ಸೇಫ್ಟಿಗೆ ಮೊದಲ ಆದ್ಯತೆ- 5 ಸ್ಟಾರ್ ಕಾರನ್ನೇ ನೀಡುತ್ತೇವೆ: ರತನ್ ಟಾಟಾ

By Web Desk  |  First Published Mar 8, 2019, 6:06 PM IST

ಭಾರತದಲ್ಲಿ ಕಡಿಮೆ ಬೆಲೆಗೆ ಗರಿಷ್ಠ ಸುರಕ್ಷತೆ ನೀಡುವ ಕಾರ ಟಾಟಾ ಮೋಟಾರ್ಸ್. ಇದೀಗ ಟಾಟಾ ಬಿಡುಗಡೆ ಮಾಡುವ ಎಲ್ಲಾ ಕಾರುಗಳು 5 ಸ್ಟಾರ್ ಸುರಕ್ಷತೆ ಇರಲಿದೆ.  ಇಲ್ಲಿದೆ ಹೆಚ್ಚಿನ ಮಾಹಿತಿ.


ಜಿನೆವಾ(ಮಾ.08): ಭಾರತದಲ್ಲಿ ಕಡಿಮೆ ಬೆಲೆಗೆ ಗರಿಷ್ಠ ಸುರಕ್ಷತೆ ಕಾರು ನೀಡಿದ ಹೆಗ್ಗಳಿಕೆಗೆ ಟಾಟಾ ಮೋಟಾರ್ಸ್ ಪಾತ್ರವಾಗಿದೆ. ಐಷಾರಾಮಿ ಕಾರು ಹೊರತು ಪಡಿಸಿದರೆ ಭಾರತದಲ್ಲಿ 5 ಸ್ಟಾರ್ ರೇಟಿಂಗ್ ಪಡೆದ ಮೊದಲ ಕಾರು ಟಾಟಾ ನೆಕ್ಸಾನ್. ಇದೀಗ 5 ಸ್ಟಾರ್ ರೇಟಿಂಗ್ ಸುರಕ್ಷತೆಯ ಕಾರುಗಳನ್ನ ಮಾತ್ರ ಬಿಡುಗಡೆ ಮಾಡುತ್ತೇವೆ ಎಂದು ಟಾಟಾ ಗ್ರೂಪ್ ಮಾಲೀಕ ರತನ್ ಟಾಟಾ ಹೇಳಿದ್ದಾರೆ.

ಇದನ್ನೂ ಓದಿ: ಟಾಟಾ ನೆಕ್ಸಾನ್ ಕಾರಿನಲ್ಲಿದೆ 10 ಸೇಫ್ಟಿ ಫೀಚರ್ಸ್!

Tap to resize

Latest Videos

undefined

ಜಿನೆವಾ ಮೋಟಾರ್ ಶೋನಲ್ಲಿ ಟಾಟಾ ಮೋಟಾರ್ಸ್ ಅಲ್ಟ್ರೋಜ್, ಅಲ್ಟ್ರೋಜ್ ಇವಿ, ಟಾಟಾ ಹರಿಯರ್(ಬುಜಾರ್ಡ್), ಹಾರ್ನ್‌ಬಿಲ್ SUV ಸೇರಿದಂತೆ 4 ಕಾರುಗಳನ್ನ ಅನಾವರಣ ಮಾಡಿದೆ. ಇದೇ ವೇಳೆ ರತನ್ ಟಾಟಾ, ಗ್ರಾಹಕರ ಸುರಕ್ಷತೆಯಲ್ಲಿ ರಾಜಿಯಿಲ್ಲ. ಟಾಟಾ ಗರಿಷ್ಠ ಸುರಕ್ಷತೆ ಕಾರಗಳನ್ನ ಮಾತ್ರ ಬಿಡುಗಡೆ ಮಾಡಲಿದೆ ಎಂದಿದ್ದಾರೆ.

ಇದನ್ನೂ ಓದಿ: ಸಾಬೀತಾಯ್ತು ಟಾಟಾ ನೆಕ್ಸಾನ್ ಕಾರು ಸುರಕ್ಷತೆ- ಪಿಲ್ಲರ್ ಬಿದ್ದರೂ ಪ್ರಯಾಣಿಕರು ಸೇಫ್!

ಕಾರಿನ ಬೆಲೆ ಕಡಿಮೆ ಮಾಡಲು ಸುರಕ್ಷತೆಯನ್ನು ಕಡೆಗಣಿಸಲಾಗುತ್ತಿದೆ. ಆದರೆ ಟಾಟಾ ಕಡಿಮೆ ಬೆಲೆಯಲ್ಲಿ ಗರಿಷ್ಠ ಸುರಕ್ಷತೆ ನೀಡುತ್ತಿದೆ. ಹೀಗಾಗಿ ಇದೀಗ ಟಾಟಾ ಕಾರುಗಳು ಮಾರಾಟದಲ್ಲಿ ಗಣನೀಯ ಏರಿಕೆ ಕಂಡಿದೆ. ಈ ಮೂಲಕ ವಿದೇಶಿ ವಾಹನಗಳಿಗೆ ಬಾರಿ ಪೈಪೋಟಿ ನೀಡುತ್ತಿದೆ.

click me!