ಅತೀ ದೊಡ್ಡ ರ‍್ಯಾಲಿ ಮೂಲಕ ಹಾರ್ಲೆ ಡೇವಿಡ್ಸನ್ ವಿರುದ್ಧ ಮಾಲೀಕರ ಪ್ರತಿಭಟನೆ!

By Suvarna NewsFirst Published Nov 22, 2020, 8:41 PM IST
Highlights

ವಿಶ್ವದ ಅತೀ ದೊಡ್ಡ ಮೋಟರ್‌ಸೈಕಲ್ ಬ್ರ್ಯಾಂಡ್ ವಿರುದ್ಧ ಭಾರತೀಯ ಮಾಲೀಕರು ಪ್ರತಿಭಟನೆ ನಡೆಸಿದ್ದಾರೆ. ಹಾರ್ಲೆ ಡೇವಿಡ್ಸನ್ ಮಾಲೀಕರ ಗುಂಪು ರ‍್ಯಾಲಿ ಆಯೋಜಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದ್ದಾರೆ. ಇವರ ಪ್ರತಿಭಟನೆಗೆ ಕಾರಣವೇನು? ಇಲ್ಲಿವೆ.

ನವದೆಹಲಿ(ನ.22): ಹಾರ್ಲೆ ಡೇವಿಡ್ಸನ್ ಭಾರತದಲ್ಲಿನ ಫ್ಯಾಕ್ಟರಿ ಸ್ಥಗಿತಗೊಳಿಸಿದ ಕಾರಣಕ್ಕೆ ಭಾರತದ ಹಾರ್ಲೇ ಡೇವಿಡನ್ಸ್ ಮಾಲೀಕರ ಗುಂಪು ಬೃಹತ್ ಪ್ರತಿಭಟನಾ ರ‍್ಯಾಲಿ ಆಯೋಜಿಸಿತು. ಡಾರ್ಕ್ ರೈಡ್ ಅನ್ನೋ  ಈ ರ‍್ಯಾಲಿಯಲ್ಲಿ ಸಾವಿರಕ್ಕೂ ಹೆಚ್ಚು ಹಾರ್ಲೇ ಡೇವಿಡನ್ಸ್ ಮಾಲೀಕರು ಪಾಲ್ಗೊಂಡಿದ್ದರು. ಇವರ ಜೊತೆ ಭಾರತದ 30ಕ್ಕೂ ಹೆಚ್ಚು ಹಾರ್ಲೆ ಡೇವಿಡನ್ಸ್ ಡೀಲರ್‌ಗಳು ಪಾಲ್ಗೊಂಡಿದ್ದರು.

ಹರ್ಲೇಡೇವಿಡ್ಸನ್ RS ಲ್ಯಾಂಬೋ; ಇದು ಬೈಕಲ್ಲ ಲ್ಯಾಂಬೋರ್ಗಿನಿ ಸೂಪರ್ ಕಾರು!

ಅಮೆರಿಕದ ಅತೀ ದೊಡ್ಡ ಮೋಟಾರ್‌ಸೈಕಲ್ ಹಾರ್ಲೆ ಡೇವಿಡ್ಸನ್ ಭಾರತದಲ್ಲಿನ ಫ್ಯಾಕ್ಟರಿ ಸ್ಥಗಿತಗೊಳಿಸಿದೆ. ಇದೀಗ ಹೀರೋ ಮೋಟೊಕಾರ್ಪ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಭಾರತದಲ್ಲಿ ಹಾರ್ಲೆ ಹೀರೋ ಜೊತೆ ಮುಂದುವರಿಯಲಿದೆ. ಹಾರ್ಲೆ ಡೇವಿಡ್ಸನ್ ನೇರ ಡೀಲರ್‌ಶಿಪ್‌ಗಳು ಕೂಡ ಮುಚ್ಚಲಾಗಿದೆ. ಹೀಗಾಗಿ ಹಾರ್ಲೆ ಡೇವಿಡ್ಸನ್ ಖರೀದಿಸಿದ ಮಾಲೀಕರ ಆತಂಕಕ್ಕೆ ಒಳಗಾಗಿದ್ದಾರೆ.

ಹಾರ್ಲೆ ಡೇವಿಡ್ಸನ್ ಎಲೆಕ್ಟ್ರಿಕ್ ಕಾನ್ಸೆಪ್ಟ್ ಬೈಕ್ ಅನಾವರಣ!...

ಹಾರ್ಲೆ ಡೇವಿಡ್ಸನ್ ಬಿಡಿ ಭಾಗಗಳು, ಸರ್ವೀಸ್ ಸೇರಿದಂತೆ ಇತರ ಸೇವೆಗಳ ಕುರಿತು ಹಾರ್ಲೇ ಡೇವಿಡ್ಸನ್ ಮಾಲೀಕರು ಆತಂಕಕ್ಕೆ ಒಳಗಾಗಿದ್ದಾರೆ.  ಇತ್ತ ಹಾರ್ಲೇ ಡೀಲರ್ ಕೂಡ ಆತಂಕ್ಕೆ ಒಳಗಾಗಿದ್ದಾರೆ. ಕೋಟಿ ಕೋಟಿ ಬಂಡವಾಳ ಹೂಡಿ ಹಾರ್ಲೇ ಡೀಲರ್  ಇದೀಗ ಮಾರಾಟವೂ ಇಲ್ಲದೆ ಅಪಾರ ನಷ್ಟ ಅನುಭವಿಸುತ್ತಿದ್ದಾರೆ. ಇನ್ನು ಹೀರೋ ಮೋಟೋಕಾರ್ಪ್ ಇವರ ಬೆಂಬಲಕ್ಕೆ ನಿಲ್ಲುವ ಕುರಿತು ಯಾವುದೇ ಮಾಹಿತಿ ಇಲ್ಲ ಅನ್ನೋದು ಪ್ರತಿಭಟನಾಕಾರರ ಆತಂಕವಾಗಿದೆ.

ದೆಹಲಿ, ಗುರಗಾಂವ್, ಬೆಂಗಳೂರು, ಮುಂಬೈ, ಇಂದೋರ್, ಭೋಪಾಲ್, ಕೋಲ್ಕತಾ, ಭುವನೇಶ್ವರ್, ಗವ್ಹಾಟಿ, ಲುಧಿಯಾನಾ, ಚಂಡಿಘಡ, ರಾಯಪುರ ಹಾಗೂ ಜೈಪುರದಲ್ಲಿ ಪ್ರತಿಭಟನಾ ರ‍್ಯಾಲಿ ಆಯೋಜಿಸಲಾಗಿತ್ತು.

click me!