ಮಾರುತಿ ಎರ್ಟಿಗಾ ಕಾರಿಗೆ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ದೇಸಿ ಟಾಟಾ ಕಾರು!

By Suvarna News  |  First Published Jul 5, 2020, 2:59 PM IST

 ಕಳೆದ ಕೆಲ ವರ್ಷಗಳಿಂದ ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವಾಹನ ವಿಭಾಗದಲ್ಲಿ ಹೆಚ್ಚು ತೊಡಗಿಸಿಕೊಂಡಿದೆ. ಹಲವು ಹೊಚ್ಚ ಕಾರುಗಳನ್ನು ಬಿಡುಗಡೆ ಮಾಡಿ ಯಶಸ್ವಿಯಾಗಿದೆ. ಇದೀಗ ಮಾರುತಿ ಸುಜುಕಿಯ ಎರ್ಟಿಗಾ ಕಾರಿಗೆ ಪ್ರತಿಸ್ಪರ್ಧಿಯಾಗಿ ನೂತನ ಕಾರನ್ನು ಬಿಡುಗಡೆ ಮಾಡುತ್ತಿದೆ. 


ನವದೆಹಲಿ(ಜು.05): ಟಾಟಾ ಟಿಯಾಗೋ, ಟಾಟಾ ಟಿಗೊರ್, ಟಾಟಾ ನೆಕ್ಸಾನ್, ಟಾಟಾ ಹ್ಯಾರಿಯರ್, ಟಾಟಾ ಅಲ್ಟ್ರೋಝ್..ಹೀಗೆ ಒಂದರ ಮೇಲೊಂದರಂತೆ ಕಾರುಗಳನ್ನು ಬಿಡುಗಡೆ ಮಾಡಿ ಯಶಸ್ವಿಯಾಗಿರುವ ಟಾಟಾ ಮೋಟಾರ್ಸ್ ಇದೀಗ MPV ಕಾರು ಬಿಡುಗಡೆ ಮಾಡುತ್ತಿದೆ. ಹ್ಯಾಚ್‌ಬ್ಯಾಕ್, ಸೆಡಾನ್, SUV ಬಳಿಕ ಇದೀಗ MPV ಕಾರಿನತ್ತ ಟಾಟಾ ಚಿತ್ತ ಹರಿಸಿದೆ. ಶೀಘ್ರದಲ್ಲೇ ಟಾಟಾದ ನೂತನ MPV ಕಾರು ಬಿಡುಗಡೆಯಾಗಲಿದೆ.

ಬಿಡುಗಡೆಗೆ ಸಜ್ಜಾಗುತ್ತಿದೆ ಟಾಟಾ ಗ್ರಾವಿಟಾಸ್, ಇಲ್ಲಿದೆ 7 ಸೀಟರ್ ಕಾರಿನ ವಿಶೇಷತೆ!.

Latest Videos

undefined

ಮಾರುತಿ ಎರ್ಟಿಗಾ, ಮಹೀಂದ್ರ ಮೊರಾಜೋ ಕಾರಿಗೆ ಪ್ರತಿಸ್ಪರ್ಧಿಯಾಗಿ ಟಾಟಾ ಮೋಟಾರ್ಸ್ ನೂತನ MPV ಕಾರು ಮಾರುಕಟ್ಟೆ ಪ್ರವೇಶಿಸಲಿದೆ. 1.5 ಲೀಟರ್ ಡೀಸಲ್ ಹಾಗೂ 1.5 ಲೀಟರ್ ಪೆಟ್ರೋಲ್ ಎಂಜಿನ್ ವೇರಿಯೆಂಟ್‌ ಆಯ್ಕೆ ನೀಡುವ ಸಾಧ್ಯತೆ ಇದೆ. ಅಲ್ಟ್ರೋಝ್ ಕಾರು ಉತ್ಪಾದಿಸಿದ ಅಲ್ಫಾ ಪ್ಲಾಟ್‌ಫಾರ್ಮ್ ಅಡಿಯಲ್ಲಿ ನೂತನ MPV ಕಾರು ನಿರ್ಮಾಣವಾಗಲಿದೆ.

ಮಾರುತಿ Dzire, ಹೊಂಡಾ ಅಮೇಜ್ ಪ್ರತಿಸ್ಪರ್ಧಿ, ಬರುತ್ತಿದೆ ಟಾಟಾ ಸೆಡಾನ್ ಕಾರು!.

ಟಾಟಾ ನೆಕ್ಸಾನ್ ಕಾರಿನ ಪವರ್ ನೂತನ ಕಾರಿನಲ್ಲೂ ಇರಲಿದೆ. ಟಾಟಾ MPV ಕಾರಿಗೂ ಮುನ್ನ ಈಗಾಗಲೇ ಆಟೋ ಎಕ್ಸ್ಪೋದಲ್ಲಿ ಅನಾವರಣ ಮಾಡಿದ ಟಾಟಾ ಮಿನಿ SUV ಹಾರ್ನ್‌ಬಿಲ್ ಬಿಡುಗಡೆಯಾಗಲಿದೆ. ಕೊರೋನಾ ವೈರಸ್ ಕಾರಣ ಹಾರ್ನ್‌ಬಿಲ್ ಬಿಡುಗಡೆ ಕೊಂಚ ತಡವಾಗಿದೆ. ಈ ವರ್ಷದ ಅಂತ್ಯದಲ್ಲಿ ಹಾರ್ನ್‌ಬಿಲ್ ಬಿಡುಗಡೆಯಾಗಲಿದೆ. ಬಳಿಕ ಟಾಟಾ MPV ಕಾರು ಮಾರುಕಟ್ಟೆ ಪ್ರವೇಶಿಸಲಿದೆ.

click me!