ಮಹೀಂದ್ರ KUV100 ಪ್ರತಿಸ್ಪರ್ಧಿ ಟಾಟಾ HBX ರೋಡ್ ಟೆಸ್ಟ್ ಆರಂಭ!

By Suvarna NewsFirst Published Aug 9, 2020, 3:28 PM IST
Highlights

SUV, ಕಾಂಪಾಕ್ಟ್ SUV, ಹ್ಯಾಚ್‌ಬ್ಯಾಕ್, ಸೆಡಾನ್ ಸೇರಿದಂತೆ ಎಲ್ಲಾ ರೀತಿಯ ಕಾರು ಬಿಡುಗಡೆ ಮಾಡಿ ಯಶಸ್ವಿಯಾಗಿರುವ ಟಾಟಾ ಮೋಟಾರ್ಸ್ ಇದೀಗ ಮಿನಿ SUV ಕಾರು ಬಿಡುಗಡೆಗೆ ಮುಂದಾಗಿದೆ. ಇದೀಗ ನೂತನ ಮಿನಿ SUV ಕಾರಾದ HBX ರೋಡ್ ಟೆಸ್ಟ್ ಆರಂಭಗೊಂಡಿದೆ.  ನೂತನ ಕಾರಿನ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ಮುಂಬೈ(ಆ.09): ಟಾಟಾ ಮೋಟಾರ್ಸ್ ಇದೀಗ ಮತ್ತೊಂದು ಕಾರು ಬಿಡುಗಡೆಗೆ ತಯಾರಿ ನಡೆಸುತ್ತಿದೆ. 2020ರ ಆಟೋ ಎಕ್ಸ್ಪೋದಲ್ಲಿ ಅನಾವರ ಮಾಡಲಾದ HBX ಮಿನಿ SUV ಕಾರು ಬಿಡುಗಡೆ ಮಾಡಲು ರೆಡಿಯಾಗಿದೆ. 2020ರಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದ ಟಾಟಾ ಮೋಟಾರ್ಸ್‌ಗೆ ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಹೊಡೆತ ನೀಡಿತು. ಹೀಗಾಗಿ ನೂತನ HBX ಕಾರು ಬಿಡುಗಡೆ ಕೊಂಚ ವಿಳಂಬವಾಗಲಿದೆ.

ಭಾರತದ ಹೆಮ್ಮೆಯ ಟಾಟಾ ಮೋಟಾರ್ಸ್‌ನಿಂದ ಶೀಘ್ರದಲ್ಲಿ 4 ಕಾರು ಬಿಡುಗಡೆ!

ALFA ARC ಪ್ಲಾಟ್‌ಫಾರ್ಮ್ ಅಡಿ ಈ ಕಾರು ನಿರ್ಮಾಣವಾಗಿದೆ.  ಇದೇ ಆಲ್ಫಾ ಪ್ಲಾಟ್‌ಫಾರ್ಮ್ ಅಡಿ ಟಾಟಾ ಅಲ್ಟ್ರೋಜ್ ಕಾರು ನಿರ್ಮಾಣ ಮಾಡಲಾಗಿದೆ. ಅಲ್ಟ್ರೋಜ್ ಕಾರಿನ ಎಂಜಿನ್ ಬಳಸಲಾಗತ್ತದೆ. 1.2 ಲೀಟರ್ ಎಂಜಿನ್ ವೇರಿಯೆಂಟ್‌ನಲ್ಲಿ ನೂತನ ಕಾರು ಬಿಡುಗಡೆಯಾಗಲಿದೆ.

ಟಾಟಾ ನೆಕ್ಸಾನ್ ಮನಸೋತ ಮಂದಿರಾ ಬೇಡಿ; ನೂತನ ಎಲೆಕ್ಟ್ರಿಕ್ ಕಾರು ಖರೀದಿ!.

ಸದ್ಯ ರೋಡ್ ಟೆಸ್ಟಿಂಗ್ ಆರಂಭಿಸಿರುವ ಟಾಟಾ HBX ಕಾರು, ಗ್ರಾಹಕರ ಕುತೂಹಲ ಹೆಚ್ಚಿಸಿದೆ. LED ಹೆಡ್‌ಲ್ಯಾಂಪ್ಸ್, ಟೈಲ್ ಲ್ಯಾಂಪ್, ರೇರ್ ವೈಪರ್ ಸೇರಿದಂತೆ ಆಟೋ ಎಕ್ಸ್ಪೋದಲ್ಲಿ ಅನಾವರಣ ಮಾಡಿದ ಕಾನ್ಸೆಪ್ಟ್ ಕಾರಿನ ಶೇಕಡಾ 95 ರಷ್ಟು ಸಾಮ್ಯತೆ ಇರಲಿದೆ ಎಂದು ಟಾಟಾ ಮೋಟಾರ್ಸ್ ಹೇಳಿದೆ.

ಕ್ಲೇಮೇಟ್ ಕಂಟ್ರೋಲ್, ಕೀಲೆಸ್ ಎಂಟ್ರಿ, ಪುಶ್ ಬಟನ್, ABS+EBD, ಡ್ಯುಯೆಲ್ ಏರ್‌ಬ್ಯಾಗ್, ರೇರ್ ಪಾರ್ಕಿಂಗ್ ಸೆನ್ಸಾರ್, ಸೀಟ್ ಬೆಲ್ಟ್ ಅಲರಾಂ ಸೇರಿದಂತೆ ಸರ್ಕಾರದ ಕಡ್ಡಾಯ ಸೇಫ್ಟಿ ಫೀಚರ್ಸ್ ಕೂಡ ಇರಲಿದೆ.  1.2-ಲೀಟರ್, 3 ಸಿಲಿಂಡರ್, ರಿವೊಟ್ರೊನ್ ಪೆಟ್ರೋಲ್ ಎಂಜಿನ್  ಹೊಂದಿದ್ದು, 86PS ಪವರ್ ಹಾಗೂ  113Nm ಪೀಕ್ ಟಾರ್ಕ್ ಉತ್ಪಾದಿಸಲಿದೆ.

click me!