UM ಕಮಾಂಡೋ ಕ್ಲಾಸಿಕ್ ಬೈಕ್ ಬಿಡುಗಡೆ - ಥಂಡರ್‌ಬರ್ಡ್‌ಗೆ ಪೈಪೋಟಿ!

Published : Dec 16, 2018, 06:11 PM IST
UM ಕಮಾಂಡೋ ಕ್ಲಾಸಿಕ್ ಬೈಕ್ ಬಿಡುಗಡೆ - ಥಂಡರ್‌ಬರ್ಡ್‌ಗೆ ಪೈಪೋಟಿ!

ಸಾರಾಂಶ

ರಾಯಲ್ ಎನ್‌ಫೀಲ್ಡ್ ಥಂಡರ್‌ಬರ್ಡ್ ಹಾಗೂ ಬಜಾಜ್ ಡೊಮಿನಾರ್ ಬೈಕ್‌ಗಳಿಗೆ ಪೈಪೋಟಿ ನೀಡಬಲ್ಲ UM ಕಮಾಂಡೋ ಕ್ಲಾಸಿಕ್ ಬೈಕ್ ಬಿಡುಗಡೆಯಾಗಿದೆ. ಇದರ ಬೆಲೆ ಎಷ್ಟು? ವಿಶೇಷತೆ ಏನು? ಇಲ್ಲಿದೆ ವಿವರ.

ನವದೆಹಲಿ(ಡಿ.16): UM ಮೋಟರ್‌ಸೈಕಲ್ ನೂತನ ಬೈಕ್ ಬಿಡುಗಡೆ ಮಾಡಿದೆ. ಕಮಾಂಡೋ ಕ್ಲಾಸಿಕ್ ನೂತನ ಬೈಕ್ ಮಾರುಕಟ್ಟೆ ಪ್ರವೇಸಿದೆ. ಈ ಹಿಂದಿನ ಬೆಲೆಗೆಂತ ಕಡಿಮೆ ದರದಲ್ಲಿ ನೂನತ ಕ್ಲಾಸಿಕ್ ಬೈಕ್ ಭಾರತದಲ್ಲಿ ಬಿಡುಗಡೆಯಾಗಿದೆ.

ಇದನ್ನೂ ಓದಿ: ಸ್ಟಾರ್ ನಟನಿಗೆ ಎಚ್ಚರಿಕೆ ನೀಡಿ ಪೇಚಿಗೆ ಸಿಲುಕಿದ ಪೊಲೀಸ್!

279,5ಸಿಸಿ , ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್‌ಡ್ ಎಂಜಿನ್ ಹೊಂದಿದೆ. ಆದರೆ ಎಷ್ಟು ಬಣ್ಣಗಳಲ್ಲಿ ಬೈಕ್ ಲಭ್ಯವಿದೆ ಅನ್ನೋದನ್ನ ಕಂಪೆನಿ ಬಹಿರಂಗ ಪಡಿಸಿಲ್ಲ. ನೂತನ ಕಮಾಂಡೋ ಕ್ಲಾಸಿಕ್ ಬೈಕ್ ಬೆಲೆ 1.95 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).

ಇದನ್ನೂ ಓದಿ: ಯಮಹಾ ಸಲ್ಯೂಟೋ RX 110,125 ಬೈಕ್ ಬಿಡುಗಡೆ!

25.1ps ಪವರ್ ಹಾಗೂ 23nm ಪೀಕ್ ಟಾರ್ಕ್ ಉತ್ವಾದಿಸಲಿದೆ. ಆದರೆ ನೂತನ ಕ್ಲಾಸಿಕ್ ಕಮಾಂಡೋ ABS(ಆ್ಯಂಟಿ ಲಾಕ್ ಬ್ರೇಕ್ ಸಿಸ್ಟಮ್) ಹೊಂದಿಲ್ಲ. ನೂತನ ಕ್ಲಾಸಿಕ್ ಕಮಾಂಡೋ, ಬಜಾಜ್ ಡೊಮಿನಾರ್ ಹಾಗೂ ರಾಯಲ್ ಎನ್‌ಫೀಲ್ಡ್ ಥಂಡರ್‌ಬರ್ಡ್ ಬೈಕ್‌ಗೆ ಪೈಪೋಟಿ ನೀಡಲಿದೆ.

PREV
click me!

Recommended Stories

ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ
ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ