ಭಾರತದಲ್ಲಿ ಆಲ್-ನ್ಯೂ BMW X5M ಕಾಂಪಿಟಿಷನ್ ಬಿಡುಗಡೆ !

By Suvarna NewsFirst Published Nov 26, 2020, 7:35 PM IST
Highlights

ಆಲ್-ನ್ಯೂ BMW X5M ಕಾಂಪಿಟಿಷನ್  ಕಾರು  ಡೈನಮಿಸಂ ಮತ್ತು ಉನ್ನತ ಚಾಲನೆಯ ಗುಣಲಕ್ಷಣಗಳು, ನಿಖರವಾದ ಶಕ್ತಿಯ ವರ್ಗಾವಣೆ: 8 -ಸ್ಪೀಡ್ M ಸ್ಟೆಪ್ಟ್ರಾನಿಕ್ ಟ್ರಾನ್‍ಮಿಷನ್ ಡ್ರೈವ್‍ಲಾಜಿಕ್, M ಎಕ್ಸ್‍ಡ್ರೈವ್ ಮತ್ತು ಆಕ್ಟಿವ್ M ಡಿಫರೆನ್ಷಿಯಲ್‍ನೊಂದಿಗೆ ನೂತನ ಕಾರು ಬಿಡುಗಡೆಯಾಗಿದೆ.

BMW ಇಂಡಿಯಾ ಆಲ್-ನ್ಯೂ BMW X5M ಕಾಂಪಿಟಿಷನ್ ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಅತ್ಯಂತ ಶಕ್ತಿಯುತ ಸ್ಪೋರ್ಟ್ಸ್ ಆಕ್ಟಿವಿಟಿ ವೆಹಿಕಲ್ (SAV) ಸರಿಸಾಟಿ ಇರದ ಕಾರ್ಯಕ್ಷಮತೆ ಮತ್ತು BMW M ವೈಶಿಷ್ಟ್ಯದ ಗುಣಲಕ್ಷಣಗಳನ್ನು ಒದಗಿಸಲು ವಿನ್ಯಾಸ ಮತ್ತು ರೂಪಿಸಲಾಗಿದೆ. 

ಭಾರತದಲ್ಲಿ ಫಸ್ಟ್ ಎವರ್ BMW X3M ಕಾರು ಬಿಡುಗಡೆ!..

ಆಲ್-ನ್ಯೂ BMW X5M ಒ ಈಗ ದೇಶದ ಎಲ್ಲ BMW ಡೀಲರ್‍ಶಿಪ್‍ಗಳಲ್ಲಿ ಕಂಪ್ಲೀಟ್ಲಿ ಬಿಲ್ಟ್-ಅಪ್ ಯೂನಿಟ್  ಆಗಿ ಲಭ್ಯ.  ಆಲ್-ನ್ಯೂ BMW X5M ಹೈ-ಪರ್ಫಾರ್ಮೆನ್ಸ್ SAV ಶಕ್ತಿಯನ್ನು ವರ್ಸಟಾಲಿಟಿಯೊಂದಿಗೆ ಸಂಯೋಜಿಸುತ್ತದೆ. ಇದರ ವಿಶಿಷ್ಟ ಗುಣಲಕ್ಷಣಗಳು BMW X5M  ಹೆಚ್ಚಿನ ಪ್ರಮಾಣದ ಪ್ರಭಾವವನ್ನು ಕಾರ್ಯಕ್ಷಮತೆ ನೀಡುತ್ತದೆ.  ಆಲ್-ನ್ಯೂ BMW X5M ಕಾಂಪಿಟಿಷನ್‍ನ ಎಕ್ಸ್-ಶೋರೂಂ ಬೆಲೆ  1,94,90,000 ರೂಪಾಯಿ   

ಆಲ್-ನ್ಯೂ BMW X5M ಈ ಮೆಟಾಲಿಕ್ ಬಣ್ಣಗಳು- ಕಾರ್ಬನ್ ಬ್ಲಾಕ್, ಬ್ಲಾಕ್ ಸಫೈರ್, ಮಿನರಲ್ ವ್ಹೈಟ್, ಮರಿನಾ ಬೇ ಬ್ಲೂ, ಡೊನಿಂಗ್ಟನ್ ಗ್ರೇ, ಮ್ಯಾನ್‍ಹಟನ್ ಗ್ರೀನ್ ಮತ್ತು ಟಾರ್ನೆಡೊ ರೆಡ್. ಐಚ್ಛಿಕವಾಗಿ BMW ಇಂಡಿವಿಜುಯಲ್ ಬಣ್ಣಗಳು ತಾಂಜಾನೈಟ್ ಬ್ಲೂ ಮತ್ತು ಅಮೆಟ್ರಿನ್‍ಗಳಲ್ಲಿ ಲಭ್ಯ. ಲ್-ನ್ಯೂ BMW X5M ಗಳಿಗೆ ಆನ್‍ಲೈನ್ ಬುಕಿಂಗ್ಸ್ ಆರಂಭಿಸಿದೆ. BMW ಎಕ್ಸೆಲೆನ್ಸ್ ಕ್ಲಬ್ ವಿನ್ಯಾಸಗೊಳಿಸಿದ ವಿಶೇಷ ಆತಿಥ್ಯದ ಅನುಭವ ಪಡೆಯುವ ವಿಶೇಷ ಅನುಕೂಲ ಪಡೆಯುತ್ತಾರೆ. 

ಭಾರತದಲ್ಲಿ ಫರ್ಸ್ಟ್ ಎವರ್ BMW 2 ಸೀರೀಸ್ ಗ್ರಾನ್ ಕೂಪೆ ಬಿಡುಗಡೆ!.

BMW ಅಧೀಕೃತ ವೆಬ್‌ಸೈಟ್‌ಗೆ  ಭೇಟಿ ನೀಡುವ ಮೂಲಕ ಗ್ರಾಹಕರು ವಾಹನದ ಹೊರಾಂಗಣ ಮತ್ತು ಒಳಾಂಗಣದ 360 ಡಿಗ್ರಿ ನೋಟದೊಂದಿಗೆ ಸ್ವಿಚ್ ಮೂಲಕ ಎಲ್ಲ ಫೀಚರ್ಸ್ ಮತ್ತು ವೈಯಕ್ತಿಕಗೊಳಿಸುವ ಆಯ್ಕೆಗಳನ್ನು ವೀಕ್ಷಿಸಬಹುದು. ಉತ್ಪನ್ನ, ಸೇವೆ, ಪ್ಯಾಕೇಜಸ್ ಮತ್ತು ಹಣಕಾಸು ಆಯ್ಕೆಗಳ ಎಲ್ಲ ವಿಚಾರಣೆಗಳನ್ನೂ ಡೀಲರ್ ಪ್ರತಿನಿಧಿಯೊಂದಿಗೆ ಆನ್‍ಲೈನ್‍ನಲ್ಲಿ ಸಂವಹನ ನಡೆಸುವ ಮೂಲಕ ಪರಿಹರಿಸಿಕೊಳ್ಳಬಹುದು. ಇದರೊಂದಿಗೆ ಪಾವತಿಗಳನ್ನು ಆನ್‍ಲೈನ್‍ನಲ್ಲಿ ಸುರಕ್ಷಿತ ರೀತಿಯಲ್ಲಿ ಮಾಡಬಹುದು. 

BMW ಗ್ರೂಪ್ ಇಂಡಿಯಾ ಪ್ರೆಸಿಡೆಂಟ್ ಶ್ರೀ ವಿಕ್ರಮ್ ಪಾವಾಹ್, BMW M ಪ್ರತಿನಿತ್ಯದ ಬಳಕೆಯೊಂದಿಗೆ ಅಧಿಕೃತ ಮೋಟಾರ್‌ಸ್ಪೋರ್ಟ್ಸ್  ಕಾರ್ಯವನ್ನು ಹೊಂದಿರುವುದರ ಕುರಿತು ಒಂದೇ ಮನಸ್ಸಿನ ಆಕಾಂಕ್ಷೆಯಿಂದ ಪ್ರೇರಿತವಾಗಿದೆ. ಆಲ್-ನ್ಯೂ BMW X5M ಕಾಂಪಿಟಿಷನ್ DNA ಯನ್ನು ಪಡೆದುಕೊಂಡಿದೆ ಮತ್ತು ಸ್ಪೋಟ್ರ್ಸ್ ಆಕ್ಟಿವಿಟಿ ವೆಹಿಕಲ್ ಸೆಗ್ಮೆಂಟ್ (SAV) ನಲ್ಲಿ ಹೊಸ ಆಯಾಮ ತಂದಿದೆ. ಇದು ‘M’ವಿಶೇಷವಾದ ಅಂಶಗಳು, ಮುಂಚೂಣಿಯ ಪ್ರಗತಿಯ ತೀವ್ರ ಆಕಾಂಕ್ಷೆ, ಉನ್ನತ ಶಕ್ತಿ, ಆಕರ್ಷಕ ಅಸ್ತಿತ್ವ ಮತ್ತು ಐಷಾರಾಮವನ್ನು ಬಿಂಬಿಸುವ ಅಲ್ಟ್ರಾ-ಮಾಡ್ರನ್ ಒಳಾಂಗಣ ಹೊಂದಿದೆ. ಶಕ್ತಿಯುತ V8 ಎಂಜಿನ್ ಮತ್ತು ಹಲವಾರು ಸುರಕ್ಷಿತ ಮತ್ತು ಸೌಖ್ಯದ ವಿಶೇಷತೆಗಳು ವಿಶಿಷ್ಟ, ಸ್ಪೋರ್ಟಿ ಮತ್ತು ವಿಶೇಷವಾದ ಚಾಲನೆಯ ಅನುಭವದ ಭರವಸೆ ನೀಡುತ್ತವೆ. ಆಲ್-ನ್ಯೂ BMW X5M ಕಾಂಪಿಟಿಷನ್ ಗ್ರಾಹಕರ ಅತ್ಯಂತ ಹೆಚ್ಚಿನ ನಿರೀಕ್ಷೆಗಳನ್ನು ಪೂರೈಸುತ್ತವೆ, ಬರೀ ಚುರುಕುತನದಲ್ಲಿ ಮಾತ್ರವಲ್ಲದೆ ಡೈನಮಿಕ್ಸ್ ಮತ್ತು ಶಕ್ತಿ ಅಲ್ಲದೆ ವೈಯಕ್ತಿಕತೆಯ ಅಭಿವ್ಯಕ್ತಿಯಲ್ಲೂ ತೋರಿಸುತ್ತದೆ” ಎಂದರು. 

BMW X5M ಡಿಸೈನ್ ಹೆಗ್ಗುರುತು ಮತ್ತು ಆಕರ್ಷಕ ಹೊರಾಂಗಣವು ಯಾವುದೇ ಪರಿಸರದಲ್ಲಿ ಎದ್ದು ಕಾಣುವ ಉನ್ನತ ಬಹಿರ್ಮುಖಿ ನೋಟ ನೀಡುತ್ತದೆ. ಇದನ್ನು ದೊಡ್ಡ ಫ್ರಂಟ್ ಬಂಪರ್ ಏರ್ ಇನ್‍ಟೇಕ್ ಓಪನಿಂಗ್ಸ್‍ನಲ್ಲಿ ಇದು ಕೂಲರ್‍ಗಳಿಗೆ ಹೆಚ್ಚುವರಿ ಗಾಳಿ ನೀಡುವಲ್ಲಿ ತಕ್ಷಣವೇ ಗುರುತಿಸಬಹುದು. ಇದು ರೂಫ್ ಮತ್ತು ಲೋಯರ್ ಟೈಲ್ ಗೇಟ್ ಅನ್ನು ಅವರ ಏರೊಡೈನಮಿಕ್ ವಿಸ್ತರಣೆಗಳ ಭಾಗವಾಗಿ ಹೊಂದಿದೆ. ಎಕ್ಸ್‍ಕ್ಲೂಸಿವ್ ‘ಒ’ ಲೈಟ್ ಅಲಾಯ್ ವ್ಹೀಲ್ಸ್ 21-ಇಂಚು ಮಾದರಿಯಲ್ಲಿ ಫ್ರಂಟ್-ಆಕ್ಸಲ್ ಮತ್ತು 22- ಇಂಚು ರಿಯರ್‍ನಲ್ಲಿ ಸ್ಟಾರ್-ಸ್ಪೋಕ್ ಸ್ಟೈಲ್ 809 ‘ಒ’ ಬೈ-ಕಲರ್ ಹೊಂದಿದೆ. ಐಚ್ಛಿಕ BMW X5M ಲೇಸರ್‌ಲೈಟ್ ಸೆಲೆಕ್ಟಿವ್ ಬೀಮ್ ನೀಡುತ್ತದೆ ಮತ್ತು ಡ್ಯಾಝ್ಲಿಂಗ್ ಹೈ ಬೀಮ್ ಫಂಕ್ಷನ್ 500 ಮೀಟರ್‍ಗಳ ವ್ಯಾಪ್ತಿ ನೀಡುತ್ತದೆ. 

ಇಂಟೀರಿಯರ್ ಕಾಕ್‍ಪಿಟ್ ಡಿಸೈನ್ ರೇಸ್ ಟ್ರ್ಯಾಕ್‍ನಿಂದ ಸ್ಫೂರ್ತಿ ಪಡೆದಿದೆ ಮತ್ತು ಅದನ್ನು ಪ್ರಭಾವಶಾಲಿ ವೈಶಾಲ್ಯತೆ ಮತ್ತು ಐಷಾರಾಮದ ಸಾಮಥ್ರ್ಯದೊಂದಿಗೆ ಸಂಯೋಜಿಸಲಾಗಿದೆ. ಕ್ಲಾಸಿ, ಸಮಕಾಲೀನ ಶೈಲಿಯ ಕ್ಯಾಬಿನ್ ಅಚ್ಚುಮೆಚ್ಚಿನ ಒ ಟ್ರೀಟ್‍ಮೆಂಟ್- ಬೆಸ್ಪೋಕ್ ಒ ಕಂಟ್ರೋಲ್ಸ್‍ಗೆ ಪೂರಕವಾಗಿದೆ ಮತ್ತು ಕೆಂಪು ಬಣ್ಣ ಹಾರಿರುವುದು ಒ ಲೆದರ್ ಸ್ಟೀರಿಂಗ್ ವ್ಹೀಲ್‍ನ ಒ ಬಟನ್ಸ್ ಚಾಲಕನಿಗೆ ಪೂರ್ಣವಾಗಿ ಡೈನಮಿಕ್ ಚಾಲನೆಯ 
ಅನುಭವ ಪಡೆಯಲು ನೆರವಾಗುತ್ತದೆ. 

ಒ ಮಲ್ಟಿಫಂಕ್ಷನ್ ಸೀಟ್ಸ್ ಮೇಲೆ ಇಂಟಿಗ್ರೇಟೆಡ್ ಹೆಡ್ ರೆಸ್ಟ್ಸ್ ಎಲೆಕ್ಟ್ರಿಕ್ ಅಡ್ಜಸ್ಟ್‍ಮೆಂಟ್ಸ್, ಹೆಡ್ ರಿಸ್ಟ್ರೈಂಟ್ ಎತ್ತರ, ಥೈ ಸಪೋರ್ಟ್, ಬ್ಯಾಕ್‍ರೆಸ್ಟ್ ಮತ್ತು ಆಂಗಲ್ ಹಾಗೂ ನ್ಯುಮಾಟಿಕ್ ಲುಂಬರ್ ಸಪೋರ್ಟ್ ಹೊಂದಿರುತ್ತದೆ. ಹ್ಯಾಂಡ್ಸ್-ಫ್ರೀ ಕಂಫರ್ಟ್ ಅಕ್ಸೆಸ್ ಲಗೇಜ್ ಸುಲಭವಾಗಿ ತುಂಬುವುದು ಮತ್ತು ಖಾಲಿ ಮಾಡಲು ಅನುಕೂಲ ಕಲ್ಪಿಸುತ್ತದೆ. ಆಲ್-ನ್ಯೂ BMW X5M ಕಾಂಪಿಟಿಷನ್ 12.3-ಇಂಚು ಮಲ್ಟಿಫಂಕ್ಷನ್ ಡಿಸ್ಪ್ಲೇ ಟಚ್‍ಸ್ಕ್ರೀನ್, ಐಡ್ರೈವ್ ಟಚ್ ಕಂಟ್ರೋಲರ್, ಮಲ್ಟಿಫಂಕ್ಷನ್ ಸ್ಟೀರಿಂಗ್ ವ್ಹೀಲ್‍ನ ಗುಂಡಿಗಳು, ವಾಯ್ಸ್ ಕಂಟ್ರೋಲ್ ಫೀಚರ್ ಅಲ್ಲದೆ ಆಪ್ಷನಲ್ BMW ಗೆಸ್ಚರ್ ಕಂಟ್ರೋಲ್ ಹೊಂದಿದೆ.

BMW ಲೈವ್ ಕಾಕ್‍ಪಿಟ್ ಪ್ರೊಫೆಷನಲ್ ನ್ಯಾವಿಗೇಷನ್ ಸಿಸ್ಟಂ ಮತ್ತು BMW ವರ್ಚುಯಲ್ ಅಸಿಸ್ಟೆಂಟ್‍ನೊಂದಿಗೆ ಸ್ಟಾಂಡರ್ಡ್ ಆಗಿ ನೀಡಲಾಗುತ್ತದೆ. ಇದು ವೈರ್‍ಲೆಸ್ ಚಾರ್ಜಿಂಗ್ ಮತ್ತು ಹರ್ಮನ್ ಕಾರ್ಡನ್ ಸರೌಂಡ್ ಸೌಂಡ್ ಸಿಸ್ಟಂ ಹೊಂದಿದೆ. ಒಳಾಂಗಣದ ಪರಿಸರವನ್ನು ಪನೋರಮ ಗ್ಲಾಸ್ ರೂಫ್ ಸ್ಕೈ ಲೌಂಜ್, ಅಕೌಸ್ಟಿಕ್ ಗ್ಲೇಜಿಂಗ್ ಮತ್ತು ಆಂಬಿಯೆಂಟ್ ಏರ್ ಪ್ಯಾಕೇಜ್ ಆಯ್ಕೆ ಮಾಡುವ ಮೂಲಕ ಮತ್ತಷ್ಟು ವಿಸ್ತರಿಸಬಹುದು. ಐಚ್ಛಿಕವಾಗಿ ಲಭ್ಯವಿರುವ ರಿಯರ್ ಸೀಟ್ ಎಂಟರ್‍ಟೈನ್‍ಮೆಂಟ್ ಪ್ರೊಫೆಷನಲ್ ಮತ್ತು ಬೋವರ್ಸ್ ಅಂಡ್ ವಿಲ್ಕಿನ್ಸ್ ಡೈಮಂಡ್ ಸರೌಂಡ್ ಸೌಂಡ್ ಸಿಸ್ಟಂ ಉನ್ನತ ಮನರಂಜನೆಯ ಅನುಭವ ನೀಡುತ್ತದೆ. BMW ಇಂಡಿವಿಜುಯಲ್ ಉನ್ನತ ಗುಣಮಟ್ಟದ ಆಯ್ಕೆಗಳು ವಿಶೇಷ ಪೇಂಟ್‍ವರ್ಕ್ ಮತ್ತು ಇಂಟೀರಿಯರ್ ಟ್ರಿಮ್‍ಗಳ ಬೆಸ್ಪೋಕ್ ಲಕ್ಷಣ ಸೃಷ್ಟಿಸುತ್ತದೆ. 

ಉನ್ನತ ಕಾರ್ಯಕ್ಷಮತೆಯ ಎಂಜಿನ್ ಅತ್ಯಾಧುನಿಕ 8-ಸ್ಪೀಡ್ ಸ್ಟೆಪ್ಟ್ರಾನಿಕ್ ಆಟೊಮ್ಯಾಟಿಕ್ ಟ್ರಾನ್ಸ್‍ಮಿಷನ್‍ನೊಂದಿಗೆ ಸನ್ನದ್ಧವಾಗಿದೆ. ಈ ಟ್ರಾನ್ಸ್‍ಮಿಷನ್ ಮೃದುವಿನಿಂದ ಅಗ್ರೆಸಿವ್‍ಗೆ ಥ್ರೀ-ಸ್ಟೇಜ್ ಡ್ರೈವ್‍ಲಾಜಿಕ್ ಶಿಫ್ಟಿಂಗ್ ಸಿಸ್ಟಂನೊಂದಿಗೆ ಹೊಂದಿಕೊಳ್ಳುತ್ತದೆ. ಸ್ಟೀರಿಂಗ್ ವ್ಹೀಲ್ ಪ್ಯಾಡಲ್ ಶಿಫ್ಟರ್ಸ್, ಕ್ರೂಸ್ ಕಂಟ್ರೋಲ್ ವಿಥ್ ಬ್ರೇಕಿಂಗ್ ಫಂಕ್ಷನ್ ಸ್ಟಾಂಡರ್ಡ್ ಆಗಿದೆ ಮತ್ತು ಲಾಂಚ್ ಕಂಟ್ರೋಲ್ ಫಂಕ್ಷನ್ ಮತ್ತಷ್ಟು ಹೆಚ್ಚಿನ ಚಾಲನೆಯ ಸಂತೋಷ ನೀಡುತ್ತದೆ. ಒ ಎಕ್ಸ್‍ಡ್ರೈವ್ ಆಲ್-ವ್ಹೀಲ್ ಡ್ರೈವ್ ಸಿಸ್ಟಂ ಮತ್ತು ಆಕ್ಟಿವ್ ಒ ಡಿಫರೆನ್ಷಿಯಲ್ ರಸ್ತೆಯ ಮೇಲಿನ ಕಾರ್ಯಕ್ಷಮತೆಯಲ್ಲಿ ಅತ್ಯಂತ ಡೈನಮಿಕ್ ಮತ್ತು ಆಫ್-ರೋಡ್ ಸಾಮಥ್ರ್ಯದಲ್ಲಿ ಪ್ರಾಬಲ್ಯ ನೀಡಲಿದೆ.

click me!