ಕಿಯಾ ಮೋಟಾರ್ಸ್ ಭಾರತದಲ್ಲಿ ಇದೀಗ ಸಬ್ ಕಾಂಪಾಕ್ಟ್ SUV ಸೊನೆಟ್ ಕಾರು ಅನಾವರಣ ಮಾಡಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಸೆಲ್ಟೋಸ್ ಹಾಗೂ ಕಾರ್ನಿವಲ್ ಕಾರಿನ ಯಶಸ್ಸಿನ ಬೆನ್ನಲ್ಲೇ ಇದೀಗ ಸೊನೆಟ್ ಕಾರು ಬಿಡುಗಡೆಗೆ ಸಜ್ಜಾಗಿದೆ. ಲಾಂಚ್‌ಗೂ ಮುನ್ನ ಕಿಯಾ ಸೊನೆಟ್ ಕಾರಿನ ಮೈಲೇಜ್ ಬಹಿರಂಗವಾಗಿದ್ದು, ಹ್ಯುಂಡೈ ವೆನ್ಯೂ ಕಾರಿಗಿಂತ ಉತ್ತಮವಾಗಿದೆ.
ಅನಂತಪುರಂ(ಆ.25): ಕಿಯಾ ಮೋಟಾರ್ಸ್ ಅವರ ಬಹುನಿರೀಕ್ಷಿತ ಕಿಯಾ ಸೊನೆಟ್ ಕಾರು ಅನಾವರಣದ ಬಳಿಕ ಹೆಚ್ಚು ಟ್ರೆಂಡ್ ಆಗುತ್ತಿದೆ. ಸಬ್ ಕಾಂಪಾಕ್ಟ್ SUVಗಳ ಪೈಕಿ ಹೆಚ್ಚು ಸ್ಟೈಲಿಶ್, ಗರಿಷ್ಠ ಕನೆಕ್ಟೆಡ್ ಫೀಚರ್ಸ್ ಸೇರಿದಂತೆ ಹಲವು ಹೊಸತನಗಳನ್ನು ಹೊಂದಿರುವ ಸೊನೆಟ್ ಕಾರು ಶೀಘ್ರದಲ್ಲೇ ಮಾರುಕಟ್ಟೆ ಪ್ರವೇಶಿಸಲಿದೆ. ಇದೀಗ ಕಿಯಾ ಕಾರಿನ ಮೈಲೇಜ್ ಮಾಹಿತಿ ಬಹಿರಂಗಗೊಂಡಿದೆ.
undefined
ಕಿಯಾ ಸೊನೆಟ್ SUV ಬುಕಿಂಗ್: ಮೊದಲ ದಿನವೇ ದಾಖಲೆ ಬರೆದ ಕಾರು!
ಕಿಯಾ ಸೊನೆಟ್ 1.2 ಲೀಟರ್ ಪೆಟ್ರೋಲ್ ಎಂಜಿನ್ ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಕಾರು 18.4 KMPL ಮೈಲೇಜ್ ನೀಡಲಿದೆ. ಈ ಕಾರು 100 ಕಿ.ಮೀ ವೇಗವನ್ನು 13.3 ಸೆಕೆಂಡ್‌ಗಳಲ್ಲಿ ತಲುಪಲಿದೆ. 83 PS ಪವರ್ ಹಾಗೂ 115 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 1.2 ಲೀಟರ್ ಹ್ಯುಂಡೈ ವೆನ್ಯೂ ಕಾರು 17.52 KMPL ಮೈಲೇಜ್ ನೀಡಲಿದೆ.
ಮೇಡ್ ಇನ್ ಇಂಡಿಯಾ ಕಿಯಾ ಸೊನೆಟ್ ಕಾರು 70 ದೇಶಗಳಿಗೆ ರಫ್ತು!.
ಕಿಯಾ ಸೊನೆಟ್ 1.0 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಕಾರು 18.2 KMPL ಮೈಲೇಜ್ ನೀಡಲಿದೆ. 7DCT ಸೊನೆಯ್ ವೇರಿಯೆಂಟ್ ಕಾರು 18.3 KMPL ಮೈಲೇಜ್ ನೀಡಲಿದೆ. ಸೊನೆಟ್ iMT ಕಾರಿನ ಮೈಲೇಜ್ ಮಾಹಿತಿ ಲಭ್ಯವಿಲ್ಲ.
1.5 ಲೀಟರ್ ಡೀಸೆಲ್ ಎಂಜಿನ್ ಸೊನೆಟ್ ಕಾರಿನಲ್ಲಿ ಎರಡು ವೇರಿಯೆಂಟ್ ಲಭ್ಯವಿದೆ. ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಹಾಗೂ ಆಟೋಮ್ಯಾಟಿಕ್. ಇದರಲ್ಲಿ ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಕಾರು 24.1 KMPL ಮೈಲೇಜ್ ನೀಡಿದರೆ, ಆಟೋಮ್ಯಾಟಿಕ್ ಕಾರು 19.0 KMPL ಮೈಲೇಜ್ ನೀಡಲಿದೆ. ಇನ್ನು ಹ್ಯುಂಡೈ ವೆನ್ಯೂ ಡೀಸೆಲ್ ಕಾರು 23.4 KMPL ಮೈಲೇಜ್ ನೀಡಲಿದೆ. ಮೈಲೇಜ್ ವಿಚಾರದಲ್ಲಿ ವೆನ್ಯೂ ಕಾರಿಗಿಂತ ಸೊನೆಟ್ ಕಾರು ಉತ್ತವಾಗಿದೆ.