ಬಹು ನಿರೀಕ್ಷಿತ ಕಿಯಾ ಕಾರ್ನಿವಲ್ ಕಾರು ಬಿಡಗಡೆಯಾಗಿದೆ. MPV ಕಾರು ವಿಭಾಗದಲ್ಲಿ ಕಿಯಾ ಕಾರ್ನಿವಲ್ ಹೊಸ ಅಧ್ಯಾಯ ಬರೆಯಲಿದೆ. ನೂತನ ಕಾರಿನ ಬೆಲೆ, ವಿಶೇಷತೆ ಇಲ್ಲಿದೆ.
ಗ್ರೇಟರ್ ನೋಯ್ಡಾ(ಫೆ.06): 'ಟೊಯೊಟಾ ಇನೋವಾ ಕಾರಿಗೆ ಪ್ರತಿಸ್ಪರ್ಧಿಯಾಗಿ ಕಿಯಾ ಮೋಟಾರ್ಸ್ ನೂತನ ಕಾರ್ನಿವಲ್ ಕಾರು ಬಿಡುಗಡೆ ಮಾಡಿದೆ. ಐಷಾರಾಮಿ ಕಾರ್ನಿವಲ್ ಕಾರು ಭಾರತದ MPV ವಿಭಾಗದಲ್ಲಿ ಹೊಸ ಸಂಚಲನ ಮೂಡಿಸಲಿದೆ. ಗ್ರೇಟರ್ ನೋಯ್ಡಾದಲ್ಲಿ ನಡೆಯುತ್ತಿರುವ ಅಟೋ ಎಕ್ಸ್ಪೋ 2020ರಲ್ಲಿ ಕಿಯಾ ಕಾರ್ನಿವಲ್ ಬಿಡುಗಡೆಯಾಗಿದೆ.
ಇದನ್ನೂ ಓದಿ: ಯಶಸ್ಸಿನ ಬೆನ್ನಲ್ಲೇ ಕಿಯಾಗೆ ಹೊಡೆತ, ರಾಜಕೀಯದಾಟಕ್ಕೆ 7ಸಾವಿರ ಕೋಟಿ ವ್ಯರ್ಥ!.
undefined
ಕಿಯಾ ಕಾರ್ನಿವಲ್ ಕಾರಿನ ಬೆಲೆ 24.95 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಗರಿಷ್ಠ ಬೆಲೆ 33.95 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಬೆಲೆಯಲ್ಲಿ ಟೊಯೊಟಾ ಇನೋವಾ ಕಾರಿಗಿಂತ ದುಬಾರಿಯಾಗಿದೆ. ಆದರೆ ಐಷರಾಮಿ, ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿದೆ.
ಇದನ್ನೂ ಓದಿ: ಕಿಯಾ ಸೊನೆಟ್ ಕಾರು ಅನಾವರಣ; ಮಾರುತಿ ಬ್ರೆಜಾ, ನೆಕ್ಸಾನ್‌ಗೆ ಪೈಪೋಟಿ!
ಕಾರ್ನಿವಲ್ ಕಾರು 3 ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಪ್ರಿಮಿಯಂ, ಪ್ರೆಸ್ಟೀಜ್ ಹಾಗೂ ಲಿಮೌಸೈನ್ ಎಂಬ ಮೂರು ವೇರಿಯೆಂಟ್ ಕಾರು ಲಭ್ಯವಿದೆ. ಇದು 7, 8 ಹಾಗೂ 9 ಸೀಟ್ ಆಯ್ಕೆ ನೀಡಲಿದೆ. ಪ್ರಿಮಿಯಂ ಟ್ರಿಮ್ ಕಾರು 7 ಹಾಗೂ ಆಸನದ ವ್ಯವಸ್ಥೆ ಹೊಂದಿದೆ.
ಕಾರ್ನಿವಲ್ ಕಾರು 2.2-ಲೀಟರ್ VGT ಡೀಸೆಲ್ ಹಾಗೂ BS6 ಎಮಿಶನ್ ಎಂಜಿನ್ ಹೊಂದಿದೆ. 197 bhp ಪವರ್ ಹಾಗೂ 440 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 8 ಸ್ಪೀಡ್ ಸ್ಪೋರ್ಟ್‌ಮ್ಯಾಟ್ರಿಕ್ ಟ್ರಾನ್ಸ್‌ಮಿಶನ್ ಹೊಂದಿದೆ.
ನೂತನ ಕಿಯಾ ಕಾರ್ನಿವಲ್ ಕಾರು ಟೊಯೊಟಾ ಇನೋವಾ ಕ್ರಿಸ್ಟಾ, ಟೊಯೊಟಾ ಫಾರ್ಚುನರ್, ಫೋರ್ಡ್ ಎಂಡೇವರ್ ಹಾಗೂ ಇಸುಜು MU-x ಕಾರಿಗೆ ಪ್ರತಿಸ್ಪರ್ಧಿಯಾಗಿದೆ.