ಈ ವರ್ಷದ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಸುಲಭ ಚಾರ್ಜಿಂಗ್, ಗರಿಷ್ಠ ಪ್ರಯಾಣ ಸೇರಿದಂತೆ ಹಲವು ವಿಶೇಷತೆಗಳು ಈ ಸ್ಕೂಟರ್ನಲ್ಲಿದೆ. ನೂತನ ಎಲೆಕ್ಟ್ರಿಕ್ ಸ್ಕೂಟರ್ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
ನವದೆಹಲಿ(ಜ.27): 2019ರ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗಿದೆ. ಜಪಾನ್ ಮೂಲದ ಒಕಿನಾವ ಸಂಸ್ಥೆ ಇದೀಗ ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಲಿಥಿಯಂ ಬ್ಯಾಟರಿ ಒಳಗೊಂಡಿರುವ ಒಕಿನಾವ ಐ ಪ್ರೈಸ್ ಸ್ಕೂಟರ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
undefined
ಇದನ್ನೂ ಓದಿ: ಶೀಘ್ರದಲ್ಲಿ ಮಹೀಂದ್ರ GenZe ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ!
2 ರಿಂದ 3 ಗಂಟೆ ಚಾರ್ಜ್ ಮಾಡಿದರೆ 160 ರಿಂದ 180 ಕಿ.ಮೀ ಪ್ರಯಾಣ ಮಾಡಬುಹುದಾಗಿದೆ. ಈ ಸ್ಕೂಟರ್ ಗರಿಷ್ಠ ವೇಗ ಗರಿಷ್ಠ ವೇಗ 77KMPH.ಒಕಿನಾವ ಐ ಪ್ರೈಸ್ ಬೆಲೆ 1.15 ಲಕ್ಷ ರೂಪಾಯಿ. ಮಾರುಕಟ್ಟೆಯಲ್ಲಿರುವ ಎಲೆಕ್ಟ್ರಿಕಲ್ ಸ್ಕೂಟರ್ಗೆ ಹೋಲಿಸಿದರೆ ಒಕಿನಾವ ಆಕರ್ಷಕ ವಿನ್ಯಾಸ ಹೊಂದಿದೆ.
ಇದನ್ನೂ ಓದಿ: ಗ್ರೀನ್ ಸೆಸ್: ಮತ್ತೆ ಹೆಚ್ಚಾಗಲಿದೆ ಪೆಟ್ರೋಲ್ ಬೈಕ್, ಸ್ಕೂಟರ್ ಬೆಲೆ !
ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಎಲೆಕ್ಟ್ರಾನಿಕ್ ಅಸಿಸ್ಟೆಡ್ ಬ್ರೇಕಿಂಗ್ ಸಿಸ್ಟಮ್(ABS) ಹೊಂದಿದೆ. ಕಳ್ಳತನ ಅಲರಾಮ್, ಕೀ ಲೆಸ್ ಎಂಟ್ರಿ, ಸೆಂಟ್ರಲ್ ಲಾಂಕಿಂಗ್ ಸೌಲಭ್ಯ ಹೊಂದಿದೆ. ಈ ಸ್ಕೂಟರ್ 5,000 ರೂಪಾಯಿ ನೀಡಿ ಬುಕ್ ಮಾಡಬಹುದು. ಮೊದಲ ಹಂತದಲ್ಲಿ 500 ಸ್ಕೂಟರ್ ಗ್ರಾಹಕರನ್ನ ತಲುಪಲಿದೆ. ಹೀಗಾಗಿ ಮೊದಲ ಬುಕಿಂಗ್ ಮಾಡುವವರಿಗೆ ಹೆಚ್ಚಿನ ಅದ್ಯತೆ ಸಿಗಲಿದೆ.