ಕ್ವಿಡ್ ರೀತಿ ಕಡಿಮೆ ಬೆಲೆಯ MPV ಕಾರು ಬಿಡುಗಡೆಗೆ ರೆನಾಲ್ಟ್ ಸಿದ್ಧತೆ!

By Web Desk  |  First Published Nov 10, 2018, 2:48 PM IST

ಕ್ವಿಡ್ ಕಾರಿನ ಮೂಲಕ ಭಾರತದ ಕಾರು ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಿದೆ ರೆನಾಲ್ಟ್ ಕಾರು ಇದೀಗ  MPV ಕಾರು ಬಿಡುಗಡೆಗೆ ಸಜ್ಜಾಗಿದೆ. ಕಡಿಮೆ ಬೆಲೆಯ MPV ಕಾರಿನ ವಿಶೇಷತೆ ಏನು? ಇದರ ಬೆಲೆ ಎಷ್ಟು? ಇಲ್ಲಿದೆ ವಿವರ.


ಬೆಂಗಳೂರು(ನ.10): ರೆನಾಲ್ಟ್ ಕಾರು ಕಂಪೆನಿಯ ಸಣ್ಣ ಕಾರು ಕ್ವಿಡ್ ಭಾರತದಲ್ಲಿ ಗರಿಷ್ಠ ಮಾರಾಟವಾಗೋ ಮೂಲಕ ದಾಖಲೆ ಬರೆದಿದೆ. ಇದೀಗ ಇದೇ ರೀತಿ ಕಡಿಮೆ ಬೆಲೆಯ MPV ಕಾರು ಬಿಡುಗಡೆಗೆ ರೆನಾಲ್ಟ್ ತಯಾರಿ ನಡೆಸಿದೆ. ಈ ಮೂಲಕ ಮಾರುತಿ ಸುಜುಕಿ ಎರ್ಟಿಗಾ ಸೇರಿದಂತೆ ಇತರ MPV ವೆರಿಯೆಂಟ್ ಕಾರುಗಳಿಗೆ ಪೈಪೋಟಿ ನೀಡಲು ರೆಡಿಯಾಗಿದೆ.

ಹೆಚ್ಚು ಕಡಿಮೆ ರೆನಾಲ್ಟ್ ಕ್ಯಾಪ್ಚರ್ ಲುಕ್ ಹೊಂದಿದೆ. ಮುಂಭಾಗದ ಗ್ರಿಲ್ ಹಾಗೂ ಬಂಪರ್ ಕ್ವಿಡ್ ರೀತಿಯಲ್ಲೇ ಇದೆ. ಕ್ಯಾಪ್ಚರ್ ಕಾರಿನ ಹೆಡ್ ಲೈಟ್ ಜೊತೆಗೆ ಆಗ್ರೆಸ್ಸಿವ್ ಲುಕ್‌ನಿಂದ ಇತರ  MPV ಕಾರಿಗೆ ಪೈಪೋಟಿ  ನೀಡಲಿದೆ. 4 ಮೀಟರ್ ಉದ್ದ, 2,450mm ವೀಲ್ಹ್‌ಬೇಸ್ ಹೊಂದಿದೆ. ಇನ್ನು 0.99 ಲೀಟರ್, 3 ಸಿಲಿಂಡರ್ ಎಂಜಿನ್ ಇರಲಿದೆ.

Latest Videos

ಇನ್ನು ಮ್ಯಾನ್ಯುಯೆಲ್  ಹಾಗೂ ಎಎಂಟಿ ಆಯ್ಕೆ ಕೂಡ ಇದೆ. ಈ ಕಾರು 2019ರಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲು ರೆನಾಲ್ಟ್ ನಿರ್ಧರಿಸಿದೆ. ನೂತನ ರೆನಾಲ್ಟ್  MPV ಕಾರಿನ ಬೆಲೆ ಕುರಿತು ಕಂಪೆನಿ ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ. ಆದರೆ ಇತರ ಎಲ್ಲಾ  MPV ಕಾರಿಗಿಂತ ಕಡಿಮೆ ಇರಲಿದೆ. 

click me!