ಬಿಡುಗಡೆಯಾಗಲಿದೆ ಮಹೀಂದ್ರ XUV 300 ಎಲೆಕ್ಟ್ರಿಕ್ ಕಾರು!

By Web DeskFirst Published Jan 21, 2019, 9:47 PM IST
Highlights

ಮಹೀಂದ್ರ XUV 300 ಕಾರು ಫೆಬ್ರವರಿ 14 ರಂದು ಬಿಡುಗಡೆಯಾಗಲಿದೆ. ಇದೀಗ ಮಹೀಂದ್ರ ಇದೇ ಕಾರನ್ನ ಎಲೆಕ್ಟ್ರಿಕ್ ವೇರಿಯೆಂಟ್‌ನಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ. ಈ ಕಾರಿನ ವಿಶೇಷತೆ ಏನು? ಇಲ್ಲಿದೆ.

ನವದೆಹಲಿ(ಜ.21): ಮಾರುತಿ ಬ್ರಿಜಾ, ಫೋರ್ಡ್ ಇಕೋಸ್ಪೋರ್ಟ್ ಪ್ರತಿಸ್ಪರ್ಧಿ ಮಹೀಂದ್ರ XUV 300 ಕಾರು ಫೆಬ್ರವರಿ 14 ರಂದು ಬಿಡುಗಡೆಯಾಗಲಿದೆ. ಇದೀಗ ಮಹೀಂದ್ರ ಇದೇ ಮಹೀಂದ್ರ XUV 300 ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲು ಮುಂದಾಗಿದೆ. ಈ ಮೂಲಕ ಮಹೀಂದ್ರ KUV100 ಬಳಿಕ XUV 300 ಕಾರನ್ನೂ ಎಲೆಕ್ಟ್ರಿಕ್ ಕಾರಾಗಿ ಪರಿವರ್ತಿಸಲು ನಿರ್ಧರಿಸಿದೆ.

ಇದನ್ನೂ ಓದಿ: ಮಕ್ಕಳಿಗಾಗಿ ಪುಟ್ಟ ಆಟೋ ರಿಕ್ಷಾ ನಿರ್ಮಿಸಿದ ತಂದೆ!

2020ರಲ್ಲಿ ಮಹೀಂದ್ರ XUV 300 ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗಲಿದೆ. ಮಹೀಂದ್ರ XUV 300 ಡೀಸೆಲ್, ಪೆಟ್ರೋಲ್ ಕಾರೂ ಹಾಗೂ ಎಲೆಕ್ಟ್ರಿಕ್ ಕಾರಿನ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಇಲ್ಲ. ಅದೇ ಆಕರ್ಷಕ ಲುಕ್‌ನಿಂದಲೇ ರಸ್ತೆಗಿಳಿಯಲಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 250 ಕಿ.ಮೀ ಪ್ರಯಾಣ ಮಾಡಬಹುದು ಎಂದು ಮಹೀಂದ್ರ ಹೇಳಿದೆ.

ಇದನ್ನೂ ಓದಿ: ಹ್ಯುಂಡೈ ಎಲೈಟ್ ಐ20 ಕಾರು ಬಿಡುಗಡೆ-ಬಲೆನೋಗೆ ಪೈಪೋಟಿ!

ಮಹೀಂದ್ರ XUV 300 ಗರಿಷ್ಠ ವೇಗ 160 ಕಿ.ಮೀ. 380 ವೋಲ್ಟ್ ಬ್ಯಾಟರಿ ಹೊಂದಿರುವ ಈ ಕಾರು ಅತ್ಯಂತ ಬಲಿಷ್ಠ ಎಂದು ಮಹೀಂದ್ರ ಹೇಳಿದೆ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜ್ ಮಾಡಬಲ್ಲ ಪಾಯಿಂಟ್‌ಗಳು ಅಭಿವೃದ್ದಿ ನಡೆಯುತ್ತಿದೆ. ಹೀಗಾಗಿ 2020ರ ವೇಳೆಗೆ ಮಹೀಂದ್ರ XUV 300 ಎಲೆಕ್ಟ್ರಿಕ್ ವಾಹನ ಬಿಡುಗಡೆ ಮಾಡಲಿದೆ. ಈ ಕಾರಿ ಬೆಲೆ ಕುರಿತು ಯಾವುದೇ ಮಾಹಿತಿ ಕಂಪೆನಿ ಬಹಿರಂಗ ಪಡಿಸಿಲ್ಲ.

click me!