ಭಾರತದ ಮಿಲಿಟರಿ ಶಕ್ತಿಯಲ್ಲಿದೆ 4 ಅತ್ಯಾಧುನಿಕ ವಾಹನ!

By Web DeskFirst Published Feb 27, 2019, 4:20 PM IST
Highlights

ಭಾರತ ತನ್ನ ಮಿಲಿಟರಿ ಶಕ್ತಿಯನ್ನ ವರ್ಷದಿಂದ ವರ್ಷಕ್ಕೆ ಹೆಚ್ಚಿಸಿದೆ. ಜೊತೆಗೆ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದೆ. ಭಾರತದ ಮಿಲಿಟರಿಯಲ್ಲಿ ಹಲವು ವಾಹನಗಳಿವೆ. ಇದರಲ್ಲಿ  4 ಅತ್ಯಾಧುನಿಕ ವಾಹನಗಳು ಮಿಲಿಟರಿ ಶಕ್ತಿಯನ್ನು ಮತ್ತಷ್ಟು ಬಲಪಡಿಸಿದೆ.

ನವದೆಹಲಿ(ಫೆ.27): ವಿಶ್ವದ ಅತೀ ದೊಡ್ಡ ಮಿಲಿಟರಿ ಶಕ್ತಿಗಳಲ್ಲಿ ಭಾರತ ಕೂಡ ಸ್ಥಾನ ಪಡೆದಿದೆ. ಭಾರತ ಪ್ರತಿ ವರ್ಷ ಅತ್ಯಾಧುನಿಕ ಶಸ್ತ್ರಾಸ್ತ್ರ, ಮದ್ದು ಗುಂಡುಗಳನ್ನ ಖರೀದಿಸುತ್ತೆ. ಇದರ ಜೊತೆಗೆ ಅತೀ ಮುಖ್ಯವಾಗಿ ಅತ್ಯಾಧುನಿಕ ವಾಹನಗಳನ್ನೂ ಖರೀದಿಸುತ್ತೆ. ಭಾರತದ ಮಿಲಿಟರಿಯಲ್ಲಿ 4 ಅತ್ಯಾಧುನಿಕ ವಾಹನಗಳಿವೆ. 

ಟಾಟಾ ಮರ್ಲಿನ್ 


ಭಾರತೀಯ ಸೇನೆಗಾಗಿ ನಿರ್ಮಿಸಲಾದ ನೂತನ ಟಾಟಾ ಮರ್ಲಿನ್ LSV ಕಾರು ಶೀಘ್ರದಲ್ಲೇ ಸ್ರೇರ್ಪಡೆಗೊಳ್ಳಲಿದೆ. ನೂತನ ಟಾಟಾ ಮರ್ಲಿನ್ ವಾಹನ, STANAG 4569 ಲೆವೆಲ್ 1 ಭದ್ರತೆ ನೀಡಲಿದೆ.(NATO ಪ್ರಮಾಣೀಕೃತ ಗರಿಷ್ಠ ಭದ್ರತೆ) ಗ್ರೇನೇಡ್ ದಾಳಿ, ಸಣ್ಣ ಬಾಂಬ್ ಸೇರಿದಂತೆ ಹಲವು ಅಪಾಯದ ಸಂದರ್ಭದಲ್ಲೂ ಈ ವಾಹನ ಭದ್ರತೆ ನೀಡಲಿದೆ. ಟಾಟಾ ಮರ್ಲಿನ್ LSV ಕಾರಿನಲ್ಲಿ7.6mm ಗನ್, 40mm ಅಟೋಮ್ಯಾಟಿಕ್ ಗ್ರೇನೇಡ್, ಆ್ಯಂಟಿ ಟ್ಯಾಂಕ್ ಮಿಸೈಲ್ಸ್ ಸೇರಿದಂತೆ ಪ್ರಮುಖ ಶಸ್ತ್ರಾಸ್ತ್ರಗಳನ್ನು ಒಳಗೊಂಡಿದೆ. ಇನ್ನು ಈ ಕಾರು 3.3 ಲೀಟರ್ ಲಿಕ್ವಿಡ್ ಕೂಲ್‌ಡ್, ಡೈರೈಕ್ಟ್ ಇಂಜೆಕ್ಟ್ ಡೀಸೆಲ್ ಎಂಜಿನ್ ಹೊಂದಿದೆ. 185bhp ಪವರ್ ಹಾಗೂ 450nm ಟಾರ್ಕ್ ಉತ್ಪಾದಿಸಬಲ್ಲ ಸಾಮಾರ್ಥ್ಯ ಹೊಂದಿದೆ.

ಇದನ್ನೂ ಓದಿ: ವಿರಾಟ್ ಕೊಹ್ಲಿ ನೆಚ್ಚಿನ ಆಡಿ ಕಾರಿನ ಈಗಿನ ಪರಿಸ್ಥಿತಿ ಶೋಚನೀಯ- ಕಾರಣವೇನು?

ರೆನಾಲ್ಟ್ ಶೆರ್ಪಾ


NSG ಕಮಾಂಡೋ, ಕಾಶ್ಮೀರದ CRPF ಯೋಧರು ಹಾಗೂ ಗೃಹ ಸಚಿವಾಲಯ ಕೂಡ ರೆನಾಲ್ಟ್ ಶೆರ್ಪಾ ವಾಹನ ಬಳಸುತ್ತಿದೆ. 4.76 ಲೀಟರ್ ಡೀಸೆಲ್ ಎಂಜಿನ್ ಹೊಂದಿರು ಈ ವಾಹನ 215 Bhp ಪವರ್ ಹಾಗೂ 800 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ಒಂದು ಬಾರಿ ಇಂಧನ ತುಂಬಿಸಿದರೆ 1000 ಕಿ.ಮೀ ಮೈಲೇಜ್ ನೀಡಲಿದೆ.

ಮಹೀಂದ್ರ ಮಾರ್ಕ್ಸ್‌ಮ್ಯಾನ್


ಮಹೀಂದ್ರ ಮಾರ್ಕ್ಸ್‌ಮ್ಯಾನ್ ಬುಲೆಟ್ ಪ್ರೂಫ್ ವಾಹನವಾಗಿದ್ದು, ಶಸ್ತ್ರಾಸ್ತ್ರಗಳನ್ನ ಹೊಂದಿದೆ. ಕಾಶ್ಮೀರದಲ್ಲಿ ಭಾರತೀಯ ಸೇನೆ ಹಾಗೂ ಹಲವು ರಾಜ್ಯದ ಪೊಲೀಸ್ ಇಲಾಖೆಗಳು ಈ ವಾಹನ ಬಳಕೆ ಮಾಡುತ್ತಿದೆ. 2.5 ಲೀಟರ್ ಡೀಸೆಲ್ ಎಂಜಿನ್ ಹೊಂದಿರು ಈ ವಾಹನ 105 Bhp ಪವರ್ ಹಾಗೂ 228 Nm  ಪೀಕ್ ಟಾರ್ಕ್ ಉತ್ಪಾದಿಸಲಿದೆ.

ಇದನ್ನೂ ಓದಿ: ನಂಬರ್ ಪ್ಲೇಟ್‌ನಲ್ಲಿ ಇಮೋಜಿ ಬಳಸಲು ಅವಕಾಶ!

ವೈಪರ್

ಶ್ರೀ ಲಕ್ಷ್ಮಿ ಡಿಫೆನ್ಸ್ ಸೊಲ್ಯುಶನ್ ಸಿದ್ದಪಡಿಸಿರುವ ವೈಪರ್ ಕೂಡ ಶಸ್ತ್ರಾಸ್ತ್ರ ಹೊಂದಿರು ಮಿಲಿಟರಿ ವಾಹನ. ಭದ್ರತೆಯಲ್ಲಿ B7+ ರೇಟಿಂಗ್ ಹೊಂದಿರುವ ಈ ವಾಹನ ಕೂಡ ಭಾರತೀಯ ಸೇನೆ ಬಳಸುತ್ತಿದೆ. ಹೆಚ್ಚಾಗಿ ಜಮ್ಮು ಮತ್ತು ಕಾಶ್ಮೀರ ಹಾಗೂ ಭಾರತೀಯ ಸೇನಾ ಕೇಂದ್ರಗಳಲ್ಲಿ ಈ ವಾಹನ ಬಳಕೆಯಲ್ಲಿದೆ.

click me!