ಗ್ರೀನ್ ಸೆಸ್: ಮತ್ತೆ ಹೆಚ್ಚಾಗಲಿದೆ ಪೆಟ್ರೋಲ್ ಬೈಕ್, ಸ್ಕೂಟರ್ ಬೆಲೆ !

By Web Desk  |  First Published Jan 26, 2019, 6:09 PM IST

ಹೊಸ ನಿಯಮಗಳಿಂದ ಈಗಾಗಲೇ ಬೈಕ್ ಹಾಗೂ ಸ್ಕೂಟರ್ ಬೆಲೆ ಹೆಚ್ಚಾಗಿದೆ. ಇದೀಗ  ಗ್ರೀನ್ ಸೆಸ್‌ನಿಂದಾಗಿ ಮತ್ತೆ ಬೈಕ್ ಹಾಗೂ ಸ್ಕೂಟರ್ ಬೆಲೆ ಹೆಚ್ಚಾಗಲಿದೆ. ಏನಿದು ಗ್ರೀನ್ ಸೆಸ್? ಬೆಲೆ ಹೆಚ್ಚಳ ಎಷ್ಟಾಗಲಿದೆ? ಇಲ್ಲಿದೆ ವಿವರ.


ನವದೆಹಲಿ(ಜ.26): ವಿಮೆ ನಿಯಮ ಬದಲಾವಣೆ, BS VI ಎಮಿಶನ್ ಎಂಜಿನ್ ನಿಯಮ ಸೇರಿದಂತೆ ಹಲವು ನೂತನ ನಿಯಮದಿಂದ ಭಾರತದಲ್ಲಿ ವಾಹನಗಳ ಬೆಲೆ ಹೆಚ್ಚಾಗಿದೆ. ಇದೀಗ ಗ್ರೀನ್ ಸೆಸ್ ಜಾರಿ ಮಾಡಲು ಸರ್ಕಾರ ಮುಂದಾಗಿದೆ. ಇದರಿಂದ ಪೆಟ್ರೋಲ್ ಸ್ಕೂಟರ್ ಹಾಗೂ ಬೈಕ್ ಬೆಲೆ ಮತ್ತೆ ಏರಿಕೆ ಕಾಣಲಿದೆ.

Latest Videos

undefined

ಇದನ್ನೂ ಓದಿ: ಬೆಂಗಳೂರಿನಲ್ಲಿ ಟಾಟಾ ಹರಿಯರ್ ಕಾರಿನ ಆನ್ ರೋಡ್ ಬೆಲೆ ಎಷ್ಟು?

ಮಾಲಿನ್ಯ ನಿಯಂತ್ರಣಕ್ಕೆ ಹಲವು ನಿಯಮಗಳು ಜಾರಿಯಾಗುತ್ತಿದೆ. ಹೊಗೆ ಉಗುಳುವ ಹಳೇ ವಾಹನಗಳನ್ನ ರಸ್ತೆಗಿಳಿಸುವಂತಿಲ್ಲ, ಸಮ-ಬೆಸ ಸಂಖ್ಯೆ ನಂಬರ್ ಕಾರಿಗೆ ನಿಗಧಿತ ದಿನ ಸೇರಿದಂತೆ ಹಲವು ನಿಯಮಗಳು ಚರ್ಚೆಗೆ ಒಳಪಟ್ಟಿವೆ. ಇದೀಗ  ಎಲೆಕ್ಟ್ರಿಕ್ ವಾಹನದತ್ತ ಭಾರತ ಚಿತ್ತ ಹರಿಸಿದೆ. ಹೀಗಾಗಿ ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಬೈಕ್ ಉತ್ತೇಜಿಸಲು, ಪೆಟ್ರೋಲ್ ಬೈಕ್ ಹಾಗೂ ಸ್ಕೂಟರ್ ಮೇಲೆ ಗ್ರೀನ್ ಸೆಸ್ ಹಾಕಲು ಮುಂದಾಗಿದೆ.

ಇದನ್ನೂ ಓದಿ: ಮೇಡ್ ಇನ್ ಇಂಡಿಯಾ ಎಲೆಕ್ಟ್ರಿಕ್ ಕಾರು - ಪ್ರತಿ ಚಾರ್ಜ್‌ಗೆ 540 ಕೀ.ಮಿ ಪ್ರಯಾಣ

ಪ್ರತಿ ಪೆಟ್ರೋಲ್ ಸ್ಕೂಟರ್ ಹಾಗೂ ಬೈಕ್ ಮೇಲೆ ಗ್ರೀನ್ ಸೆಸ್ ಹೊರೆ ಬೀಳಲಿದೆ. ಇದು ಕನಿಷ್ಠ 800 ರೂಪಾಯಿಂದ ಆರಂಭಗೊಳ್ಳಲಿದೆ. ಪ್ರತಿ ಸ್ಕೂಟರ್ ಹಾಗೂ ಬೈಕ್‌ಗೆ ಬೇರೆ ಬೇರೆ ಸೆಸ್ ನಿಗಧಿಪಡಿಸಲಾಗುತ್ತೆ. ಎಲೆಕ್ಟ್ರಿಕ್ ವಾಹನಗಳನ್ನ ಉತ್ತೇಜಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳೋ ಸಾಧ್ಯತೆ ಹೆಚ್ಚಿದೆ.

click me!