ವೆಡ್ಡಿಂಗ್ ಆ್ಯನಿವರ್ಸರಿಗೆ ದುಬಾರಿ ಗಿಫ್ಟ್; ಉಡುಗೊರೆ ಪಡೆದು ದಾಖಲೆ ಬರೆದ ಪತ್ನಿ!

By Suvarna NewsFirst Published Apr 10, 2020, 3:14 PM IST
Highlights

ಮದುವೆಯಾದವರಿಗೆ  ವೆಡ್ಡಿಂಗ್ ಆ್ಯನಿವರ್ಸರಿ ಸ್ಪೆಷಲ್. ಹಲವು ಗಂಡಂದಿರುವ ಮದವೆ ದಿನಾಂಕವನ್ನೇ ಮರೆತು ಬಿಡುತ್ತಾರೆ. ಆದರೆ ಪತ್ನಿಯರು ಹಾಗಲ್ಲ, ಎಲ್ಲೂವ ಕಂಪ್ಯೂಟರೈಸಡ್ ಆಗಿರುತ್ತೆ. ಮರೆತು ಹೋದರೆ ಕತೆ ಮುಗಿಯಿತು. ಇದು ಬಹುತೇಕರ ಸಮಸ್ಯೆ. ಇನ್ನು ಹಲವರು ತಮ್ಮ ವೆಡ್ಡಿಂಗ್ ಆ್ಯನಿವರ್ಸಿಗೆ 6 ತಿಂಗಳ ಮೊದಲೇ ಪ್ಲಾನ್ ಮಾಡುತ್ತಾರೆ. ಸರ್ಪ್ರೈಸ್ ಗಿಫ್ಟ್ ನೀಡೋ ಮೂಲಕ ಪತ್ನಿ ಸಂತಸ ಡಬಲ್ ಮಾಡುತ್ತಾರೆ. ಹೀಗೆ ಪತ್ನಿಗೆ ಸರ್ಪ್ರೈಸ್ ಮಾತ್ರವಲ್ಲ ದುಬಾರಿ ಗಿಫ್ಟ್ ನೀಡಿ ವಿಶ್ವದಲ್ಲೇ ಸದ್ದು ಮಾಡುತ್ತಿದ್ದಾರೆ. 

ಕೆನಡ(ಏ.09): ವೆಡ್ಡಿಂಗ್ ಆ್ಯನಿವರ್ಸಿ ಸ್ಪೆಷಲ್, ಇನ್ನು ಸಿಲ್ವರ್ ಜುಬಿಲಿ ಅಂದ್ರೇ ಕೇಳ್ಬೇಕಾ? 25 ವರ್ಷ ಜೊತೆಯಾಗಿ ಹೆಜ್ಜೆಹಾಕಿದ ಮೇಲೆ ವಿಶೇಷವಾಗಿ ಆಚರಿಸದಿದ್ದರೆ ಹೇಗೆ? ಹೀಗೆ ಭಾರತೀಯ ಮೂಲದ ಕೆನಡ ಪ್ರಜೆ ಫಿಲಿಪ್ ತಮ್ಮ 25ನೇ ವರ್ಷದ ವೆಡ್ಡಿಂಗ್ ಆ್ಯನಿವರ್ಸರಿಗೆ ಪತ್ನಿ ಆ್ಯನ್ನಿಗೆ ವಿಶೇಷ ಉಡುಗೊರೆ ನೀಡಿದ್ದಾರೆ. ಫಿಲಿಪ್ ನೀಡಿದ ಉಡುಗೊರೆ ಮೊತ್ತ ಸರಿಸುಮಾರು 10 ಕೋಟಿ ರೂಪಾಯಿ.

ಕಾರು ನಿಲ್ಲಿಸುವಾಗ ಕ್ಲಚ್ ಮೊದಲೋ, ಬ್ರೇಕ್ ಮೊದಲೋ? ಯಾವುದು ಉತ್ತಮ ವಿಧಾನ? ಇಲ್ಲಿದೆ ಟಿಪ್ಸ್!

ಮಾರ್ಚ್ 30 ರಂದು ಫಿಲಿಪ್ ಹಾಗೂ ಆ್ಯನ್ನಿ ಫಿಲಿಪ್ ಮದುವೆಯಾಗಿ 25 ವರ್ಷ ಪೂರೈಸಿದ್ದಾರೆ. ಕೆನಡದಲ್ಲಿ ನೆಲೆಸಿರುವ ಈ ದಂಪತಿ ಕಳೆದ 25 ವರ್ಷಗಳಲ್ಲಿ ನೋವು ನಲಿವುಗಳನ್ನು ಜೊತೆಯಾಗಿ ಹಂಚಿಕೊಂಡಿದ್ದಾರೆ. ತನ್ನ ಪ್ರತಿ ಹೆಜ್ಜೆಗೂ ಬೆನ್ನೆಲುಬಾಗಿ ನಿಂತ ಪತ್ನಿಗೆ ವಿಶೇಷ ಉಡುಗೊರೆ ನೀಡಲು ಫಿಲಿಪ್ 6 ತಿಂಗಳ ಹಿಂದೆಯೇ ಪ್ಲಾನ್ ಮಾಡಿದ್ದರು. ಇದಕ್ಕಾಗಿ ರೋಲ್ಸ್ ರಾಯ್ಸ್ ಕಲ್ಲಿನಾನ್ ಕಾರು ಬುಕ್ ಮಾಡಿದ್ದಾರೆ.

CVT ಎಂಬ ಅಟೋಮ್ಯಾಟಿಕ್ ಲೋಕದಲ್ಲಿ ಬೆಸ್ಟ್ ರೈಡಿಂಗ್ ಮಾಡಿ!...
 

ವೆಡ್ಡಿಂಗ್ ಆ್ಯನಿವರ್ಸರಿ ದಿನ ಪತಿರಾಯ, ರೋಲ್ಸ್ ರಾಯ್ಸ್ ಕಲ್ಲಿನಾನ್ ಕಾರು ಪತ್ನಿಗೆ ಉಡುಗೊರೆಯಾಗಿ ನೀಡಿದ್ದಾರೆ. ಭಾರತದಲ್ಲಿ ಇದರ ಎಕ್ಸ್ ಶೋ ರೂಂ ಬೆಲೆ 6.95 ಕೋಟಿ ರೂಪಾಯಿ. ಇದರ ಆನ್‌ರೋಡ್ ಬೆಲೆ ಸರಿಸುಮಾರು 10 ಕೋಟಿ. ಇನ್ನು ಈ ಕಾರಿಗೆ ವಿಶೇಷ ನಂಬರ್ ರಿಜಿಸ್ಟ್ರೇಶನ್ ಮಾಡಿಸಿದ್ದಾರೆ. ANIE-1 ನಂಬರ್ ಪಡೆಯಲು ದುಬಾರಿ ಮೊತ್ತ ನೀಡಲಾಗಿದೆ.

ಫಿಲಿಪ್ ದುಬಾರಿ ಗಿಫ್ಟ್ ಸುದ್ದಿಯಾಗುತ್ತಿದ್ದಂತೆ, ಇದೀಗ ಎಲ್ಲಾ ಪತ್ನಿಯರು ತಮ್ಮ ತಮ್ಮ ಪತಿಗೆ ಫಿಲಿಪ್ ಕತೆ ಹೇಳುತ್ತಿದ್ದಾರೆ. ನಮಗಿದು ದುಬಾರಿ ಗಿಫ್ಟ್ ಆದರೆ ಫಿಲಿಪ್ ಕುಟುಂಬಕ್ಕಲ್ಲ. ಕಾರಣ ಕೇರಳ ಮೂಲದ ಫಿಲಿಪ್, ಕೆನಡದಲ್ಲಿ ಆಗರ್ಭ ಶ್ರೀಮಂತ. ಕೆನಡಾದಲ್ಲಿ ಹಮ್ಮರ್ H2, ಪೊರ್ಶೆ, ಲೆಕ್ಸಾಸ್ ಕಾರು ಹೊಂದಿರುವ ಫಿಲಿಪ್ ಕೇರಳದಲ್ಲಿ ಮರ್ಸಡೀಸ್ ಬೆಂಝ್  GL350 ಕಾರು ಸೇರಿದಂತೆ ಇತರ ಲಕ್ಸುರಿ ಕಾರು ಹೊಂದಿದ್ದಾರೆ.

ಫಿಲಿಪ್ ಗಿಫ್ಟ್ ನೀಡಿದ ರೋಲ್ಸ್ ಕತೆ ಇಲ್ಲಿಗೆ ಮುಗಿದಿಲ್ಲ. ಕೆನಡಾದಲ್ಲಿ ರೋಲ್ಸ್ ರಾಯ್ಲ್ ಕಲ್ಲಿನಾನ್ ಖರೀದಿಸಿದ ಮೊದಲ ಭಾರತೀಯರ ಮೂಲದ ಪ್ರಜೆ ಅನ್ನೋ ಹಗ್ಗಳಿಕೆಗೂ ಪಾತ್ರರಾಗಿದ್ದಾರೆ. ರೋಲ್ಸ್ ರಾಯ್ಸ್ ಕಲ್ಲಿನಾನ್ ಕಾರು 6.5 ಲೀಟರ್ V12 ಎಂಜಿನ್ ಹೊಂದಿದ್ದು, 560 bhp ಪವರ್ ಹಾಗೂ 850nm ಪೀಕ್ ಟಾರ್ಕ್ ಉತ್ಪಾದಿಸ ಬಲ್ಲ ಸಾಮರ್ಥ್ಯ ಹೊಂದಿದೆ. 

click me!