ಶೀಘ್ರದಲ್ಲೇ ಭಾರತದಲ್ಲಿ ನಿಸಾನ್ B-SUV ಬಿಡುಗಡೆ; ಕುತೂಹಲ ಹೆಚ್ಚಿಸಿದ ಕಾರು!

Published : Jul 02, 2020, 09:17 PM IST
ಶೀಘ್ರದಲ್ಲೇ ಭಾರತದಲ್ಲಿ ನಿಸಾನ್ B-SUV ಬಿಡುಗಡೆ; ಕುತೂಹಲ ಹೆಚ್ಚಿಸಿದ ಕಾರು!

ಸಾರಾಂಶ

ನಿಸಾನ್ ಇದೀಗ ಹೊಚ್ಚ ಹೊಸ SUV ಕಾರು ಬಿಡುಗಡೆ ಮಾಡುತ್ತಿದೆ. ಈ ಮೂಲಕ ಹಲವು SUV ಕಾರುಗಳಿಗೆ ಪೈಪೋಟಿ ನೀಡಲು ಸಜ್ಜಾಗಿದೆ. ನೂತನ ಕಾರಿನ ಕುರಿತ ಮಾಹಿತಿ ಇಲ್ಲಿದೆ.

ಬೆಂಗಳೂರು(ಜು.2): ನಿಸಾನ್ ಇಂಡಿಯಾ ತನ್ನ ಬಹು ನಿರೀಕ್ಷಿತ ಬಿ-ಎಸ್ ಯುವಿ ಮಾದರಿಯ ವೈಶಿಷ್ಟ್ಯತೆಗಳನ್ನು ಬಹಿರಂಗಪಡಿಸಿದೆ. ಅತ್ಯಾಕರ್ಷಕವಾದ ಹೆಡ್ ಲೈಟ್ ಗಳು, ತಂತ್ರಜ್ಞಾನದಿಂದ ಶ್ರೀಮಂತಗೊಂಡ ಗ್ರಿಲ್ ಮತ್ತು ಸ್ಟೈಲಿಶ್ ಆಗಿರುವ ಈ ಬಿ-ಎಸ್ ಯುವಿ(B-SUV) ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಲಿದೆ. ಇದೇ ಮೊದಲ ಬಾರಿಗೆ B-SUV ಪರಿಕಲ್ಪನೆಯನ್ನು ತನ್ನ ಜಾಗತಿಕ ಕೇಂದ್ರ ಕಚೇರಿಯಲ್ಲಿ ಜುಲೈ 16 ರಂದು ಅನಾವರಣಗೊಳಿಸಲಿದೆ.

ನಿಸ್ಸಾನ್ ಬಿಡುಗಡೆ ಮಾಡುತ್ತಿದೆ ನೂತನ SUV ಕಾರು!

ಕಂಪನಿಯ ಮೊದಲ ಕಾಂಪ್ಯಾಕ್ಟ್ B-SUV ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲು ತುದಿಗಾಲಲ್ಲಿ ನಿಂತಿದೆ. ಅದ್ಭುತವಾದ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳನ್ನು ನೀಡುವ ಮೂಲಕ ನಿಸಾನ್ ಇಂಡಿಯಾ ಜನರನ್ನು ಸಬಲರನ್ನಾಗಿ ಮಾಡುವ ನಿಟ್ಟಿನಲ್ಲಿ ಉದ್ದೇಶ ಹೊಂದಿದೆ. ಈ ಬಹುನಿರೀಕ್ಷಿತ B-SUV ಭಾರತದಲ್ಲಿ ಪ್ರಸಕ್ತ ಹಣಕಾಸು ಸಾಲು ಅಂದರೆ 2020-21 ರ ಎರಡನೇ ಅವಧಿಯಲ್ಲಿ ಮಾರುಕಟ್ಟೆ ಪ್ರವೇಶ ಮಾಡಲಿದೆ.

ನಿಸಾನ್ ಕಿಕ್ಸ್‌ ವರ್ಷಾಚರಣೆ; ಭರ್ಜರಿ ಆಫರ್ ಘೋಷಣೆ!

ನಿಸಾನ್ ನ ಜಾಗತಿಕ ಎಸ್ ಯುವಿ ಪರಂಪರೆ ಮತ್ತು ಸುಧಾರಿತ ತಂತ್ರಜ್ಞಾನಗಳನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಹೊಸ ಕಾಂಪ್ಯಾಕ್ಟ್ ಎಸ್ ಯುವಿಯನ್ನು ನಾಳಿನ ಪ್ರಯಾಣಕ್ಕೆ ಅನುಕೂಲಕರವಾದ ವೈಶಿಷ್ಟ್ಯತೆಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ. ಗ್ರಾಹಕರಿಗೆ ಸ್ಟೈಲಿಶ್ ವಿನ್ಯಾಸ ಮತ್ತು ಡೈನಾಮಿಕ್ ರೋಡ್ ಪ್ರೆಸೆನ್ಸ್ ಅನ್ನು ನೀಡಲಿದೆ. ನಿಸಾನ್ ನ ಈ ಹೊಸ ಎಸ್ ಯುವಿ ನಿಸಾನ್ ಇಂಟಲಿಜೆಂಟ್ ಮೊಬಿಲಿಟಿಯ ಭಾಗವಾದ ಇತ್ತೀಚಿನ ತಂತ್ರಜ್ಞಾನವನ್ನು ಒಳಗೊಂಡಿರುತ್ತದೆ. ಈ ಮೂಲಕ ಕಂಪನಿಯ ದೂರದೃಷ್ಟಿಯಾದ ವಾಹನಗಳು ಹೇಗೆ ಶಕ್ತಿಶಾಲಿಯಾಗಿರಬೇಕು, ಚಾಲನೆ ಹೊಂದಿರಬೇಕು ಮತ್ತು ಇವು ಸಮಾಜದೊಂದಿಗೆ ಹೇಗೆ ಬೆರೆಯಬೇಕೆಂಬುದರ ಪರಿಕಲ್ಪನೆಯನ್ನು ಇಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ.

ಈ ಹೊಸ B-SUV ನಿಸಾನ್ ನ ಜಾಗತಿಕ ಎಸ್ ಯುವಿ ಡಿಎನ್ಎ ಮತ್ತು  ಜಪಾನಿನ ಇಂಜಿನಿಯರಿಂಗ್ ಗೆ ಸಾಕ್ಷಿಯಾಗಿದೆ. ಪ್ಯಾಟ್ರೋಲ್, ಪಾಥ್ ಫೈಂಡರ್, ಅರ್ಮಡಾ, ಎಕ್ಸ-ಟ್ರಯಲ್, ಕ್ವಾಶ್ ಕಾಯ್ ಮತ್ತು ಕಿಕ್ಸ್ ನಂತಹ ಐಕಾನಿಕ್ ಮಾದರಿಗಳನ್ನು ನಿರ್ಮಾಣ ಮಾಡುತ್ತಿದೆ.

PREV
click me!

Recommended Stories

ಒಬೆನ್ Rorr EVO ಎಲೆಕ್ಟ್ರಿಕ್ ಬೈಕ್ ಲಾಂಚ್, ಸ್ಪೆಷಲ್ ಆಫರ್ ಮೂಲಕ ಕೇವಲ 99,999 ರೂ
ಕೇವಲ 87 ಸಾವಿರಕ್ಕೆ ಪವರ್‌ಫುಲ್ ಎಲೆಕ್ಟ್ರಿಕ್ ಸ್ಕೂಟರ್: ಒಮ್ಮೆ ಚಾರ್ಜ್ ಮಾಡಿದರೆ 118 ಕಿಮೀ ಮೈಲೇಜ್!