ಅಮಿತಾಬ್‌ ಬಚ್ಚನ್‌ಗೆ ಅಚ್ಚರಿ ಗಿಫ್ಟ್, ಗೆಳೆಯನ ಉಡುಗೊರೆಗೆ ಬಿಗ್‌ಬಿ ಭಾವುಕ!

Suvarna News   | Asianet News
Published : Mar 09, 2020, 06:09 PM IST
ಅಮಿತಾಬ್‌ ಬಚ್ಚನ್‌ಗೆ ಅಚ್ಚರಿ ಗಿಫ್ಟ್, ಗೆಳೆಯನ ಉಡುಗೊರೆಗೆ ಬಿಗ್‌ಬಿ ಭಾವುಕ!

ಸಾರಾಂಶ

ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಸರಿಸುಮಾರು 5 ದಶಕಗಳಿಂದ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಸೀನಿಯರ್ ಬಚ್ಚನ್ 1950ರ ಜನಪ್ರೀಯ ಫೋರ್ಡ್ ಪ್ರಿಫೆಕ್ಟ್ ಕಾರು ಖರೀದಿಸಿದ್ದರು. ಇದಾದ ಬಳಿಕ ಬಚ್ಚನ್ ಹಲವು ಕಾರು ಖರೀದಿಸಿದ್ದಾರೆ ಮಾರಾಟ ಮಾಡಿದ್ದಾರೆ. ಹೀಗೆ ಮಾರಾಟದಲ್ಲಿ ಮೊದಲ ಕಾರನ್ನು ಮಾರಾಟ ಮಾಡಿದ್ದರು. ಇದೀಗ ಬಚ್ಚನ್‌ ಕೈಗೆ ಮತ್ತೆ ತಮ್ಮ ಮೊದಲ ಕಾರು ಸಿಕ್ಕಿದೆ. ಕಾರು ನೋಡಿದ ಬಚ್ಚನ್ ಭಾವುಕರಾಗಿದ್ದಾರೆ. 

ಮುಂಬೈ(ಮಾ.09): ಅಮಿತಾಬ್ ಬಚ್ಚನ್ ದಶಕಗಳ ಹಿಂದೆ ಫೋರ್ಡ್ ಪ್ರಿಫಕ್ಟ್ ಕಾರು ಖರೀದಿಸಿದ್ದರು. ಇದು ಅಮಿತಾಬ್ ಖರೀದಿಸಿದ ಮೊದಲ ಫ್ಯಾಮಿಲಿ ಕಾರು. ಅಲಹಬಾದ್‌ನಲ್ಲಿದ್ದ ವೇಳೆ ಅಮಿತಾಬ್ ಬಚ್ಚನ್ ಈ ಕಾರು ಖರೀದಿಸಿದ್ದರು. ಬಾಲಿವುಡ್‌ನಲ್ಲಿ ಅಮಿತಾಬ್ ಬಚ್ಚನ್ ಗಟ್ಟಿಯಾಗಿ ನೆಲೆಯೂರುತ್ತಿದ್ದಂತೆ ಫೋರ್ಡ್ ಪ್ರೆಫೆಕ್ಟ್ ಕಾರು ಮಾರಾಟ ಮಾಡಿದ್ದರು. ಇದೀಗ ಮತ್ತೆ ಅಮಿತಾಬ್ ಮೊದಲ ಕಾರು ಕೈಸೇರಿದೆ.

ಇದನ್ನೂ ಓದಿ: ನಟ ಮೋಹನ್‌ಲಾಲ್ ಕೈಸೇರಿತು ಮೊದಲ ಟೊಯೊಟಾ ವೆಲ್‌ಫೈರ್ ಕಾರು!

ಗುಜುರಿಯಲ್ಲಿ ಬಿದ್ದಿದ್ದ ಅಮಿತಾಬ್ ಫೋರ್ಡ್ ಪ್ರಿಫೆಕ್ಟ್ ಕಾರನ್ನು ಗಮಿನಿಸಿದ ಬಚ್ಚನ್ ಗೆಳೆಯ ಕಾರಿಗೆ ಮರುಜೀವ ನೀಡಲು ಮುಂದಾಗಿದ್ದಾರೆ. ಸತತ ಪ್ರಯತ್ನಗಳ ಬಳಿಕ ಕಾರಿನ ಶೈಲಿಗೆ ಯಾವುದೇ ದಕ್ಕೆ ಬರದ ರೀತಿಯಲ್ಲಿ ಮರುಜೀವ ನೀಡಲಾಯಿತು. ಬಳಿಕ ಅಮಿತಾಬ್ ಬಚ್ಚನ್‌ಗೆ ಸರ್ಪ್ರೈಸ್ ನೀಡಿದ್ದಾರೆ. ತನ್ನ ಮೊದಲ ಕಾರನ್ನು ನೋಡಿದ ಅಮಿತಾಬ್ ಬಚ್ಚನ್ ಭಾವುಕರಾಗಿದ್ದಾರೆ. 

ಸಾಮಾಜಿಕ ಜಾಲತಾಣದಲ್ಲಿ ನನ್ನ ಸಂತಸವನ್ನು ಹೇಳಲು ಪದಗಳು ಸಿಗುತ್ತಿಲ್ಲ ಎಂದಿದ್ದಾರೆ. ಗೆಳೆಯ ಹಾಗೂ ಆತನ ಕುಟುಂಬಕ್ಕೆ ಅಮಿತಾಬ್ ಬಚ್ಚನ್ ಧನ್ಯವಾದ ಅರ್ಪಿಸಿದ್ದಾರೆ.

 

ಫೋರ್ಡ್ ಪ್ರಿಫೆಕ್ಟ್ ಕಾರು ಬ್ರಿಟೀಷ್ ನಿರ್ಮಾಣದ ಕಾರಾಗಿದೆ. ಫೋರ್ಡ್ ಯುಕೆ ಈ ಕಾರನ್ನು 1938 ರಿಂದ 1960ರ ವರೆಗೆ ತಯಾರಿಸಿತ್ತು. ಈ ಕಾರು 1.2 ಲೀಟರ್ ಎಂಜಿನ್ ಹೊಂದಿದ್ದು, 3  ಸ್ಪೀಡ್ ಮ್ಯಾನ್ಯುಯೆಲ್ ಗೇರ್ ಬಾಕ್ಸ್ ಹೊಂದಿದೆ. 
 

PREV
click me!

Recommended Stories

ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ
ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ