ಭಾರತ ಇದೀಗ ಎಲೆಕ್ಟ್ರಿಕ್ ವಾಹನದತ್ತ ಸಾಗುತ್ತಿದೆ. ಈಗಾಗಲೇ ಹಲವು ಎಲೆಕ್ಟ್ರಿಕ್ ಕಾರುಗಳು ಬಿಡಡುಗಡೆಯಾಗಿವೆ. ಇದರಲ್ಲಿ ಟಾಟಾ ನೆಕ್ಸಾನ್ EV ಅತ್ಯುತ್ತಮ ಎಂದು ಗುರುತಿಸಿಕೊಂಡಿದೆ. ಇದೀಗ ಗ್ರಾಹಕರಿಗೆ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಅನುಭವ ನೀಡಲು ಟಾಟಾ ಎಲೆಕ್ಟ್ರಿಕ್ ಮೊಬಿಲಿಟಿ ದಿ ಗ್ರ್ಯಾಂಡ್ ಎಲೆಕ್ಟ್ರಿಕ್ ಟೂರ್‌ಗೆ ಚಾಲನೆ ನೀಡಿದೆ.
ಬೆಂಗಳೂರು(ಮಾ.07): ಭಾರತದಲ್ಲಿ ಟಾಟಾ ಕಾರುಗಳು ಇದೀಗ ಹೊಸ ಕ್ರಾಂತಿ ಮಾಡಿವೆ. ಅದರಲ್ಲೂ ಎಲೆಕ್ಟ್ರಿಕ್ ವಿಭಾಗದಲ್ಲಿ ಟಾಟಾ ಬಿಡುಗಡೆ ಮಾಡಿದ ನೆಕ್ಸಾನ್ EV ಕಾರು ಹೊಸ ಅಧ್ಯಾಯ ಆರಂಭಿಸಿದೆ. ಕಾರಣ ಭಾರತದಲ್ಲಿ ಬಿಡುಗಡೆಯಾದ ಎಲೆಕ್ಟ್ರಿಕ್ SUV ಕಾರುಗಳ ಪೈಕಿ ಇದು ಕಡಿಮೆ ಬೆಲೆ, ಗರಿಷ್ಠ ಮೈಲೇಜ್, ಕಡಿಮೆ ನಿರ್ವಹಣೆ ವೆಚ್ಚ ಹೊಂದಿದೆ. ಇದೀಗ ಭಾರತೀಯರಿಗೆ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಡ್ರೈವಿಂಗ್ ಅನುಭವ ನೀಡಿಲು ಟಾಟಾ ಗ್ರ್ಯಾಂಡ್ ಎಲೆಕ್ಟ್ರಿಕ್ ಟೂರ್‌ಗೆ ಚಾಲನೆ ನೀಡಿತು.
undefined
ಇದನ್ನೂ ಓದಿ: ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಲಾಂಚ್, ಹ್ಯುಂಡೈ MGಗೆ ನಡುಕ!
ಬೆಂಗಳೂರಿನ ಹೊರವಲಯದಲ್ಲಿ ಟಾಟಾ ಗ್ರ್ಯಾಂಡ್ ಎಲೆಕ್ಟ್ರಿಕ್ ಟೂರ್ ಬೇಕಾದ ಎಲ್ಲಾ ಸಿದ್ಧತೆ ಮಾಡಿತ್ತು. ಹಲವು ಡ್ರೈವಿಂಗ್ ಚಟುವಟಿಕೆ ಮೂಲಕ ಟಾಟಾ ನೆಕ್ಸಾನ್ ಕಾರಿನ ಸಾಮರ್ಥ್ಯ, ಭಿನ್ನತೆ, ವಿಶೇಷತೆಗಳನ್ನು ಅರಿಯಲು ವ್ಯವಸ್ಥೆ ಮಾಡಲಾಗಿತ್ತು ಆಕ್ಸಲರೇಶನ್, ಸಾಲೊಮ್, ಆಟೋಕ್ರಾಸ್ ಹಾಗೂ ಲೇನ್ ಚೇಂಜ್ ಡ್ರೈವಿಂಗ್ ಚಟುವಟಿಕೆ ಆಯೋಜಿಸಲಾಗಿತ್ತು.
ಇದನ್ನೂ ಓದಿ: 21 ಸಾವಿರಕ್ಕೆ ಬುಕ್ ಮಾಡಿ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು!.
ಈ ಚಟುವಟಿಕೆ ಕಾರಿನ ಪವರ್, ಸ್ಟೆಬಿಲಿಟಿ, ಹಾಗೂ ಡ್ರೈವಿಂಗ್ ಅನುಭವ ಪಡೆಯಲು ಸಹಕಾರಿಯಾಗಿತ್ತು. ಹಲವು ಗ್ರಾಹಕರು ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಡ್ರೈವ್ ಮಾಡಿ ಅನುಭವ ಪಡೆಯಲು ಹಾಜರಿದ್ದರು. ಸುವರ್ಣನ್ಯೂಸ್.ಕಾಂ ತಂಡ ಕೂಡ ಓದುಗರಿಗಾಗಿ ಟಾಟಾ ನೆಕ್ಸಾನ್ ಕಾರಿನ ವಿಶೇಷತೆ ಹಾಗೂ ಕಾರಿನ ಗುಣಮಟ್ಟ ತಿಳಿಸಲು ಡ್ರೈವಿಂಗ್ ಅನುಭವ ಪಡೆಯಿತು.
ಇದನ್ನೂ ಓದಿ: ಡಿ.17ಕ್ಕೆ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಅನಾವರಣ; ಬೆಂಗಳೂರಿನಲ್ಲಿ ಲಭ್ಯ!
ಕಾರಿನ ಪವರ್, ಸ್ಟೆಬಿಲಿಟಿ, ಬ್ರೇಕ್, ಸೀಟ್ ಕಂಫರ್ಟ್ ಸೇರಿದಂತೆ ಎಲ್ಲವೂ ಭಾರತೀಯರಿಗೆ ಹೇಳಿ ಮಾಡಿಸಿದಂತಿದೆ. ಟಾಟಾ ಕಾರಿನ ಸುರಕ್ಷತೆ ಕುರಿತು ಬಿಡಿಸಿ ಹೇಳಬೇಕಾಗಿಲ್ಲ. ಕಾರಣ ಟಾಟಾ ನೆಕ್ಸಾನ್ ಕಾರು 5 ಸ್ಟಾರ್ ರೇಟಿಂಗ್ ಪಡೆದ ಭಾರತದ ಮೊದಲ ಕಾರು ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ.
ಸಂಪೂರ್ಣ ಚಾರ್ಜ್ ಮಾಡಿದರೆ 312 ಕಿ.ಮೀ ಮೈಲೇಜ್ ನೀಡಲಿದೆ. ಇನ್ನು ಫುಲ್ ಚಾರ್ಜ್‌ಗೆ ಸರಿಸುಮಾರು 300 ರೂಪಾಯಿ ಅಂದಾಜು ವೆಚ್ಚವಾಗಲಿದೆ. ಫಾಸ್ಟ್ ಚಾರ್ಜಿಂಗ್ ಮೂಲಕ 60 ನಿಮಿಷದಲ್ಲಿ ಶೇಕಡಾ 80 ರಷ್ಟು ಚಾರ್ಜ್ ಆಗಲಿದೆ. ಟಾಟಾ ನೆಕ್ಸಾನ್ EV 3 ವೇರಿಯೆಂಟ್‌ಗಳಲ್ಲಿ ಲ್ಯಭ್ಯವಿದೆ. ಟಾಟಾ ನೆಕ್ಸಾನ್ EV ಆರಂಭಿಕ ಬೆಲೆ 13.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).
ಕೆನೆಕ್ಟೆಡ್ ಆ್ಯಪ್ ಮೂಲಕ ಜಿಯೋ ಫೆನ್ಸಿಂಗ್, ರಿಮೂಟ್ ಕಮಾಂಡ್, ಲೊಕೇಶನ್ ಸರ್ವೀಸ್ ಸೇರಿದಂತೆ 27ಕ್ಕೂ ಹೆಚ್ಚು ಫೀಚರ್ಸ್ ಈ ಕಾರಿನಲ್ಲಿ ಲಭ್ಯವಿದೆ.
ಟಾಟಾ ನೆಕ್ಸಾನ್ ಕಾರು ಬಿಡುಗಡೆ ಬಳಿಕ ಗ್ರಾಹಕರು ನೀಡುತ್ತಿರುವ ಸ್ಪಂದನೆ ನಮ್ಮ ಉತ್ಸಾಹ ಇಮ್ಮಡಿಗೊಳಿಸಿದೆ. ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಬುಕಿಂಗ್ ಸಂಖ್ಯೆ ಗ್ರಾಹಕರ ಆಸಕ್ತಿಯನ್ನು ಸಾರಿ ಹೇಳುತ್ತಿದೆ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನವನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಗ್ರಾಹಕರಿಗೆ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಟೂರ್ ಆಯೋಜಿಸಲಾಗಿದೆ. ಈ ಎಲೆಕ್ಟ್ರಿಕ್ ಟೂರ್ ಮೂಲಕ ಟಾಟಾ ನೆಕ್ಸಾನ್ EV ಕಾರಿನ ಅನುಭವ ಪಡೆದುಕೊಳ್ಳಬಹುದು ಎಂದು ಟಾಟಾ ಎಲೆಕ್ಟ್ರಿಕ್ ಮೊಬಿಲಿಟಿ ಬ್ಯೂಸಿನೆಸ್ ಯುನಿಟ್‌ನ ಸೇಲ್ಸ್ ಹಾಗೂ ಮಾರ್ಕೆಟ್ ಮುಖ್ಯಸ್ಥ ಅಶೇಶ್ ಧಾರ್ ಹೇಳಿದರು.