ಸುಜುಕಿ ಆಸೆಸ್ 125 ಸಿಸಿ CBS ಸ್ಕೂಟರ್ ಬಿಡುಗಡೆಯಾಗಿದೆ. ಇದೀಗ ಹೊಂಡಾ ಆಕ್ಟೀವಾ ಸ್ಕೂಟರ್‌ಗೆ ಪೈಪೋಟಿ ಜೋರಾಗಿದೆ. ಹೊಸ ತಂತ್ರಜ್ಞಾನ, ಹೆಚ್ಚುವರಿ ಫೀಚರ್ಸ್‌ನೊಂದಿಗೆ ಬಿಡುಗಡೆಯಾಗಿರುವ ಈ ಸ್ಕೂಟರ್ ಬೆಲೆ ಹಳೇ ಸ್ಕೂಟರ್‌ಗಿಂತ ಕೇವಲ 690 ರೂಪಾಯಿ ಹೆಚ್ಚಳವಾಗಿದೆ.
ನವದೆಹಲಿ(ಫೆ.02): ಸುಜುಕಿ ಸಂಸ್ಥೆಯ ಆಸೆಸ್ 125 ಸಿಸಿ ಸ್ಕೂಟರ್ ಬಿಡುಗಡೆ ಮಾಡಿದೆ. ನೂತನ ಸ್ಕೂಟರ್ CBS(ಕಾಂಬಿ ಬ್ರೇಕಿಂಗ್ ಸಿಸ್ಟಮ್) ತಂತ್ರಜ್ಞಾನ ಅಳವಡಿಸೋ ಮೂಲಕ ಕೇಂದ್ರ ಸರ್ಕಾರದ ನೂತನ ನಿಯಮ ಪಾಲಿಸಿದೆ. ಸುಜುಕಿ ಆಸೆಸ್ 125 ಸಿಸಿ CBS ಸ್ಕೂಟರ್ ಬೆಲೆ ಹಳೇ ಸ್ಕೂಟರ್‌ಗಿಂತ ಕೇವಲ 690 ರೂಪಾಯಿ ಹೆಚ್ಚಳವಾಗಿದೆ.
undefined
ಇದನ್ನೂ ಓದಿ: ಅತೀ ಕಡಿಮೆ ಬೆಲೆಗೆ ನೂತನ ರೆನಾಲ್ಟ್ ಕ್ವಿಡ್ ABS ಕಾರು ಬಿಡುಗಡೆ!
CBS ರಹಿತ ಸ್ಕೂಟರ್ ಬೆಲೆ 55,977 ರೂಪಾಯಿ(ಎಕ್ಸ್ ಶೋ ರೂಂ). ಇನ್ನು ನೂತನ 125 ಸಿಸಿ CBS ಸ್ಕೂಟರ್ ಬೆಲೆ 56,667 ರೂಪಾಯಿ(ಎಕ್ಸ್ ಶೋ ರೂಂ). CBS ತಂತ್ರಜ್ಞಾನದ ಜೊತೆಗೆ ಹೆಚ್ಚುವರಿ ಫೀಚರ್ಸ್ ಅಳವಡಿಸಲಾಗಿದೆ. ಅಲೋಯ್ ವೀಲ್ಹ್ಸ್, ಅನಲಾಗ್ ಡಿಜಿಟಲ್ ಮೀಟರ್, ಪುಶ್ ಸೆಂಟ್ರಲ್ ಲಾಕ್ ಸಿಸ್ಟಮ್, ಲಾಂಗ್ ಸೀಟ್ ಸೇರಿದಂತೆ ಹಲವು ಫೀಚರ್ಸ್ ನೀಡಲಾಗಿದೆ.
ಇದನ್ನೂ ಓದಿ: ಬಟನ್ ಒತ್ತಿದರೆ ಸಾಕು ತನ್ನಷ್ಟಕ್ಕೆ ಆಗುತ್ತೆ ಕಾರು ಪಾರ್ಕ್!
ಎಂಜಿನ್‌ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. 125 ಸಿಸಿ ಎಂಜಿನ್, 8.4bhp ಪವರ್ ಹಾಗೂ 10.2Nm ಟಾರ್ಕ್ ಉತ್ವಾದಿಸಲಿದೆ. 63 kmpl ಮೈಲೇಜ್ ನೀಡಲಿದೆ. ಪೆಟ್ರೋಲ್ ಟ್ಯಾಂಕ್ ಸಾಮರ್ಥ್ಯ 5.6 ಲೀಟರ್. ಫುಲ್ ಟ್ಯಾಂಕ್ ಪೆಟ್ರೋಲ್‌ನಲ್ಲಿ 350 ಕಿ.ಮೀ ಪ್ರಯಾಣಿಸಬಹುದು ಎಂದು ಕಂಪನಿ ಹೇಳಿದೆ.