ಇನೋವಾ ಪ್ರತಿಸ್ಪರ್ಧಿ MG ಹೆಕ್ಟರ್ ಪ್ಲಸ್ ಕಾರು ಬಿಡುಗಡೆ!

By Suvarna News  |  First Published Jul 13, 2020, 3:08 PM IST

ಬಹುನಿರೀಕ್ಷಿತ MG ಹೆಕ್ಟರ್ ಪ್ಲಸ್ ಕಾರು ಭಾರತದಲ್ಲಿ ಬಿಡುಗಡೆಯಾಗಿದೆ. ಟೊಯೋಟಾ ಇನೋವಾ ಸೇರಿದಂತೆ  6 ಸೀಟರ್ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿರುವ ನೂತನ ಹೆಕ್ಟರ್ ಪ್ಲಸ್ ಕಾರಿನ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.
 


ನವದೆಹಲಿ(ಜು.13): ಕಳೆದ ವರ್ಷ MG ಮೋಟಾರ್ಸ್ ಹೆಕ್ಟರ್ ಕಾರು ಬಿಡುಗಡೆ ಮಾಡಿ ಯಶಸ್ವಿಯಾಗಿದೆ. ಇದೀಗ ಈ ಯಶಸ್ಸಿನ ಬೆನ್ನಲ್ಲೇ 6 ಸೀಟಿನ ಹೆಕ್ಟರ್ ಪ್ಲಸ್ ಕಾರು ಬಿಡುಗಡೆ ಮಾಡಿದೆ. ಕೊರೋನಾ ವೈರಸ್ ಕಾರಣ ಎಂಜಿ ಹೆಕ್ಟರ್ ಪ್ಲಸ್ ಕಾರು ಬಿಡುಗಡೆ ಕೊಂಚ ವಿಳಂಬವಾಗಿತ್ತು. ಕೊನೆಗೂ ಕಾರು ಭಾರತದ ಮಾರುಕಟ್ಟೆ ಪ್ರವೇಶಿಸಿದೆ. 

50 ಸಾವಿರ ರೂಪಾಯಿಗೆ ಬುಕ್ ಮಾಡಿ MG ಹೆಕ್ಟರ್ ಪ್ಲಸ್ ಕಾರು!

Latest Videos

MG Hector Plus ಕಾರಿನ ಬೆಲೆ 13.48 ಲಕ್ಷ ರೂಪಾಯಿ(ಎಕ್ಸ್  ಶೋ ರೂಂ) ಯಿಂದ ಆರಂಭಗೊಳ್ಳುತ್ತಿದೆ. ಟಾಪ್ ಎಂಡ್ ಮಾಡೆಲ್ ಬೆಲೆ 18.53 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಆಗಸ್ಟ್ 13ವರೆಗೆ ಈ ಬೆಲೆ ಇರಲಿದೆ. ಬಳಿಕ 50,000 ರೂಪಾಯಿ ಪ್ರತಿ ಮಾಡೆಲ್ ಮೇಲೆ ಹೆಚ್ಚಳವಾಗಲಿದೆ. 

ಬೆಂಗಳೂರಿನಲ್ಲಿ ಎಲ್ಲಿದೆ MG ಎಲೆಕ್ಟ್ರಿಕ್ ಕಾರು ಚಾರ್ಜಿಂಗ್ ಸ್ಟೇಶನ್? ಇಲ್ಲಿದೆ ಲಿಸ್ಟ್!...

MG Hector Plus ಕಾರು 4 ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಸ್ಟೈಲ್, ಸೂಪರ್, ಸ್ಮಾರ್ಟ್ ಹಾಗೂ ಶಾರ್ಪ್ ವೇರಿಯೆಂಟ್ ಆಯ್ಕೆ ನೀಡಲಾಗಿದೆ. ಪೆಟ್ರೋಲ್ MT ವೇರಿಯೆಂಟ್‌ನಿಂದ ಡೀಸೆಲ್ MT ವೇರಿಯೆಂಟ್ ಆಯ್ಕೆ ನೀಡಲಾಗಿದೆ. ಇಷ್ಟೇ ಅಲ್ಲ ಹೆಕ್ಟರ್ ಹಾಗೂ ಹೆಕ್ಟರ್ ಪ್ಲಸ್ ಕಾರಿನನಲ್ಲಿ ಕೆಲ ಬದಾಲವಣೆಗಳನ್ನು ಮಾಡಲಾಗಿದೆ.

ಮುಂಭಾಗದಲ್ಲಿ ಗ್ಲಾಸಿ ಬ್ಲಾಕ್ ಗ್ರಿಲ್ ನೀಡಲಾಗಿದ್ದು ಕಾರಿನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. LED DRls, ಟ್ವೀಕೆಡ್ ಹೆಡ್‌ಲ್ಯಾಂಪ್ಸ್ ನಿಂದ ಕಾರು ಮತ್ತಷ್ಟು ಆಕರ್ಷಕವಾಗಿದೆ. ಹೊಚ್ಚ ಹೊಸ ಬಂಪರ್, ಫ್ಲೋಟಿಂಗ್ ಟರ್ನ್ ಇಂಡಿಕೇಟರ್ಸ್, ಹೊಸ ಟೈಲ್ ಲ್ಯಾಂಪ್ಸ್, ಸ್ಕಿಡ್ ಪ್ಲೇಟ್ ಸೇರದಂತೆ ಕೆಲ ಬದಲಾವಣೆಗಳನ್ನು ಕಾಣಬಹುದು.

6 ಬಣ್ಣಗಳಲ್ಲಿ ನೂತನ MG Hector Plus ಕಾರು ಲಭ್ಯವಿದೆ. 55+ ಕೆನೆಕ್ಟಿವಿಟಿ ಫೀಚರ್ಸ್,  6 ಏರ್‌ಬ್ಯಾಗ್, ABS, EBD, ಹಿಲ್ ಹೋಲ್ಡ್ ಫಂಕ್ಷನ್,  ಸೇರಿದಂತೆ 25+ ಹೆಚ್ಚು ಸುರಕ್ಷತಾ ಫೀಚರ್ಸ್ ಈ ಕಾರಿನಲ್ಲಿದೆ.

click me!