌ಗೇರ್‌ನ ಕನಿಷ್ಠ ವೇಗಕ್ಕಿಂತ ಕಡಿಮೆ ಮಾಡಬೇಕು ಎಂದರೆ ಕ್ಲಚ್ ಅವಶ್ಯಕ. ಇಲ್ಲವಾದಲ್ಲಿ 100ರ ವೇಗದಿಂದ 80, 60, 50ರ ವೇಗಕ್ಕೆ ಕಡಿತಗೊಳಿಸಿ ಬಳಿಕ ವೇಗ ಹೆಚ್ಚಿಸುವುದಿದ್ದರೆ ಕೇವಲ ಬ್ರೇಕ್ ಮಾತ್ರ ಸಾಕು,
 

click me!