2019ರ ರೆನಾಲ್ಟ್ ಕ್ವಿಡ್ ಕಾರು ಬಿಡುಗಡೆಯಾಗಿದೆ. ಇತರ ಕಾರಿಗೆ ಹೋಲಿಸಿದರೆ ಕ್ವಿಡ್ ಕಾರಿನ ಬೆಲೆ ಅತ್ಯಂತ ಕಡಿಮೆ. ಜೊತೆಗೆ ಹೆಚ್ಚುವರಿ ಫೀಚರ್ಸ್ ನೀಡಲಾಗಿದೆ. ನೂತನ ಕಾರಿ ವಿಶೇಷತೆ ಏನು? ಇದರ ಬೆಲೆ ಎಷ್ಟು? ಇಲ್ಲಿದೆ ವಿವರ.
ನವದೆಹಲಿ(ಫೆ.02): ರೆನಾಲ್ಟ್ ಸಂಸ್ಥೆಯ ನೂತನ ಕ್ವಿಡ್ ಕಾರು ಬಿಡುಗಡೆಯಾಗಿದೆ. 2019ರ ನೂತನ ಕ್ವಿಡ್ ಕಾರು ABS(ಅ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗಿದೆ. ನೂತನ ಕ್ವಿಡ್ ಕಾರಿನ ಬೆಲೆ 2.66 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆರಂಭಗೊಳ್ಳುತ್ತಿದೆ. ಇದು ಇತರ ಕಡಿಮೆ ಬೆಲೆಯ ಕಾರಿಗೆ ಹೋಲಿಸಿದರೆ ಅತ್ಯಂತ ಕಡಿಮೆ.
ಇದನ್ನೂ ಓದಿ: ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ಜೈಲು - ಹೊಸ ನಿಯಮ ಜಾರಿ!
ಬೇಸ್ ಮಾಡೆಲ್‌ನಿಂದ ಹಿಡಿದು ಎಲ್ಲಾ ಮಾಡೆಲ್ ಕಾರುಗಳಲ್ಲಿ ABS ತಂತ್ರಜ್ಞಾನ ಲಭ್ಯವಿದೆ. ಡ್ರೈವರ್ ಏರ್‍ಬ್ಯಾಗ್, ಸೆನ್ಸಾರ್ ಡೋರ್ ಲಾಕ್, ELR ಸೀಟ್ ಬೆಲ್ಟ್, ರೇರ್ ಸೀಟ್ ಬೆಲ್ಟ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಓವರ್ ಸ್ವೀಡ್ ಅಲರ್ಟ್ ಸೇರಿದಂತೆ ಹೆಚ್ಚುವರಿ ಫೀಚರ್ಸ್ ನೂತನ ಕ್ವಿಡ್ ಕಾರಿನಲ್ಲಿ ಲಭ್ಯವಿದೆ.
ಇದನ್ನೂ ಓದಿ: ಶೀಘ್ರದಲ್ಲಿ ಭಾರತದ ರಸ್ತೆಗಿಳಿಯುತ್ತಿದೆ ಬ್ರಿಟೀಷ್ ಕಾರು!
ಆ್ಯಂಡ್ರಾಯ್ಡ್ ಆಟೋ, ಆ್ಯಪಲ್ ಕಾರ್ ಪ್ಲೇ, ಇನ್ಫೋಟೈನ್‌ಮೆಂಟ್ ಟಚ್ ಸ್ಕ್ರೀನ್ ಕೂಡ ನೂತನ ಕ್ವಿಡ್ ಕಾರಿನಲ್ಲಿ ಲಭ್ಯವಿದೆ. ನೂತನ ಕಾರು 2 ವೇರಿಯೆಂಟ್ ಎಂಜಿನ್‌ಗಳಲ್ಲಿ ಲಭ್ಯವಿದೆ. 800ಸಿಸಿ, 3 ಸಿಲಿಂಡರ್ ಪೆಟ್ರೋಲ್ ಎಂಜಿನ್, 67bhp ಪವರ್ ಹಾಗೂ 1.0 ಲೀಟರ್ ಎಂಜಿನ್, 68bhp ಪವರ್ ಎಂಜಿನ್‌ಗಳು ಲಭ್ಯವಿದೆ.