ಒಂದು ಬಾರಿ ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ಸಾಕು, ಜೈಲು ಶಿಕ್ಷೆ ತಪ್ಪಿದ್ದಲ್ಲ. ನೊಟೀಸ್ ಬರಲ್ಲ, ಎಚ್ಚರಿಕೆ ನೀಡಲ್ಲ, ನೇರವಾಗಿ ಜೈಲು ಶಿಕ್ಷೆ. ಇದು ಟ್ರಾಫಿಕ್ ನಿಯಮ ಪಾಲನೆಗೆ ಪೊಲೀಸ್ ಇಲಾಖೆ ಜಾರಿಮಾಡಿರುವ ಹೊಸ ನಿಯಮ. ಇಲ್ಲಿದೆ ಹೆಚ್ಚಿನ ವಿವರ.
ಹೈದರಾಬಾದ್(ಫೆ.02): ವಾರ್ನಿಂಗ್ ಇಲ್ಲ, ನೊಟೀಸ್ ಇಲ್ಲವೇ ಇಲ್ಲ. ಒಂದು ಬಾರಿ ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ಸಾಕು, ನೇರವಾಗಿ ಜೈಲು ಶಿಕ್ಷೆ. ಕನಿಷ್ಟ 4 ದಿನ ಜೈಲಿನಲ್ಲಿ ವಾಸ ಮಾಡಬೇಕು. ಇದು ಟ್ರಾಫಿಕ್ ನಿಯಮ ಉಲ್ಲಂಘಿಸುವವರಿಗೆ ತಕ್ಕ ಪಾಠ ಕಲಿಸಲು ಜಾರಿಗೆ ತರಲಾಗಿರುವ ಹೊಸ ನಿಯಮ. ಹೊಸ ನಿಯಮದನ್ವಯ ಒರ್ವ ವ್ಯಕ್ತಿ ಈಗಾಗಲೇ ಜೈಲುಪಾಲಾಗಿದ್ದಾನೆ.
ಇದನ್ನೂ ಓದಿ: ಕ್ಯಾಬ್, ಅಟೋ ಆಯ್ತು, ಭಾರತಕ್ಕೆ ಬಂತು ಉಬರ್ ಬೋಟ್!
undefined
ಹೈದರಾಬಾದ್ ಪೊಲೀಸರು ಈ ನಿಯಮವನ್ನ ಜಾರಿಗೆ ತಂದಿದ್ದಾರೆ. ದೇಶದಲ್ಲಿ ಗರಿಷ್ಠ ಟ್ರಾಫಿಕ್ ನಿಯಮ ಉಲ್ಲಂಘಿಸೋ ನಗರಗಳಲ್ಲಿ ಹೈದರಾಬಾದ್ ಕೂಡ ಸ್ಥಾನ ಪಡೆದಿದೆ. ಹೀಗಾಗಿ ಟ್ರಾಫಿಕ್ ಉಲ್ಲಂಘನೆ ತಪ್ಪಿಸಲು ಹೈದರಾಬಾದ್ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಇದಕ್ಕಾಗಿ ಕಠಿಣ ಶಿಕ್ಷೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ: ಬ್ರೈಟ್ ಹೆಡ್‌ಲೈಟ್ಸ್ ಅಳವಡಿಸಿದರೆ ವಾಹನದ RC, ಲೈಸೆನ್ಸ್ ರದ್ದು!
ಡ್ರಿಂಕ್ ಅಂಡ್ ಡ್ರೈವ್ ಕೇಸ್‌ನಲ್ಲಿ ಹೈದರಾಬಾದ್ ಟೆಕ್ಕಿಯನ್ನ ಪೊಲೀಸರು ಹಿಡಿದು 4 ದಿನದ ಕಾಲ ಜೈಲಿಗಟ್ಟಿದ್ದರು. ಇನ್ನು ಲೈಸೆನ್ಸ್ ಇಲ್ಲದೆ ವಾಹನ ಚಲಾಯಿಸಿ ನಿಯಮ ಉಲ್ಲಂಘಿಸಿದ ವ್ಯಕ್ತಿ ಕೂಡ ಜೈಲುಪಾಲಾಗಿದ್ದಾನೆ. ಇದೀಗ ಹೈದರಾಬಾದ್ ಟ್ರಾಫಿಕ್ ಪಾಲನೆಯಲ್ಲಿ ದೇಶದಲ್ಲೇ ಮೊದಲ ನಗರವನ್ನಾಗಿ ಮಾಡಲು ಪೊಲೀಸರು ಪಣತೊಟ್ಟಿದ್ದಾರೆ.
ಇದನ್ನೂ ಓದಿ: ರಾಂಗ್ ಪಾರ್ಕಿಂಗ್- ಕಾರು ಚಾಲಕನಿಗೆ 16,565 ರೂಪಾಯಿ ದಂಡ!
ಎಲ್ಲರೂ ನಿಯಮವನ್ನ ಪಾಲಿಸಲೇಬೇಕು. ಹೀಗಾಗಿ ಮೊದಲ ಭಾರಿ ನಿಯಮ ಉಲ್ಲಂಘನೆ ಅಥವಾ ಅದಕ್ಕಿಂತ ಹೆಚ್ಚು ಭಾರಿ ಉಲ್ಲಂಘಿಸಿದವರಿಗೂ ಜೈಲು ಶಿಕ್ಷೆ ಖಚಿತ. ಟ್ರಾಫಿಕ್ ನಿಯಮ ಪಾಲನೆಗೆ ನೂತನ ಶಿಕ್ಷೆ ಅನಿವಾರ್ಯ ಎಂದು ಹೈದರಾಬಾದ್ ಟ್ರಾಫಿಕ್ ಅಸಿಸ್ಟೆಂಟ್ ಕಮಿಶನರ್ ಚಂದ್ರಶೇಖರ್ ಹೇಳಿದ್ದಾರೆ.