ಸತತ 4ನೇ ದಿನ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ!

By Suvarna News  |  First Published Nov 23, 2020, 3:30 PM IST

ಭಾರತದಲ್ಲೀಗ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಆತಂಕ ಶುರುವಾಗಿದೆ. ಕಳೆದೆರಡು ತಿಂಗಳು ಸ್ಥಿರವಾಗಿದ್ದ ಬೆಲೆ ಇದೀಗ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಸತತ 4ನೇ ದಿನ ಇಂಧನ ಬೆಲೆ ಏರಿಕೆ ವಿವರ ಇಲ್ಲಿವೆ.
 


ನವದೆಹಲಿ(ನ.23):  ಕೊರೋನಾ ವೈರಸ್ ಹೊಡೆತದಿಂದ ಇನ್ನು ಚೇತರಿಸಿಕೊಂಡಿಲ್ಲ. ಅಷ್ಟರೊಳಗೆ ಇದೀಗ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಬಿಸಿ ತಟ್ಟಿದೆ. ಸತತ 4ನೇ ದಿನ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗಿದೆ. ಸೋಮವಾರ(ನ.23) ಪೆಟ್ರೋಲ್ ಬೆಲೆ 7 ಪೈಸೆ ಹಾಗೂ ಡೀಸೆಲ್ ಬೆಲೆ 20 ಪೈಸೆ ಏರಿಕೆಯಾಗಿದೆ.

ಸತತ 3ನೇ ದಿನ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ಭಾರತಕ್ಕೆ ತೀವ್ರ ಹೊಡೆತ!.

Tap to resize

Latest Videos

undefined

ಕಳೆದ ನಾಲ್ಕು ದಿನಗಳಲ್ಲಿ ಪೆಟ್ರೋಲ್ ಬೆಲೆ ಒಟ್ಟು 46 ಪೈಸೆ ಹಾಗೂ ಡೀಸೆಲ್ ಬೆಲೆ 80 ಪೈಸೆ ಹೆಚ್ಚಳವಾಗಿದೆ.  ಸೋಮವಾರ ನವದೆಹಲಿಯಲ್ಲಿ ಪೆಟ್ರೋಲ್ ಬೆಲೆ 81.53 ರೂಪಾಯಿ ಆಗಿದೆ. ಇನ್ನೂ ಡೀಸೆಲ್ ಬೆಲೆ 71.25 ರೂಪಾಯಿ ಆಗಿದೆ.  ಮುಂಬೈನಲ್ಲಿ ಪೆಟ್ರೋಲ್ ಬೆಲೆ 88.23 ರೂಪಾಯಿ ಆಗಿದ್ದು ಶತಕದತ್ತ ಮುನ್ನಗ್ಗುತ್ತಿದೆ.  ಇನ್ನು ಡೀಸೆಲ್ ಬೆಲೆ 77.73 ರೂಪಾಯಿ ಪ್ರತಿ ಲೀಟರ್‌ಗೆ ಆಗಿದೆ.

2 ತಿಂಗಳ ಬಳಿಕ ಮೊದಲ ಬಾರಿಗೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ!

ಬೆಂಗಳೂರು ಹಾಗೂ ಹೈದರಾಬಾದ್‌ಗಳಲ್ಲಿ ಪೆಟ್ರೋಲ್ ಬೆಲೆ ಸೋಮವಾರ 7 ಪೈಸೆ ಹೆಚ್ಚಳವಾಗಿದೆ. ಈ ಮೂಲಕ 84.25 ರೂಪಾಯಿ ಆಗಿದೆ. ಇನ್ನು ಡೀಸೆಲ್ ಬೆಲೆ 75.53 ರೂರಾಯಿ ಆಗಿದೆ. ಇನ್ನು ಕೋಲ್ಕತಾದಲ್ಲಿ ಪೆಟ್ರೋಲ್ ಬೆಲೆ 83.10  ರೂಪಾಯಿ ಹಾಗೂ ಡೀಸೆಲ್ ಬೆಲೆ 74.82 ರೂಪಾಯಿ ಪ್ರತಿ ಲೀಟರ್‌ಗೆ ಆಗಿದೆ.

4 ದಿನದಿಂದ ಇಂಧನ ಬೆಲೆ ಹೆಚ್ಚಳವಾಗುತ್ತಿದೆ. ಇದಕ್ಕೂ ಮೊದಲು ಸೆಪ್ಟೆಂಬರ್ 22 ರಿಂದ ಪೆಟ್ರೋಲ್ ಬೆಲೆ ಸ್ಥಿರವಾಗಿತ್ತು. ಇನ್ನು ಅಕ್ಟೋಬರ್ 2 ರಿಂದ ಡೀಸೆಲ್ ಬೆಲೆ ಸ್ಥಿರವಾಗೋ ಮೂಲಕ ಕಳೆದೆರಡು ತಿಂಗಳು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಕುರಿತು ಜನರು ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ.

click me!