ಲೀಫ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಖಚಿತಪಡಿಸಿದ ನಿಸಾನ್!

By Web Desk  |  First Published Jan 22, 2019, 3:23 PM IST

ಭಾರತದಲ್ಲಿ ನಿಸಾನ್ ಕಾರು ಸಂಸ್ಥೆ ಎಲೆಕ್ಟ್ರಿಕಲ್ ಕಾರು ಬಿಡುಗಡೆ ಮಾಡಲಿದೆ ಅನ್ನೋದನ್ನ ಖಚಿತಪಡಿಸಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 400 ಕೀಮಿ ಪ್ರಯಾಣಿಸಬಲ್ಲ ಕಾರಿನ ವಿಶೇಷತೆ ಇಲ್ಲಿದೆ.


ನವದೆಹಲಿ(ಜ.22): ಬಹುನಿರೀಕ್ಷಿತ ನಿಸಾನ್ ಕಿಕ್ಸ್ SUV ಕಾರು ಬಿಡುಗಡೆಯಾಗಿದೆ. ಇದರ ಬೆನ್ನಲ್ಲೇ ನಿಸಾನ್ ಎಲೆಕ್ಟ್ರಿಕ್ ಕಾರು ಬಿಡುಗಡೆಯನ್ನೂ ಖಚಿತ ಪಡಿಸಿದೆ. ಈ ವರ್ಷ ನಿಸಾನ್ ಲೀಫ್ ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ರೋಡ್ ಟೆಸ್ಟ್ ಹಾಗೂ ಇತರ ಪರೀಕ್ಷೆಗಳನ್ನ  ಯಶಸ್ವಿಯಾಗಿ ಮುಗಿಸಿರುವ ನಿಸಾನ್ ಲೀಫ್ ಶೀಘ್ರದಲ್ಲೇ ರಸ್ತೆಗಿಳಿಯಲಿದೆ.

Tap to resize

Latest Videos

undefined

ಇದನ್ನೂ ಓದಿ: ನಿಸಾನ್ ಕಿಕ್ಸ್ SUV ಕಾರು ಬಿಡುಗಡೆ - ಕ್ರೇಟಾ, ಮಹೀಂದ್ರ XUV 500ಗೆ ಪೈಪೋಟಿ!

ನಿಸಾನ್ ಲೀಫ್ ಕಾರಿನ ವಿಶೇಷತೆ ಅಂದರೆ ಒಂದು ಬಾರಿ ಚಾರ್ಜ್ ಮಾಡಿದರೆ 400 ಕಿ.ಮೀ ಪ್ರಯಾಣಿಸಬಹುದು. ಬ್ಯಾಟರಿ ಫುಲ್ ಚಾರ್ಜ್ ಮಾಡಲು 3 ಕಿಲೋ ವ್ಯಾಟ್ ಪ್ಲಗ್‌ನಲ್ಲಿ 16 ಗಂಟೆ ಹಾಗೂ 6 ಕಿಲೋ ವ್ಯಾಟ್ ಸಾಕೆಟ್‌ನಲ್ಲಿ 6 ಗಂಟೆ ಚಾರ್ಜ್ ಮಾಡಬೇಕು. ಇದರಲ್ಲಿ ಕ್ವಿಕ್ ಚಾರ್ಜ್ ಕೂಡ ಲಭ್ಯವಿದೆ. ಕ್ವಿಕ್ ಚಾರ್ಜ್ ಮೂಲಕ 40 ನಿಮಿಷ ಚಾರ್ಜ್ ಮಾಡಿದರೆ ಶೇಕಡಾ 80 ರಷ್ಟು ಬ್ಯಾಟರಿ ಚಾರ್ಜ್ ಆಗಲಿದೆ.

ಇದನ್ನೂ ಓದಿ: ಶೀಘ್ರದಲ್ಲಿ ಅಶೋಕ್ ಲಯ್ಲೆಂಡ್ ಎಲೆಕ್ಟ್ರಿಕ್ ಬಸ್-ಪ್ರಯಾಣ ಇನ್ನು ಸುಲಭ!

148bhp ಪವರ್ ಹಾಗೂ 320nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ಇದರ ಬೆಲೆ 35 ರಿಂದ 40 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಇನ್ನು ಗರಿಷ್ಠ ಸುರಕ್ಷತೆ, ಏರ್‌ಬ್ಯಾಗ್, ABS ಸೇರಿದಂತೆ ಹಲವು ಫೀಚರ್ಸ್‌ಗಳು ಲಭ್ಯವಿದೆ.
 

click me!