ಶೀಘ್ರದಲ್ಲೇ ಟಾಟಾ ಟಿಗೋರ್ ಎಲೆಕ್ಟ್ರಿಕ್ ಫೇಸ್‌ಲಿಫ್ಟ್ ಕಾರು ಬಿಡುಗಡೆ!

By Suvarna NewsFirst Published Mar 11, 2020, 8:02 PM IST
Highlights

ಭಾರತದ ಎಲೆಕ್ಟ್ರಿಕ್ ಕಾರು ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಟಾಟಾ ಮೋಟಾರ್ಸ್ ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದೆ. ಭಾರತದ ಮೊದಲ ಎಲೆಕ್ಟ್ರಿಕ್ SUV ಕಾರು ಬಿಡುಗಡೆ ಮಾಡಿದ ಬೆನ್ನಲ್ಲೇ ಇದೀಗ ಟಿಗೋರ್ ಎಲೆಕ್ಟ್ರಿಕ್ ಕಾರನ್ನು ಅಪ್‌ಗ್ರೇಡ್ ಮಾಡಿ ಬಿಡುಗಡೆ ಮಾಡುತ್ತಿದೆ. ನೂತನ ಕಾರಿನ ಬೆಲೆ, ಮೈಲೇಜ್ ಕುರಿತ ಮಾಹಿತಿ ಇಲ್ಲಿದೆ.  

ಮುಂಬೈ(ಮಾ.11): ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಮೊಬಿಲಿಟಿ ಈಗಾಗಲೇ ಟಿಗೋರ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿ ಯಶಸ್ವಿಯಾಗಿದೆ. ಇದೀಗ ಅಪ್‌ಗ್ರೇಡೆಡ್ ಟಿಗೋರ್ ಬಿಡುಗಡೆಯಾಗುತ್ತಿದೆ. ಟಿಗೋರ್ ಎಲೆಕ್ಟ್ರಿಕ್ ಫೇಸ್‌ಲಿಫ್ಟ್ ಕಾರಿನ ರೋಡ್ ಟೆಸ್ಟ್ ನಡೆಯುತ್ತಿದೆ. ಹೀಗಾಗಿ ಶೀಘ್ರದಲ್ಲೇ ಟಿಗೋರ್ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗಲಿದೆ.

ಟಾಟಾ ನೆಕ್ಸಾನ್ EV ಗ್ರ್ಯಾಂಡ್ ಎಲೆಕ್ಟ್ರಿಕ್ ಟೂರ್ ಆರಂಭ; ಇದು ಅತ್ಯುತ್ತಮ ಕಾರು!

ನೂತನ ಟಿಗೋರ್ ಎಲೆಕ್ಟ್ರಿಕ್ ಫೇಸ್‌ಲಿಫ್ಟ್ ಕಾರಿನಲ್ಲಿ ಕೆಲ ಬದಲಾವಣೆ ಮಾಡಲಾಗಿದೆ.  ಶಾರ್ಪ್ ಗ್ರಿಲ್, LED DRLs ಹೆಡ್‌ಲ್ಯಾಂಪ್ಸ್ ಕಾರಿನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ಇಂಟೀರಿಯರ್ ಕಲರ್ ಭಿನ್ನವಾಗಿದೆ. ಇನ್ನು ಅಲ್ಟ್ರೋಝ್ ಕಾರಿನ 3 ಸ್ಪೋಕ್ ಮಲ್ಟಿ ಫಂಕ್ಷನ್ ಸ್ಟೀರಿಂಗ್ ವೀಲ್ಹ್, ಅಪ್‌ಡೇಟೆಡ್ ಟಚ್ ಸ್ಕ್ರೀನ್, ಡ್ಯುಯೆಲ್ ಏರ್‌ಬ್ಯಾಗ್, ರೇರ್ ಪಾರ್ಕಿಂಗ್ ಸೆನ್ಸಾರ್ ABS ಹಾಗೂ EBD ಟೆಕ್ನಾಲಜಿ ಹೊಂದಿದೆ.

ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಲಾಂಚ್, ಹ್ಯುಂಡೈ MGಗೆ ನಡುಕ!...
 

ನೂತನ ಟಿಗೋರ್ ಫೇಸ್‌ಲಿಫ್ಟ್ ಕಾರಿನ ಪವರ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ. ಸದ್ಯ ಮಾರುಕಟ್ಟೆಯಲ್ಲಿರುವ ಟಿಗೋರ್ ಎಲೆಕ್ಟ್ರಿಕ್ ಕಾರಿನ  21.5kWh ಬ್ಯಾಟರಿ ಪ್ಯಾಕ್ ಹೊಂದಿದೆ. ಸಂಪೂರ್ಣ ಚಾರ್ಜ್‌ಗೆ 213 ಕಿ.ಮೀ ಮೈಲೇಜ್ ರೇಂಜ್ ನೀಡಲಿದೆ. 40 bhp ಪವರ್ ಹಾಗೂ  105 Nm ಪೀಕ್ ಟಾರ್ಕ್ ಸಾಮರ್ಥ್ಯ ಹೊಂದಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಟಿಗೋರ್ ಎಲೆಕ್ಟ್ರಿಕ್ ಕಾರಿನ ಬೆಲೆ 9.54 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ನೂತನ ಕಾರಿನ ಕೊಂಚ ದುಬಾರಿಯಾಗಲಿದೆ. 

click me!