ಟಾಟಾ ಮೋಟಾರ್ಸ್ ಫ್ಲೀಟ್ ಎಡ್ಜ್ ಪರಿಚಯಿಸುತ್ತಿದೆ. ಅತ್ಯುತ್ತಮ ಫ್ಲೀಟ್ ನಿರ್ವಹಣೆಗಾಗಿ ಮುಂದಿನ ಪೀಳಿಗೆಗೆ ಇದೊಂದು ವಿಶೇಷ ಡಿಜಿಟಲ್ ಪರಿಹಾರವಾಗಿದೆ. ವಾಹನ ಕಾರ್ಯಕ್ಷಮತೆ ಹೆಚ್ಚಿಸುವುದು ಮತ್ತು ಕಾರ್ಯಾಚರಣೆಯನ್ನು ಸುಗಮಗೊಳಿಸುವ ಮೂಲಕ ಗ್ರಾಹಕರಿಗೆ ಉತ್ತಮ ತೃಪ್ತಿಯನ್ನು ನೀಡಲಿದೆ.
ಬೆಂಗಳೂರು(ಜು.13): ಭಾರತದ ಖ್ಯಾತ ವಾಣಿಜ್ಯ ವಾಹನ ತಯಾರಕರಾದ ಟಾಟಾ ಮೋಟಾರ್ಸ್, ಮುಂದಿನ ತಲೆಮಾರಿನ ಸಂಪರ್ಕಿತ ವಾಹನ ಪರಿಹಾರವಾದ ಟಾಟಾ ಮೋಟಾರ್ಸ್ ಫ್ಲೀಟ್ ಎಡ್ಜ್ ಪ್ರಾರಂಭಿಸುವುದಾಗಿ ಘೋಷಿಸಿದೆ.
ಡೌನ್ ಪೇಮೆಂಟ್ ಇಲ್ಲ, 6 ತಿಂಗಳು EMI ಇಲ್ಲ, ಭರ್ಜರಿ ಆಫರ್ ಘೋಷಿಸಿದ ಟಾಟಾ!.
2012ರಿಂದಲೂ ಟಾಟಾ ಮೋಟಾರ್ಸ್ ತನ್ನ ವಾಹನಗಳಲ್ಲಿ ಟೆಲಿಮ್ಯಾಟಿಕ್ಸ್ ಪರಿಹಾರಗಳನ್ನು ಒಗದಿಸುವಲ್ಲಿ ಮುಂಚೂಣಿಯಲ್ಲಿದೆ. ಪ್ರಸ್ತುತ 2,00,000ಕ್ಕೂ ಅಧಿಕ ಟಾಟಾ ಮೋಟಾರ್ಸ್ M ಮತ್ತು HCV ವಾಹನಗಳು ಟೆಲಿಮ್ಯಾಟಿಕ್ಸ್ ಘಟಕಗಳನ್ನು ಅಳವಡಿಸಲ್ಪಟ್ಟಿವೆ. ಟೆಲಿಮ್ಯಾಟಿಕ್ಸ್ ಕಂಟ್ರೋಲ್ ಯುನಿಟ್ (TCU) ನಿಂದ ಉತ್ಪತ್ತಿಯಾಗುವ ಹೆಚ್ಚಿನ ಮಾಹಿತಿಯನ್ನು ಸಂಸ್ಕರಿಸುವ ಸಾಮರ್ಥ್ಯವನ್ನು ಹೊಂದಿರುವ ಫ್ಲೀಟ್ ಎಡ್ಜ್ ಪರಿಚಯದೊಂದಿಗೆ ಟಾಟಾ ಮೋಟಾರ್ಸ್ ಸಂಪರ್ಕಿತ ವಾಹನ ಪರಿಹಾರಗಳನ್ನು ಸುಲಭವಾಗಿ ನೀಡಲಿದೆ.
ಮತ್ತೆ ನೆರವು ನೀಡಿದ ಟಾಟಾ, 20 ಆ್ಯಂಬುಲೆನ್ಸ್, 100 ವೆಂಟಿಲೇಟರ್ ಹಸ್ತಾಂತರ!..
ಟೆಲಿಮ್ಯಾಟಿಕ್ಸ್ ಕಂಟ್ರೋಲ್ ಯುನಿಟ್ ಉಪಯೋಗ :
ನಿರ್ದಿಷ್ಟ ಸಮಯದಲ್ಲಿ ವಾಹನಗಳನ್ನು ಟ್ರ್ಯಾಕ್ ಮತ್ತು ಟ್ರೇಸ್ ಮಾಡಲು ನೆರವಾಗುತ್ತದೆ. ವಾಹನ ಆರೋಗ್ಯ ಕಾಪಾಡುವುದು, ಚಾಲನಾ ನಡವಳಿಕೆಯ ಮೇಲೆ ನಿಗಾ, ಇಂಧನ ದಕ್ಷತೆ ಮತ್ತು ಇಂಧನ ನಷ್ಟ ಎಚ್ಚರಿಕೆ ಒಟ್ಟಾರೆ ವಾಹನ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಇದು ನೆರವಾಗಲಿದೆ. ಅಲ್ಲದೆ ಪ್ರಮುಖ ವಾಹನ ದಾಖಲೆಗಳ ದಿನಾಂಕವನ್ನು ಗ್ರಾಹಕರು ಪತ್ತೆಹಚ್ಚಲು ಸಾಧ್ಯವಾಗುವಂತಹ ವ್ಯವಸ್ಥೆ ಇದಾಗಿದ್ದು, ಟಾಟಾ ಮೋಟಾರ್ಸ್ ಫ್ಲೀಟ್ ಎಡ್ಜ್ ಪೋರ್ಟಲ್‌ನಲ್ಲಿ ಬಳಕೆದಾರ ಸ್ನೇಹಿ ಇಂಟರ್ಫೇಸ್ ಮೂಲಕ ಗ್ರಾಹಕರಿಗೆ ಲಭ್ಯವಿರುತ್ತವೆ ಮತ್ತು ಗ್ರಾಹಕರು ತಮ್ಮ ಫ್ಲೀಟ್ ಅನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ. ಫ್ಲೀಟ್ ಎಡ್ಜ್ ಅನ್ನು ಕಾಲಕಾಲಕ್ಕೆ ಅಪ್ಲಿಕೇಶನ್ (ಆಪ್) ಮೂಲಕ ಸ್ಮಾರ್ಟ್‍ಫೋನ್ ಗಳಲ್ಲೂ ಬಳಸಬಹುದು.
i20, ಪೊಲೋ ಹಿಂದಿಕ್ಕಿ ದಾಖಲೆ ಬರೆದ ಟಾಟಾ ಅಲ್ಟ್ರೋಜ್ ಕಾರು!
ಫ್ಲೀಟ್ ಎಡ್ಜ್‍ನ ಸಾಮಥ್ರ್ಯ ಮತ್ತು ಶಕ್ತಿಯ ಬಗ್ಗೆ ಮಾತನಾಡಿದ ಟಾಟಾ ಮೋಟಾರ್ಸ್‍ನ ವಾಣಿಜ್ಯ ವಾಹನ ವ್ಯವಹಾರ ಘಟಕದ ಅಧ್ಯಕ್ಷ ಗಿರೀಶ್ ವಾಘ್ , ಡಿಜಿಟಲ್ ತಂತ್ರಜ್ಞಾನ ಮತ್ತು ಸಂಪರ್ಕ ಪರಿಹಾರಗಳು ಪ್ರಯಾಣಿಕರ ಮತ್ತು ಸರಕುಗಳ ಸಾಗಣೆಕೆಗೆ ಮತ್ತಷ್ಟು ವೇಗವನ್ನು ನೀಡಲಿದೆ. ವಾಹನಗಳು ಈಗ ಟೆಲಿಮ್ಯಾಟಿಕ್ಸ್ ಘಟಕದ ಮೂಲಕ ಕಳುಹಿಸಬಹುದಾದ ಉನ್ನತ ದತ್ತಾಂಶವು ಇಡೀ ಲಾಜಿಸ್ಟಿಕ್ಸ್ ವ್ಯವಸ್ಥೆಗೆ ಹಲವಾರು ಹೊಸ ಸಾಧ್ಯತೆಗಳ ಅವಕಾಶವನ್ನು ನೀಡುತ್ತದೆ. ಫ್ಲೀಟ್ ಎಡ್ಜ್ ನೊಂದಿಗೆ ಗ್ರಾಹಕರಿಗೆ ಹೆಚ್ಚಿನ ಮಾಹಿತಿ ದೊರೆಯಲಿದೆ. ಮತ್ತು ಕಾರ್ಯಾಚರಣೆಗಳ ಮೇಲೆ ಹೆಚ್ಚಿನ ನಿಯಂತ್ರಣವನ್ನು ದೂರದಿಂದಲೇ ಸಾಧಿಸುವ ಮೂಲಕ ಹೊಸ ಮಾನದಂಡವನ್ನು ಟಾಟಾ ಮೋಟಾರ್ಸ್ ನೀಡಿದೆ ಎಂದರು.
ಟ್ರಕ್ ಚಾಲಕರಿಗೆ ಆಹಾರ, ವೈದ್ಯಕೀಯ ನೆರವು ಒದಗಿಸಿದ ಟಾಟಾ ಮೋಟಾರ್ಸ್!..
ನಾವು ವಾಹನಗಳಿಂದ ಡೇಟಾವನ್ನು ತೆಗೆದುಕೊಳ್ಳುತ್ತಿದ್ದೇವೆ. ಕಾರ್ಯಾಚರಣೆಯನ್ನು ಮತ್ತಷ್ಟು ಸುಗಮಗೊಳಿಸಲು ಮಾಹಿತಿಯನ್ನು ಬಳಸುತ್ತೇವೆ. ವಾಹನಪಡೆಯ ಮಾಲೀಕರು ಮತ್ತು ವ್ಯವಸ್ಥಾಪಕರಿಗೆ ಪ್ರಸ್ತುತ ಸನ್ನಿವೇಶಕ್ಕೆ ಅನುಗುಣವಾಗಿ ಅತ್ಯುತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ನೆರವಾಗುವ ಸಲುವಾಗಿ ಫ್ಲೀಟ್ ಎಡ್ಜ್ ಪರಿಚಯಿಸುತ್ತಿದ್ದೇವೆ. ಫ್ಲೀಟ್ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ ಇದರೊಂದಿಗೆ ವಾಹನ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುವ ಮೂಲಕ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ ಎಂದರು.
ಫ್ಲೀಟ್ ಎಡ್ಜ್ ಪರಿಹಾರ ವ್ಯವಸ್ಥೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಇದು ಟಾಟಾ ಮೋಟಾರ್ಸ್ ಟ್ರಕ್ ಮತ್ತು ಬಸ್‍ಗಳ ಸಂಪೂರ್ಣ M & HCV ಬಿಎಎಸ್-6 ಶ್ರೇಣಿಯೊಂದಿಗೆ ಲಭ್ಯವಿದೆ ಮತ್ತು ಆಯ್ದ ಶ್ರೇಣಿಯ I & LCV ಮತ್ತು SCV ಮಾದರಿಗಳೊಂದಿಗೂ ಸಹ ಲಭ್ಯವಿದೆ.
ಟಾಟಾ ಮೋಟಾರ್ಸ್ ಸಂಪರ್ಕಿತ ಟ್ರಕ್‍ಗಳ ಬಿಎಸ್-6 ಶ್ರೇಣಿಯು ಇತ್ತೀಚಿನ ಇನ್‍ಬಿಲ್ಟ್ ಎಂಬೆಡೆಡ್ ಸಿಮ್‍ನೊಂದಿಗೆ ಹೊರಬರುತ್ತಿದೆ. ಫ್ಲೀಟ್ ಎಡ್ಜ್‌ನಲ್ಲಿ ಬಳಸಲಾಗುವ ಟಿಸಿಯು ಎಐಎಸ್ 140 ಕಂಪ್ಲೈಂಟ್ ಆಗಿದೆ, ಸರ್ಕಾದ ನಿಯಮಗಳು, ಮಾರ್ಗಸೂಚಿಗಳನ್ವಯ ತುರ್ತು ಬಟನ್‍ಗಳು, ಅಧಿಕೃತ ಬ್ಯಾಕೆಂಡ್ ಸರ್ವರ್, ವಾಹನ ಸ್ಥಳ ಪತ್ತೆ ಸಂವಹನ ವ್ಯವಸ್ಥೆ ಸೇರಿದಂತೆ ಸರ್ಕಾರದ ಎಲ್ಲಾ ಸುರಕ್ಷತೆ ಮಾನದಂಡಗಳನ್ನು ಒಳಗೊಂಡಿದೆ.
ಟಾಟಾ ಮೋಟಾರ್ಸ್‍ನ ವ್ಯವಸ್ಥೆಗಳೊಂದಿಗೆ ಬ್ಯಾಕೆಂಡ್‍ನಲ್ಲಿ ಸಂಪೂರ್ಣವಾಗಿ ಸಂಯೋಜಿಸಲ್ಪಟ್ಟ ಫ್ಲೀಟ್ ಎಡ್ಜ್ ಗ್ರಾಹಕರಿಗೆ ತಮ್ಮ ಸಂಪೂರ್ಣ ವ್ಯವಹಾರ ಕಾರ್ಯಾಚರಣೆಗಳ ಮೇಲೆ ಉತ್ತಮ ನಿಯಂತ್ರಣವನ್ನು ಹೊಂದಿರುವ ಕೊನೆಯಿಂದ ಕೊನೆಯವರೆಗೆ ಸಂಪರ್ಕಿತ ಅನುಭವವನ್ನು ಒದಗಿಸುತ್ತದೆ. ಫ್ಲೀಟ್ ಎಡ್ಜ್ ಫ್ಲೀಟ್ ಮಾಲೀಕರು ಯಾವಾಗಲೂ ತಮ್ಮ ಟ್ರಕ್ ಚಾಲಕರು ಮತ್ತು ವಾಹನಗಳೊಂದಿಗೆ ಚಾಲಕರ ಕಾರ್ಯಕ್ಷಮತೆಯ ಮೇಲೆ ಉತ್ತಮ ನಿಯಂತ್ರಣಕ್ಕಾಗಿ ಅತ್ಯಾಧುನಿಕ ವೈಶಿಷ್ಟ್ಯಗಳ ಮೂಲಕ ಸಂಪರ್ಕ ಹೊಂದಿದ್ದಾರೆ ಎಂದು ಖಚಿತಪಡಿಸುತ್ತದೆ. ಈ ವ್ಯವಸ್ಥೆಯು ಅನಧಿಕೃತ ವಾಹನ ಚಲನೆಯನ್ನು ಸಹ ಮೇಲ್ವಿಚಾರಣೆ ಮಾಡುತ್ತದೆ ಮತ್ತು ಬಳಕೆದಾರ ಸ್ನೇಹಿ ಗ್ರಾಫಿಕ್ ನಕ್ಷೆಯೊಂದಿಗೆ ವಾಹನದ ನಿಖರವಾದ ಸ್ಥಳವನ್ನು ತಿಳಿಸುತ್ತದೆ.
ಫ್ಲೀಟ್ ಎಡ್ಜ್ ಲೋಕಾರ್ಪಣೆ, ಸಂಪರ್ಕಿತ ವಾಣಿಜ್ಯ ವಾಹನಗಳ ಹೊಸ ಯುಗದ ಆರಂಭವನ್ನು ಸೂಚಿಸುತ್ತದೆ. ಟಾಟಾ ಮೋಟಾರ್ಸ್ ವಾಣಿಜ್ಯ ವಾಹನಗಳೊಂದಿಗೆ ತಮ್ಮ ವ್ಯವಹಾರಗಳನ್ನು ಲಾಭದಾಯಕವಾಗಿ ಮತ್ತು ಸುಸ್ಥಿರವಾಗಿ ಬೆಳೆಸಿಕೊಳ್ಳುವುದರಿಂದ ಗ್ರಾಹಕರಿಗೆ ಅತ್ಯುತ್ತಮ ಅನುಭವವನ್ನು ನೀಡುವ ಕಂಪನಿಯ ನಿರಂತರ ಪ್ರಯತ್ನಕ್ಕೆ ಇದೊಂದು ಅತ್ಯಾಧುನಿಕ ಸಂಕೇತ.