ಹೊಂಡಾ ನೂತನ 2 ಬೈಕ್ ಅನಾವರಣ ಮಾಡಿದೆ. ರೆಬೆಲ್ 300 ಹಾಗೂ ರೆಬಲ್ 500 ಬೈಕ್ ಹೊಸ ವಿನ್ಯಾಸ, ಆಧುನಿಕ ತಂತ್ರಜ್ಞಾನ ಹಾಗೂ ಫೀಚರ್ಸ್ ಹೊಂದಿದೆ. ರೆಬೆಲ್ ಬೈಕ್ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
ಇಟೆಲಿ(ನ.06): ರಾಯಲ್ ಎನ್‌ಫೀಲ್ಡ್ ಪ್ರತಿಸ್ಪರ್ಧಿಯಾಗಿ ಈಗಾಗಲೇ ಜಾವಾ, ಬೆನೆಲಿ ಸೇರಿದಂತೆ ಹಲವು ಬೈಕ್‌ಗಳು ಮಾರುಕಟ್ಟೆಯಲ್ಲಿದೆ. ಇದೀಗ ಹೊಂಡಾ ನೂತನ ಎರಡು ಬೈಕ್ ಅನಾವರಣ ಮಾಡಿದೆ. ಹೊಂಡಾ ರೆಬೆಲ್ 300 ಹಾಗೂ ಹೊಂಡಾ ರೆಬೆಲ್ 500 ಕ್ರೂಸರ್ ಬೈಕ್ ಅನಾವರಗೊಂಡಿದೆ.
ಇದನ್ನೂ ಓದಿ: ರೊವ್ವೆಟ್ ಎಲೆಕ್ಟ್ರಿಕ್ ಬೈಕ್, ಸ್ಕೂಟರ್ ಬಿಡುಗಡೆ!
EICMA ಮೋಟಾರು ಶೋನಲ್ಲಿ ಹೊಂಡಾ ಹೊಚ್ಚ ಹೊಸ 2 ಬೈಕ್ ಅನಾವರಣ ಮಾಡಿದೆ. ಇತರ ಎಲ್ಲಾ ಬೈಕ್‌ಗಳಿಗಿಂತ ಹೊಸತನ ಈ ಹೊಂಡಾ ರೆಬಲ್ ಬೈಕ್‌ನಲ್ಲಿದೆ. ಪೆಟ್ರೋಲ್ ಟ್ಯಾಂಕ್, LED ಹೆಡ್‌ಲೈಟ್, LED ಟೈಲ್ ಲೈಟ್ ಸೇರಿದಂತೆ ಹಲವು ಫೀಚರ್ಸ್ ಈ ಬೈಕ್‌ನಲ್ಲಿದೆ.
ಇದನ್ನೂ ಓದಿ: ಇಂಡಿಯನ್ ಚಾಲೆಂಜರ್ ಬೈಕ್ ಅನಾವರಣ; ಬೆಲೆ 16 ಲಕ್ಷ ರೂ!
ರೆಬೆಲ್ 500 ಬೈಕ್, 471cc ಲಿಕ್ವಿಡ್ ಕೂಲ್ಡ್ ಟ್ವಿನ್ ಎಂಜಿನ್ ಹೊಂದಿದ್ದು, 45.5 hp ಪವರ್ ಹಾಗೂ 43.3 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ಇನ್ನು ರೆಬೆಲ್ 300 ಬೈಕ್ 286 cc ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದೆ. ನೂತ ಬೈಕ್ 2020ರಲ್ಲಿ ಭಾರತ ಸೇರಿದಂತೆ ವಿಶ್ವದೆಲ್ಲಡೆ ಬಿಡುಗಡೆಯಾಗಲಿದೆ. ಆದರೆ ಇದರ ಬೆಲೆ ಹಾಗೂ ಮೈಲೇಜ್ ಕುರಿತ ಮಾಹಿತಿ ಬಹಿರಂಗವಾಗಿಲ್ಲ.