ಟೊಯೊಟಾ ಇನೋವಾ ಕಾರಿಗೆ ಪ್ರತಿಸ್ಪರ್ಧಿಯಾಗಿ ಕಿಯಾ ಕಾರ್ನಿವಲ್ ಕಾರು ಬಿಡುಗಡೆಯಾಗಿದೆ. ಇದರ ಬೆನ್ನಲ್ಲೇ ಎಂಜಿ ಮೋಟಾರ್ಸ್ ನೂತನ ಕಾರು ಅನಾವರಣ ಮಾಡಿದೆ. MG G10 ಕಾರು ಬೆಲೆ, ವಿನ್ಯಾಸ ಸೇರಿದಂತೆ ಪ್ರತಿಯೊಂದ ವಿಭಾಗದಲ್ಲೂ ಇನೋವಾ ಕಾರಿಗೆ ಹೋರಾಟ ನೀಡಲಿದೆ. ನೂತನ ಕಾರಿನ ವಿವರ ಇಲ್ಲಿದೆ.
ಗ್ರೇಟರ್ ನೋಯ್ಡಾ(ಫೆ.07): ಎಂಜಿ ಮೋಟಾರ್ಸ್ ಭಾರತದಲ್ಲಿ ಹೆಕ್ಟರ್ ಹಾಗೂ ZS ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿ ಯಶಸ್ಸು ಕಂಡಿದೆ. ಚೀನಾ ಮಾಲೀಕತ್ವದ ಬ್ರಿಟಿಷ್ ಕಾರು ಭಾರತದಲ್ಲಿ ಮಾರುಕಟ್ಟೆ ವಿಸ್ತರಿಸಲು ಮುಂದಾಗಿದೆ. ಈಗಾಗಲೇ ಟಾಟಾ ಹ್ಯಾರಿಯರ್, ಜೀಪ್ ಕಂಪಾಸ್, ಹ್ಯುಂಡೈ ಕೋನಾ ಕಾರಿಗಳಿಗೆ ಪೈಪೋಟಿ ನೀಡುತ್ತಿರುವ ಎಂಜಿ ಮೋಟಾರ್ಸ್ ಇದೀಗ ಟೊಯೊಟಾ ಇನೋವಾ ಕಾರಿಗೆ ಪೈಪೋಟಿ ನೀಡಲು ಸಜ್ಜಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಎಲ್ಲಿದೆ MG ಎಲೆಕ್ಟ್ರಿಕ್ ಕಾರು ಚಾರ್ಜಿಂಗ್ ಸ್ಟೇಶನ್? ಇಲ್ಲಿದೆ ಲಿಸ್ಟ್!
ಇನೋವಾ ಕಾರಿಗೆ ಪ್ರತಿಸ್ಪರ್ಧಿಯಾಗಿ ಎಂಜಿ ಮೋಟಾರ್ಸ್ . MG G10 ಬಿಡುಗಡೆ ಮಾಡಿದೆ. . MG G10 ಕಾರು ಚೀನಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಸೇರಿದಂತೆ ಕೆಲ ದೇಶಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದೀಗ ಭಾರತಕ್ಕೂ ಕಾಲಿಟ್ಟಿದೆ.
ಇದನ್ನೂ ಓದಿ: MG ಹೆಕ್ಟರ್ SUV ಕಾರು ಬಿಡುಗಡೆ- ಟಾಟಾ ಹ್ಯಾರಿಯರ್‌ಗಿಂತ ಕಡಿಮೆ ಬೆಲೆ!
MG G10 ಕಾರು 7,8,0 ಹಾಗೂ 10 ಸೀಟ್ ಆಸನ ವ್ಯವಸ್ಥೆ ಲಭ್ಯವಿದೆ. ಇನ್ನು 10.1 ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವಾಯ್ಸ್ ರೆಕಗ್ನೀಶನ್ ಸಿಸ್ಟಮ್, ಇಂಟೆಲಿಜೆಂಟ್ ನಾವಿಗೇಶನ್, ಲೆದರ್ ಸೀಟ್, ಡ್ಯುಯೆಲ್ ಝೋನ್ ಅಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಟಚ್ ಫ್ರಿ ಸ್ಮಾರ್ಟ್ ಸೆನ್ಸಾರ್ ಟೈಲ್‌ಗೇಟ್, ಪನೋರಮಿಕ್ ಸನ್‌ರೂಫ್, ಆಟೋಮ್ಯಾಟಿಕ್ ಸ್ಲೈಡಿಂಗ್ ಡೂರ್ ಸೇರಿದಂತೆ ಹಲವು ಫೀಚರ್ಸ್ ಈ ಕಾರಿನಲ್ಲಿದೆ.
ಇದನ್ನೂ ಓದಿ:ಕೊರೊನಾ ವೈರಸ್‌ನಿಂದ ಭಾರತದಲ್ಲಿ MG ಹೆಕ್ಟರ್ ಕಾರು ಮಾರಾಟ ಕುಸಿತ?
ಗ್ರೇಟರ್ ನೋಯ್ಡಾದಲ್ಲಿ ನಡೆಯುತ್ತಿರುವ ಆಟೋ ಎಕ್ಸ್ಪೋ 2020ರಲ್ಲಿ ಎಂಜಿ ಮೋಟಾರ್ಸ್ G10 ಕಾರು ಅನಾವರಣ ಮಾಡಿದೆ. ಆದರೆ ಎಂಜಿನ್ ಮಾಹಿತಿ ಬಹಿರಂಗ ಪಡಿಸಿಲ್ಲ. ಈಗಾಗಲೇ ವಿದೇಶಗಳಲ್ಲಿ ಈ ಕಾರು ಲಭ್ಯವಿರುವ ಕಾರಣ, ಅದೇ ಎಂಜಿನ್ ಬಳಸುವ ಸಾಧ್ಯತೆ ಹೆಚ್ಚು. 2.0 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್, ಹೊಂದಿದ್ದು, 218 PS ಪವರ್ ಹಾಗೂ 350 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.
ಫೆಬ್ರವರಿ 6ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ