ಭರ್ಜರಿ ರಿಯಾಯಿತಿ ಘೋಷಿಸಿದ ಸ್ಕೋಡಾ-1 ಲಕ್ಷ ರೂಪಾಯಿ ಕಡಿತ!

By Web Desk  |  First Published Nov 10, 2018, 3:17 PM IST

ಟೊಯೊಟಾ ಫಾರ್ಚುನರ್ ಕಾರಿಗೆ ಪೈಪೋಟಿ ನೀಡಲು ಸ್ಕೋಡಾ ಕೊಡಿಯಾಕ್ ಕಾರು ಮುಂದಾಗಿದೆ. ಇದಕ್ಕಾಗಿ ಸ್ಕೋಡಾ ಭರ್ಜರಿ ಆಫರ್ ಕೂಡ ಘೋಷಿಸಿದೆ. ಇಲ್ಲಿದೆ ಸ್ಕೋಡಾ ಕಾರಿನ ನೂತನ ಆಫರ್ ಹಾಗೂ ಕಾರಿನ  ಹೆಚ್ಚಿನ ವಿವರ.


ಬೆಂಗಳೂರು(ನ.10): ಭಾರತದ  SUV ಹಾಗೂ MPV ಲಕ್ಸುರಿ ಕಾರು ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಸಿದ್ಧತೆ  ನಡೆಸಿರುವ ಸ್ಕೋಡೂ ಇದೀಗ ಭರ್ಜರಿ ಆಫರ್ ಘೋಷಿಸಿದೆ. ಸ್ಕೋಡೂ ಕೊಡಿಯಾಕ್ ಕಾರಿನ ಮೇಲೆ ಸ್ಕೋಡಾ ಬರೋಬ್ಬರಿ 1 ಲಕ್ಷ ರೂಪಾಯಿ ರಿಯಾಯಿತಿ ಘೋಷಿಸಿದೆ.

Latest Videos

undefined

1 ಲಕ್ಷ ರೂಪಾಯಿ ಆಫರ್ ಘೋಷಿಸುವ ಮೂಲಕ ಸ್ಕೂಡಾ ಕೊಡಿಯಾಕ್, ಟೊಯೊಟಾ ಫಾರ್ಚುನರ್‌ಗೆ ಪೈಪೋಟಿ ನೀಡಲು ಮುಂದಾಗಿದೆ.  ರಿಯಾಯಿತಿ  ಬಳಿಕ ಸ್ಕೋಡಾ ಕೊಡಿಯಾಕ್ ಬೆಲೆ 33.84 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇದು ಫಾರ್ಚುನರ್ ಬೆಲೆಗಿಂತ 80,000 ರೂಪಾಯಿ ಹೆಚ್ಚಾಗಿದೆ.

ಆಟೋಮ್ಯಾಟಿಕ್ ಹೆಡ್‌ಲೈಟ್ ಹಾಗೂ ವಿಂಡ್‌ಶೀಲ್ಡ್  ಹೊಂದಿದೆ. ಎಲ್ಲಾ ಹೆಡ್ ಲ್ಯಾಂಪ್ಸ್, ಫಾಗ್ ಲ್ಯಾಂಪ್ಸ್ ಹಾಗೂ ಟೈಲ್ ಲೈಟ್ಸ್ ಎಲ್ಲವೂ ಕೂಡ ಎಲ್ಇಡಿ ಲೈಟ್ಸ್. 3 ಝೋನ್ ಕ್ಲೈಮೇಟ್ ಕಂಟ್ರೋಲ್, ಎಡ್ಜಸ್ಟೇಬಲ್ ಡ್ರೈವರ್ ಹಾಗೂ ಕೋ ಪ್ಯಾಸೆಂಜರ್ ಸೀಟ್, ಪನೋರಮಿಕ್ ಸನ್‌ರೂಫ್, 8 ಇಂಚಿನ್ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹೊಂದಿದೆ.

ಗರಿಷ್ಠ ಸುರಕ್ಷತೆ ಹೊಂದಿರುವ ಸ್ಕೋಡಾ ಕೊಡಿಯಾಕ್ 9 ಏರ್‌ಬ್ಯಾಗ್ಸ್ ಹೊಂದಿದೆ. ಎಬಿಎಸ್, ಇಎಸ್‌ಸಿ, ಟ್ರಾಕ್ಷನ್ ಕಂಟ್ರೋಲ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಮಲ್ಟಿ ಕೊಲಿಶನ್ ಬ್ರೇಕಿಂಗ್ ಸಿಸ್ಟಮ್, ಡ್ರೌವ್ಸಿನೆಸ್ಸ್ ಸೆನ್ಸಾರ್ ಸೇರಿದಂತೆ ಹಲವು ಸುರಕ್ಷತಾ ಫೀಚರ್ಸ್ ಹೊಂದಿದೆ. 1 ಲಕ್ಷ ರೂಪಾಯಿ ಬೆಲೆ ಕಡಿತಗೊಳಿಸಿ ಇದೀಗ ಮಾರಾಟದಲ್ಲಿ ಏರಿಕೆ ನಿರೀಕ್ಷಿಸುತ್ತಿರುವ ಸ್ಕೋಡಾ ಕೊಡಿಯಾಕ್‌ಗೆ ಈಗಾಗಲೇ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. 
 

click me!