ಹೊಸ ವರ್ಷದಲ್ಲಿ ಕಾರು, ಬಸ್ಸು, ಟ್ರಕ್‌ಗಳಿಗೆ ಹೊಸ ನಿಯಮ- ನಿಮಗಿದು ತಿಳಿದಿರಲಿ!

By Web Desk  |  First Published Dec 25, 2018, 8:17 PM IST

2019ರಲ್ಲಿ ಹೊಸ ಹೊಸ ನಿಯಮಗಳು ಜಾರಿಯಾಗುತ್ತಿದೆ. ಹಳೇ ನಿಮಯಗಳಿಗೆ ತಿದ್ದುಪಡಿ ತರಲಾಗುತ್ತಿದೆ. ಕಾರು, ಬಸ್ಸು ಹಾಗೂ ಟ್ರಕ್‌ಗಳಿಗೆ ಹೊಸ ನಿಯಮ ಜಾರಿಗೆ ತರಲಾಗುತ್ತಿದೆ. ನೂತನ ನಿಯಮವೇನು? ಇಲ್ಲಿದೆ ವಿವರ.


ನವದೆಹಲಿ(ಡಿ.25): ಹೊಸ ವರ್ಷ ಬರಮಾಡಿಕೊಳ್ಳಲು ಇನ್ನು ಕೆಲದಿನಗಳು ಮಾತ್ರ ಬಾಕಿ. 2019ರಲ್ಲಿ ಹೊಸ ಹೊಸ ಕಾರುಗಳು, ಟ್ರಕ್ ಬಿಡುಗಡೆಯಾಗಲಿದೆ. ಇದರ ಬೆನ್ನಲ್ಲೇ, ಹೊಸ ಹೊಸ ನಿಯಮಗಳು ಕೂಡ ಅನ್ವಯವಾಗಲಿದೆ. ಇದೀಗ 2019ರಿಂದ ಕಾರುಗಳಿಗೆ ಹಾಗೂ 2020ರಿಂದ ಬಸ್, ಟ್ರಕ್‌ಗಳು ಹೊಸ ನಿಯಮವನ್ನ ಖಡ್ಡಾಯವಾಗಿ ಪಾಲಿಸಲೇಬೇಕು.

ಇದನ್ನೂ ಓದಿ: ಸೆಕೆಂಡ್ ಹ್ಯಾಂಡ್ ಬೈಕ್ ಮಾರಾಟ ಮಾಡಲಿದೆ ಡುಕಾಟಿ ಇಂಡಿಯಾ!

Tap to resize

Latest Videos

undefined

ಹೆಚ್ಚುತ್ತಿರುವ ಅಪಘಾತವನ್ನ ನಿಯಂತ್ರಿಸಲು 2019ರಲ್ಲಿ ಬಿಡುಗಡೆಯಾಗುವ ಎಲ್ಲಾ ಕಾರುಗಳಿಗೆ ಪಾರ್ಕಿಂಗ್ ಸೆನ್ಸಾರ್, ಸೆನ್ಸಾರ್ ಸೌಂಡ್ ಹಾಗೂ ಪಾರ್ಕಿಂಗ್ ಕ್ಯಾಮರ ಖಡ್ಡಾಯವಾಗಿ ಇರಲೇಬೇಕು. ಈ ಮೂಲಕ ಪಾರ್ಕಿಂಗ್ ವೇಳೆ ಅಥವಾ ಪಾರ್ಕ್ ಮಾಡಿದ ವಾಹನಗಳನ್ನ ತೆಗೆಯುವ ವೇಳೆ ಆಗೋ ಅಪಘಾತಗಳನ್ನ ತಪ್ಪಿಸಲು ದಿಟ್ಟ ಕ್ರಮ ಕೈಗೊಳ್ಳಲಾಗಿದೆ.

ಇದನ್ನೂ ಓದಿ: 5 ಸಾವಿರಕ್ಕೆ ಬುಕ್ ಮಾಡಿ ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್!

2020ರಲ್ಲಿ ಬಿಡುಗಡೆಯಾಗೋ ಎಲ್ಲಾ ಬಸ್ ಟ್ರಕ್‌ಗಳಿಗೂ ಪಾರ್ಕಿಂಗ್ ಸೆನ್ಸಾರ್, ಸೆನ್ಸಾರ್ ಸೌಂಡ್ ಹಾಗೂ ಪಾರ್ಕಿಂಗ್ ಕ್ಯಾಮರ ಖಡ್ಡಾಯವಾಗಿ ಇರಲೇಬೇಕು. ಸದ್ಯ ಬೇಸ್ ಮಾಡೆಲ್ ಕಾರುಗಳಲ್ಲಿ ಪಾರ್ಕಿಂಗ್ ಸೆನ್ಸಾರ್ ಅಥವಾ ಕ್ಯಾಮರ ಇರುವುದಿಲ್ಲ. ಮಿಡ್ ವೇರಿಯೆಂಟ್ ಅಥವಾ ಟಾಪ್ ಮಾಡೆಲ್‌ಗಳಲ್ಲಿ ಮಾತ್ರ ಲಭ್ಯವಿದೆ. ಆದರೆ 2019ರಲ್ಲಿ ಕಾರಗಳಿಗೆ, 2020ರಿಂದ ಟ್ರಕ್ ಹಾಗೂ ಬಸ್‌ಗಳ ಬೇಸ್ ಮಾಡೆಲ್‌ಗಳಲ್ಲೇ ಸೆನ್ಸಾರ್ ಅಳವಡಿಸರಬೇಕು ಎಂದು ನಿಯಮ ತರಲಾಗಿದೆ.

ಆಟೋಮೊಬೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

click me!