ಹ್ಯುಂಡೈ ಕ್ರೆಟಾ ಸದ್ದಡಗಿಸಲು ಬರುತ್ತಿದೆ ಟಾಟಾ ಬ್ಲಾಕ್‌ಬರ್ಡ್!

Published : Feb 27, 2019, 08:59 PM IST
ಹ್ಯುಂಡೈ ಕ್ರೆಟಾ ಸದ್ದಡಗಿಸಲು ಬರುತ್ತಿದೆ ಟಾಟಾ ಬ್ಲಾಕ್‌ಬರ್ಡ್!

ಸಾರಾಂಶ

ಹ್ಯುಂಡೈ ಕ್ರೆಟಾಗೆ ಪ್ರತಿಸ್ಪರ್ಧಿಯಾಗಿ ಟಾಟಾ ಮೋಟಾರ್ಸ್ ನೂತನ ಕಾರು ಬಿಡುಗಡೆ ಮಾಡಲು ಸಜ್ಜಾಗಿದೆ. ಟಾಟಾ ಹ್ಯಾರಿಯರ್ ಬಳಿಕ ಇದೀಗ ಟಾಟಾ ಬ್ಲಾಕ್‌ಬರ್ಡ್ ಕಾರು ಹೊಸ ಸಂಚಲನ ಮೂಡಿಸಲಿದೆ. ಈ ಕಾರಿನ ವಿಶೇಷತೆ ಇಲ್ಲಿದೆ.

ಮುಂಬೈ(ಫೆ.27): ಭಾರತದ ಟಾಟಾ ಮೋಟಾರ್ಸ್ ಇದೀಗ ವಿದೇಶಿ ಕಾರುಗಳಿಗೆ ಭಾರಿ ಪೈಪೋಟಿ ನೀಡುತ್ತಿದೆ. ಈಗಾಗಲೇ ಜೀಪ್ ಕಂಪಾಸ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಟಾಟಾ ಹ್ಯಾರಿಯರ್ ರಸ್ತೆಗಿಳಿಸಿ ಯಶಸ್ವಿಯಾಗಿರುವ ಟಾಟಾ, ಇದೀಗ ಹ್ಯುಂಡೈ ಕ್ರೆಟಾ SUV ಕಾರಿಗೆ ಪೈಪೋಟಿ ನೀಡಲು ಸಜ್ಜಾಗಿದೆ.

ಇದನ್ನೂ ಓದಿ: ವಿರಾಟ್ ಕೊಹ್ಲಿ ನೆಚ್ಚಿನ ಆಡಿ ಕಾರಿನ ಈಗಿನ ಪರಿಸ್ಥಿತಿ ಶೋಚನೀಯ- ಕಾರಣವೇನು?

ಟಾಟಾ ಮೋಟಾರ್ಸ್ ಶೀಘ್ರದಲ್ಲೇ ಹ್ಯುಂಡೈ ಕ್ರೆಟಾ ಪ್ರತಿಸ್ಪರ್ಧಿ SUV ಕಾರು ಬಿಡುಗಡೆ ಮಾಡಲಿದೆ. ಟಾಟಾ ಬ್ಲಾಕ್‌ಬರ್ಡ್ ಅನ್ನೋ ನೂತನ ಕಾರು ಹೆಚ್ಚುವರಿ ಫೀಚರ್ಸ್ ಹಾಗೂ ಆಧುನಿಕ ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗಲಿದೆ. ವಿಶೇಷ ಅಂದರೆ ಕಡಿಮೆ ಬೆಲೆಗೆ  ಈ ಕಾರು ಮಾರುಕಟ್ಟೆ ಪ್ರವೇಶಿಸಲಿದೆ.

ಇದನ್ನೂ ಓದಿ: ಭಾರತದ ಮಿಲಿಟರಿ ಶಕ್ತಿಯಲ್ಲಿದೆ 4 ಅತ್ಯಾಧುನಿಕ ವಾಹನ!

ಟಾಟಾ ನೆಕ್ಸಾನ್ ಕಾರಿಗಿಂತ ದೊಡ್ಡದು ಹಾಗೂ ಹ್ಯಾರಿಗಿಂತ ಚಿಕ್ಕದಾದ ನೂತನ ಬ್ಲಾಕ್‌ಬರ್ಡ್ ಹೊಸ ಸಂಚಲನ ಮೂಡಿಸಲಿದೆ. ಕಾರಣ ಇದರ ಬೆಲೆ 6.5 ಲಕ್ಷ ರೂಪಾಯಿಂದ 10 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಹ್ಯುಂಡೈ ಕ್ರೆಟಾಗೆ ಹೋಲಿಸಿದರೆ ಇದು ಅತ್ಯಂತ ಕಡಿಮೆ ಬೆಲೆಯ SUV ಕಾರಾಗಿ ಹೊರಹೊಮ್ಮಲಿದೆ.

PREV
click me!

Recommended Stories

ಪೆಟ್ರೋಲ್ ಬೆಲೆ ಏರಿಕೆಯಾದರೂ ಚಿಂತೆ ಇಲ್ಲ, ಜೂ.5ಕ್ಕೆ ಮಾರುತಿ ಸುಜುಕಿ ಫ್ಲೆಕ್ಸ್ ಫ್ಯೂಯೆಲ್ ಕಾರು ಲಾಂಚ್
27 KM ಮೈಲೇಜ್ ಕೊಡುವ ಹೊಸ ಫೇಸ್‌ಲಿಫ್ಟ್‌ ಕಾರು ಭಾರತದಲ್ಲಿ ಬಿಡುಗಡೆ: ಕೇವಲ ₹11.99 ಲಕ್ಷಕ್ಕೆ ಲಕ್ಷುರಿ ಫೀಚರ್ಸ್!