ಸ್ಟಾರ್ ನಟನಿಗೆ ಎಚ್ಚರಿಕೆ ನೀಡಿ ಪೇಚಿಗೆ ಸಿಲುಕಿದ ಪೊಲೀಸ್!

Published : Dec 16, 2018, 04:54 PM IST
ಸ್ಟಾರ್ ನಟನಿಗೆ ಎಚ್ಚರಿಕೆ ನೀಡಿ ಪೇಚಿಗೆ ಸಿಲುಕಿದ ಪೊಲೀಸ್!

ಸಾರಾಂಶ

ದಕ್ಷಿಣ ಭಾರತದ ಸ್ಟಾರ್ ನಟನಿಗೆ ಎಚ್ಚರಿಕೆ ನೀಡಿದ ಪೊಲೀಸರು ಕೊನೆಗೆ ಸತ್ಯಾಸತ್ಯತೆ ಅರಿವಾದಗ ಪೇಚಿಗೆ ಸಿಲುಕಿದ ಘಟನೆ ನಡೆದಿದೆ. ಅಷ್ಟಕ್ಕೂ ಯಾರು ಆ ನಟ, ಪೊಲೀಸರು ಮಾಡಿದ್ದೇನು? ಇಲ್ಲಿದೆ ವಿವರ.

ಮುಂಬೈ(ಡಿ.16): ಡ್ರೈವಿಂಗ್ ವೇಳೆ ಮೊಬೈಲ್ ಬಳಕೆ ಮಾಡುತ್ತಿರುವ ವೀಡಿಯೋ ನೋಡಿದ ತಕ್ಷಣವೇ ಟ್ವೀಟ್ ಮಾಡಿದ ಮುಂಬೈ ಪೊಲೀಸರು ಪೇಚಿಗೆ ಸಿಲುಕಿದ್ದಾರೆ.  ದಕ್ಷಿಣ ಭಾರತದ ನಟ ದುಲ್ಕರ್ ಸಲ್ಮಾನ್ ವೀಡಿಯೋವನ್ನ ನಟಿ ಸೋನಪ್ ಕಪೂರ್ ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಿದ್ದರು. ಆದರೆ ಇದರ ಸತ್ಯಾಸತ್ಯತೆ ಬೇರೆಯೇ ಆಗಿತ್ತು.

ಇದನ್ನೂ ಓದಿ:  ಮೀತಿ ಮೀರಿದ ವೇಗ-  ಸಿಎಂ ಕಾರಿಗೆ 13 ಸಾವಿರ ರೂಪಾಯಿ ದಂಡ!

ಮುಂಬೈ ನಗರದಲ್ಲಿ ನಟ ದುಲ್ಕರ್ ಸಲ್ಮಾನ್ ಚಲಿಸುತ್ತಿರುವಾಗಲೇ ಮೊಬೈಲ್ ಬಳಕೆ ಮಾಡಿದ ವೀಡಿಯೋವನ್ನ ನಟಿ ಸೋನಪ್ ಕಪೂರ್ ಪೋಸ್ಟ್ ಮಾಡಿದ್ದರು. ತಕ್ಷಣವೇ ಮುಂಬೈ ಪೊಲೀಸರು ರಿಟ್ವೀಟ್ ಮಾಡಿದ್ದರು. ಈ ರೀತಿ ಸ್ಟಂಟ್ ಮಾಡುವುದು ಸರಿಯಲ್ಲ. ಟ್ರಾಫಿಕ್ ನಿಯಮ ಉಲ್ಲಂಘನೆ, ಇತರ ಜೀವಕ್ಕೆ ಅಪಾಯ ತರುವು ಸಾಹಸವನ್ನ ಮುಂಬೈ ಪೊಲೀಸ್ ಒಪ್ಪುವುದಿಲ್ಲ ಎಂದಿತ್ತು.

 

 

ಆದರೆ ಈ ವೀಡಿಯೋದಲ್ಲಿ ಟ್ವಿಸ್ಟ್ ಇತ್ತು. ನಿಜಕ್ಕೂ ನಟ ದುಲ್ಕರ್ ಸಲ್ಮಾನ್ ಕಾರು ಡ್ರೈವಿಂಗ್ ಮಾಡುತ್ತಿರಲಿಲ್ಲ. ಕಾರಣ ಇವರ ಕಾರನ್ನ ಟ್ರಕ್‌ನಲ್ಲಿ ಒಯ್ಯಲಾಗುತ್ತಿತ್ತು. ಈ ವೇಳೆ ವೀಡಿಯೋ ಮಾಡಲಾಗಿದೆ. ಮುಂಬೈ ಪೊಲೀಸ್ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ ದುಲ್ಕರ್ ಸಲ್ಮಾನ್ ಹಾಗೂ ಸೋನಮ್ ಕೆ ಅಹುಜಾ ನಾವು ಡ್ರೈವ್ ಮಾಡುತ್ತಿರಲಿಲ್ಲ. ನಮ್ಮ ಕಾರು ಟ್ರಕ್ ಮೇಲಿತ್ತು ಎಂದಿದ್ದಾರೆ.

 

 

ಸತ್ಯಾಸತ್ಯತೆ ಅರಿವಾದಾಗ ಟ್ರಾಫಿಕ್ ನಿಯಮ ಪಾಲಿಸಿರುವುದಕ್ಕೆ ಶ್ಲಾಘಿಸಿ ಟ್ವೀಟ್ ಮಾಡಿದ್ದಾರೆ.

 

 

 


 

PREV
click me!

Recommended Stories

ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ
Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ