Nissan Kicks SUV ಕಾರು ಬಿಡುಗಡೆ - ಕ್ರೇಟಾ, ಮಹೀಂದ್ರ XUV 500ಗೆ ಪೈಪೋಟಿ!

By Web Desk  |  First Published Jan 22, 2019, 2:55 PM IST

SUV ಸೆಗ್ಮೆಂಟ್‌ ಕಾರುಗಳಲ್ಲಿ ಇದೀಗ Nissan Kicks ಸಂಚಲನ ಮೂಡಿಸಲು ರೆಡಿಯಾಗಿದೆ. ಅತ್ಯಾಕರ್ಷಕ ವಿನ್ಯಾಸ ಹಾಗೂ ಬಲಿಷ್ಠ ಎಂಜಿನ್ ಹೊಂದಿರುವ Nissan Kicks ಬಿಡುಗಡೆಯಾಗಿದೆ. ಈ ಕಾರಿನ ವಿಶೇಷತೆ ಇಲ್ಲಿದೆ.


ನವದೆಹಲಿ(ಜ.22): ಭಾರಿ ಕುತೂಹಲ ಕೆರಳಿಸಿದ್ದ ಜಪಾನ್ ಮೂಲಧ  Nissan Kicks SUV ಕಾರು ಬಿಡುಗಡೆಯಾಗಿದೆ. ಡಸ್ಟರ್‌, ಹುಂಡೈ ಕ್ರೇಟಾ, ಮಹೀಂದ್ರಾ ಎಕ್ಸ್‌ಯುವಿ 500, ಮಾರುತಿ ಬ್ರೆಜ್ಜಾ ಸೇರಿದಂತೆ SUV ಕಾರುಗಳಿಗೆ  ತೀವ್ರ ಪೈಪೋಟಿ ನೀಡಲಿದೆ. ಅತ್ಯುತ್ತಮ ಗ್ರೌಂಡ್ ಕ್ಲೀಯರೆನ್ಸ್ ಹಾಗೂ ಗರಿಷ್ಠ ಸುರಕ್ಷತೆಯೊಂದಿಗೆ Nissan Kicks ರಸ್ತೆಗಿಳಿದಿದೆ.

Tap to resize

Latest Videos

undefined

ಇದನ್ನೂ ಓದಿ: ಒಂದು ಬಾರಿ ಚಾರ್ಜ್‌ಗೆ 250 ಕೀಮಿ ಪ್ರಯಾಣ- ಬರುತ್ತಿದೆ ನಿಸಾನ್ ಎಲೆಕ್ಟ್ರಿಕಲ್ ಕಾರು !

ನೂತನ Nissan Kicks ಬೆಲೆ 9.55 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ನಿಂದ 14.65 ಲಕ್ಷ ರೂಪಾಯಿವರೆಗಿದೆ(ಎಕ್ಸ್ ಶೋ ರೂಂ). Nissan Kicks ಎರಡು ಮಾದರಿಗಳಲ್ಲಿ ಲಭ್ಯವಿದೆ. 1.5ಲೀ. ಪೆಟ್ರೋಲ್‌ ಮಾದರಿಯಲ್ಲಿ 1498ಸಿಸಿಯ 106ಪಿಎಸ್‌ ಎಂಜಿನ್‌ ಪವರ್‌, 5 ಸ್ಪೀಡ್‌ ಮ್ಯಾನ್ಯುವಲ್‌ ಗೇರ್‌ಬಾಕ್ಸ್‌ , 21 ಸೆಮೀ ಗ್ರೌಂಡ್‌ ಕ್ಲಿಯರನ್ಸ್‌ ಇದೆ. ಅದೇ ರೀತಿ 1.5ಲೀ. ಡೀಸೆಲ್‌ಎಂಜಿನ್‌ನ ಕಿಕ್ಸ್‌, 110ಪಿಎಸ್‌ ಎಂಜಿನ್‌ ಪವರ್‌, 6 ಸ್ಪೀಡ್‌ ಮ್ಯಾನುವಲ್‌ ಗೇರ್‌ಬಾಕ್ಸ್‌, 21ಸೆಮೀ ಗ್ರೌಂಡ್‌ ಕ್ಲಿಯರನ್ಸ್‌ ವಿಶೇಷತೆಗಳನ್ನು ಹೊಂದಿದೆ.

 

There it is. Final and official. New Nissan KICKS starts at Rs. 9.55 Lacs.
Book now: https://t.co/uC9y5kDQ2g pic.twitter.com/s1FdifqzD8

— Nissan India (@Nissan_India)

 

ಐದು ಜನ ಆರಾಮವಾಗಿ ಪ್ರಯಾಣಿಸಬಹುದು. ಆ ಅಳತೆಗೆ ತಕ್ಕಂತೆ ಒಳಬದಿಯ ವಿಸ್ತಾರವಿದೆ. 4384 ಎಂಎಂ ಉದ್ದ, 1813 ಎಂಎಂ ಅಗಲವಿದೆ. 2673ಎಂಎಂ ಅಗಲದ ವ್ಹೀಲ್‌ ಬೇಸ್‌ ಸುತ್ತಳತೆ ಹೊಂದಿದ್ದು 5.2ಮೀ ಟರ್ನಿಂಗ್‌ ರೇಡಿಯಸ್‌ ವಿಶೇಷತೆಯೊಂದಿಗೆ 50ಲೀ. ಇಂಧನ ಟ್ಯಾಂಕ್‌ ಹೊಂದಿದೆ.

ಇದನ್ನೂ ಓದಿ: ಫೋರ್ಡ್ ಮಸ್ತಂಗ್ to ರೋಲ್ಸ್ ರಾಯ್ಸ್- ಹೃತಿಕ್ ಬಳಿ ಇದೆ ಅತ್ಯಂತ ದುಬಾರಿ ಕಾರು!

ಕಿಕ್ಸ್ ವಿಶೇಷತೆ ಏನೆಂದರೆ ಇದು ಫ್ರೋಟಿಂಗ್ ರೂಫ್ ವಿನ್ಯಾಸ ಹೊಂದಿದೆ. ಎಲ್‌ಇಡಿ ಡಿಆರ್‌ಎಲ್ ಮತ್ತು ಶಾರ್ಕ್ ಫಿನ್ ಆಂಟೇನಾ ಇದೆ. ಮುಂಭಾಗದ ಫಾಗ್ ಲ್ಯಾಂಪ್‌ಗಳು ಎಂಥಾ ಮಂಜು ಕವಿದ ರಸ್ತೆಯಿದ್ದರೂ ದಾರಿ ಸ್ಪಷ್ಟವಾಗಿ ಗೋಚರಿಸುವಂತೆ ಮಾಡುತ್ತದೆ. ಇದರಿಂದ ಕಾರು ಸರಾಗವಾಗಿ ಚಲಿಸುವಂತೆ ಮಾಡುತ್ತದೆ. 

ಇದನ್ನೂ ಓದಿ: ಶೀಘ್ರದಲ್ಲೇ ಭಾರತಕ್ಕೆ ಬರಲಿದೆ ಹಾರುವ ಕಾರು-ಬೆಲೆ ಎಷ್ಟು?

Nissan Kicks ಸುರಕ್ಷತೆ ಹಾಗೂ ಭದ್ರತೆಯನ್ನು ಒದಗಿಸುವ ಅತ್ಯಾಧುನಿಕ ತಂತ್ರಜ್ಞಾನ ಎನ್‌ಐಎಂ: ನಿಸಾನ್‌ ಇಂಟಲಿಜೆಂಟ್‌ ಮೊಬಿಲಿಟಿ ಹೊಂದಿದೆ. ಇದರ ಮೂಲಕ ಕುಳಿತಲ್ಲಿಯೇ ವಾಹನವಿರುವ ಸ್ಥಳ ವಿವರ ಹಾಗೂ ಅದರ ವೇಗವನ್ನು ತಿಳಿಯಬಹುದು. ಅಷ್ಟೇ ಅಲ್ಲ ನಿಗದಿತ ಸಮಯ ಮೀರಿದಾಗ, ಅಪರಿಚಿತ ಸ್ಥಳ ಪ್ರವೇಶಿಸಿದಾಗ ಪರೋಕ್ಷವಾಗಿಯೇ ಜಿಯೋಫೆನ್ಸಿಂಗ್‌ ಅಲರ್ಟ್‌ ಸಿಸ್ಟಂ ಮೊಬೈಲ್‌ಗೆ ಮಾಹಿತಿ ರವಾನಿಸುತ್ತೆ. ಸುರಕ್ಷತೆಗಾಗಿ ಇದರಲ್ಲಿ ಮೂರು ಏರ್‌ಬ್ಯಾಗ್‌ಗಳಿವೆ. ಎಬಿಎಸ್‌, ವೆಹಿಕಲ್‌ ಡೈನಾಮಿಕ್‌ ಕಂಟ್ರೋಲ್‌, ಟ್ರಾಕ್ಷನ್‌ ಕಂಟ್ರೋಲ್‌, ಇಕೋ ಮೋಡ್‌, ಇಂಟಲಿಜೆಂಟ್‌ ಟ್ರೇಸ್‌ ಕಂಟ್ರೋಲ್‌, ಕ್ರೂಸ್‌ ಕಂಟ್ರೋಲ್‌, ಹಿಲ್‌ ಸ್ಟಾರ್ಟ್‌ ಅಸಿಸ್ಟ್‌ ಹೀಗೆಯೇ ಸುರಕ್ಷತೆಗಾಗಿ ಹಲವು ಆಪ್ಶನ್‌ಗಳಿವೆ.

click me!