2018ರ ಮಾರುತಿ ಇಗ್ನಿಸ್ ಕಾರು ನಿರ್ಮಾಣ ಸ್ಥಗಿತಗೊಳ್ಳುತ್ತಿದೆ. ಕಾರಣ 20119ರ ಹೊಸ ಇಗ್ನಿಸ್ಕಾರು ಬಿಡುಗಡೆಯಾಗುತ್ತಿದೆ. ಹೀಗಾಗಿ ಸದ್ಯ ಡೀಲರ್‌ಗಳ ಬಳಿ ಇರುವ ಇಗ್ನಿಸ್ ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಿದೆ.
ನವದೆಹಲಿ(ಫೆ.06): ಮಾರುತಿ ಸುಜುಕಿ ಸಂಸ್ಥೆ ಸಣ್ಣ SUV ಕಾರು ಇಗ್ನಿಸ್ ನಿರ್ಮಾಣ ಸ್ಥಗಿತಗೊಳಿಸಿತ್ತಿದೆ. ಮಾರುತಿ ಸುಜುಕಿ ಅಧೀಕೃತ ಘೋಷಣೆ ಮಾಡಿಲ್ಲ. ಆದರೆ ನೆಕ್ಸಾ ಡೀಲರ್‌ಗಳು ಈ ಕುರಿತು ಸೂಚನೆ ನೀಡಿದ್ದಾರೆ. ಹೊಸ ಇಗ್ನಿಸ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಹೀಗಾಗಿ ಇದೀಗ ಹಳೇ ಇಗ್ನಿಸ್ ಕಾರು ನಿರ್ಮಾಣ ಸ್ಥಗಿತಗೊಳ್ಳುತ್ತಿದೆ ಎಂದಿದ್ದಾರೆ.
undefined
ಇದನ್ನೂ ಓದಿ:ರಾಯಲ್ ಎನ್‌ಫೀಲ್ಡ್ ಬೈಕ್ ಬೆಲೆ ಹೆಚ್ಚಳ-ಇಲ್ಲಿದೆ ನೂತನ ದರ!
2018ರ ಇಗ್ನಿಸ್ ನಿರ್ಮಾಣ ಸ್ಥಗಿತಗೊಳ್ಳುತ್ತಿರುವ ಕಾರಣ, ಸದ್ಯ ಡೀಲರ್‌ಗಳ ಬಳಿ ಇರುವ ಇಗ್ನಿಸ್ ಕಾರು ಸ್ಟಾಕ್ ಕ್ಲೀಯರ್‌ಗಾಗಿ ಭಾರಿ ಡಿಸ್ಕೌಂಟ್ ಘೋಷಿಸಿದೆ. ಬರೋಬ್ಬರಿ 1 ಲಕ್ಷ ರೂಪಾಯಿ ವರೆಗೆ ರಿಯಾಯಿತಿ ಘೋಷಿಸಿದೆ. ಆದರೆ ಬುಕಿಂಗ್ ನಿಲ್ಲಿಸಿಲ್ಲ. ಕಾರಣ 2019ರ ಹೊಸ ಇಗ್ನಿಸ್ ಕಾರು ಬಿಡುಗಡೆಯಾಗಲಿದೆ.
ಇದನ್ನೂ ಓದಿ: ನಗರದಲ್ಲಿ ಪೆಟ್ರೋಲ್, ಡೀಸೆಲ್ ಕಾರು ರಿಜಿಸ್ಟ್ರೇಶನ್ ಶೀಘ್ರದಲ್ಲಿ ಬಂದ್ !
ಸದ್ಯ ಇಗ್ನಿಸ್ 4 ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಸಿಗ್ಮಾ, ಡೆಲ್ಟಾ, ಜೆಟಾ, ಹಾಗೂ ಆಲ್ಫಾ. ಇಗ್ನಿಸ್ ಬೆಲೆ 4.66 ಲಕ್ಷ ರೂಪಾಯಿಂದ 7.05 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಆದರೆ 2019ರ ನೂತನ ಇಗ್ನಿಸ್ ಕಾರಿನ ಬೆಲೆ ಸ್ವಲ್ಪ ಹೆಚ್ಚಾಗಲಿದೆ.