ಮಾರುತಿ ಬ್ರೆಜ್ಜಾ ಪೆಟ್ರೋಲ್ ಕಾರು ಅನಾವರಣ; ಬುಕಿಂಗ್ ಆರಂಭ!

By Suvarna NewsFirst Published Feb 6, 2020, 4:00 PM IST
Highlights

ಭಾರತದಲ್ಲಿ ಗರಿಷ್ಠ ಮಾರಾಟವಾಗುವ SUV ಕಾರುಗಳ ಪೈಕಿ ಮಾರುತಿ ಬ್ರೆಜ್ಜಾ ಕಾರಿಗೆ ಮೊದಲ ಸ್ಥಾನ. 2016ರಿಂದ ಮೊದಲ ಸ್ಥಾನ ಉಳಿಸಿಕೊಂಡಿರುವ ಮಾರುತಿ ಬ್ರೆಜ್ಜಾ ಇದೀಗ ಪೆಟ್ರೋಲ್ ವರ್ಶನ್ ಅನಾವರಣ ಮಾಡಿದೆ. ನೂತನ ಕಾರಿನ ಕುರಿತ ಹೆಚ್ಚಿನ ವಿವರ ಇಲ್ಲಿದೆ.
 

ಗ್ರೇಟರ್ ನೋಯ್ಡಾ(ಫೆ.06): ಮಾರುತಿ ಸುಜುಕಿ ಕಾರಿಗೆ ಭಾರತದಲ್ಲಿ ಪೈಪೋಟಿ ಹೆಚ್ಚಾಗುತ್ತಿದೆ. ಬಹುತೇಕ ಎಲ್ಲಾ ಕಂಪನಿಗಳು ಸಬ್ ಕಾಂಪಾಕ್ಟ್ SUV ಕಾರು ಬಿಡುಗಡೆ ಮಾಡಿದೆ. ಆದರೂ ಮಾರುತಿ ಬ್ರೆಜ್ಜಾ ಕಾರು ಮಾರಾಟದಲ್ಲಿ ದಾಖಲೆ ಉಳಿಸಿಕೊಂಡಿದೆ. ಇದೀಗ ಮಾರುತಿ ಸುಜುಕಿ ಬ್ರೆಜ್ಜಾ ಪೆಟ್ರೋಲ್ ಕಾರು ಅನಾವರಣ ಮಾಡಿದೆ.

ಇದನ್ನೂ ಓದಿ: ಅತ್ಯುತ್ತಮ ವಿನ್ಯಾಸದ ಮಾರುತಿ ಸುಜುಕಿ ಫ್ಯೂಚರೋ ಇ ಕಾರು ಅನಾವರಣ!

2016ರಲ್ಲಿ ಮಾರುತಿ ಬ್ರೆಜ್ಜಾ ಡೀಸೆಲ್ ವೇರಿಯೆಂಟ್ ಕಾರು ಬಿಡುಗಡೆಯಾಗಿತ್ತು. ಇದುವರೆಗೆ ಸುಮಾರು 5 ಲಕ್ಷಕ್ಕೂ ಹೆಚ್ಚಿನ ಕಾರುಗಳು ಮಾರಾಟವಾಗಿವೆ. ಇದೀಗ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಎಪ್ರಿಲ್ 1 ರಿಂದ BS6 ಎಂಜಿನ್ ಕಡ್ಡಾಯ. ಹೀಗಾಗಿ ಮಾರುಜಿ ಬ್ರೆಜ್ಜಾ ಡೀಸೆಲ್ ವೇರಿಯೆಂಟ್ ಕಾರು ಸ್ಥಗಿತಗೊಳ್ಳುತ್ತಿದೆ. ಹೀಗಾಗಿ ಇದೀಗ ಬಿಜ್ಜಾ ಪೆಟ್ರೋಲ್ ವೇರಿಯೆಂಟ್ ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ: BS6 ಮಾರುತಿ ಅಲ್ಟೋ S ಬಿಡುಗಡೆ; ಕಡಿಮೆ ಬೆಲೆಯ CNG ಕಾರು!

ಸದ್ಯ ಮಾರುಕಟ್ಟೆಯಲ್ಲಿರುವ ಬ್ರೆಜ್ಜಾ 1.3 ಲೀಟರ್ ಎಂಜಿನ್ ಕಾರಾಗಿದೆ. ಇದೀಗ ನೂತನ ಪೆಟ್ರೋಲ್ ವೇರಿಯೆಂಟ್ ಕಾರು 1.5 ಲೀಟರ್ BS6 ಎಂಜಿನ್ ಹೊಂದಿದೆ. ಮಾರುತಿ ಸಿಯಾಝ್, ಮಾರುತಿ ಎರ್ಟಿಗಾ ಹಾಗೂ  XL6 ಕಾರಿನಲ್ಲಿ ಇದೇ ಎಂಜಿನ್ ಬಳಸಲಾಗಿದೆ. ನೂತನ ಬ್ರೆಜ್ಜಾ ಕಾರ ಮೈಲ್ಡ್ ಹೈಬ್ರಿಡ್ ಕೂಡ ಲಭ್ಯವಿದೆ.

ಮಾರುತಿ ಬ್ರೆಜ್ಜಾ 1.5 ಲೀಟರ್ ಪೆಟ್ರೋಲ್ ಎಂಜಿನ್,  104 PS ಪವರ್ ಹಾಗೂ 138 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ನೂತನ ಕಾರಿನಲ್ಲಿ ಹಲವು ಬದಲಾವಣೆ ಮಾಡಲಾಗಿದೆ. ಮುಂಭಾದ ಗ್ರಿಲ್, LED ಹೆಡ್‌ಲ್ಯಾಂಪ್ಸ್, ಟ್ರೈಲ್ ಲ್ಯಾಂಪ್ ಸೇರಿದಂತೆ ಡ್ಯಾಶ್‌ಬೋರ್ಡ್, ಸೀಟ್ ಸ್ಟೇರಿಂಗ್ ವೀಲ್ಹ್‌ನಲ್ಲಿ ಬದಲಾವಣೆ ಮಾಡಲಾಗಿದೆ.

click me!