ಕೊರೋನಾ ವೈರಸ್ ಮೀತಿ ಮೀರುತ್ತಿದೆ. ಗಲ್ಲಿ ಗಲ್ಲಿಗಳಲ್ಲೂ ಕೊರೋನಾ ವೈರಸ್ ಕಾಣಿಸಿಕೊಂಡು ಆತಂಕ ಸೃಷ್ಟಿಸುತ್ತಿದೆ. ಇದೀಗ ಬಜಾಜ್ ಉತ್ಪಾದನಾ ಘಟಕದಲ್ಲಿ ಸಿಬ್ಬಂದಿಗೆ ಕೊರೋನಾ ಕಾಣಿಸಿಕೊಂಡಿದೆ. ಇಬ್ಬರು ಸಿಬ್ಬಂದಿಗಳು ಕೊರೋನಾಗೆ ಬಲಿಯಾಗಿರುವ ಕಾರಣ ಘಟಕ ಮುಚ್ಚುವಂತೆ ನೌಕಕರ ಸಂಘ ಆಗ್ರಹಿಸಿದೆ.
ಮಹಾರಾಷ್ಟ್ರ(ಜೂ.30): ಕೊರೋನಾ ವೈರಸ್ ಮೀತಿ ಮೀರುತ್ತಿದೆ. ಲಾಕ್‌ಡೌನ್ ಸಡಿಲಿಕೆ ಬಳಿಕ ಮೆಲ್ಲನೆ ಆರಂಭಗೊಂಡಿದ್ದ ಭಾರತೀಯ ಆಟೋಮೊಬೈಲ್ ಕ್ಷೇತ್ರಕ್ಕೆ ಮತ್ತೆ ಹೊಡೆತ ಬಿದ್ದಿದೆ. ಔರಂಗಬಾದ್‌ನಲ್ಲಿರುವ ಬಜಾಜ್ ಘಟಕದ ಕೊರೋನಾ ವೈರಸ್ ಕಾಣಿಸಿಕೊಂಡಿದೆ. ಹೀಗಾಗಿ ಮತ್ತಷ್ಟು ಜನರಿಗೆ ಸೋಂಕು ಹರಡಂತೆ ತಡೆಯಲು ಘಟಕ ಸ್ಥಗಿತಗೊಳಿಸುವಂತೆ ನೌಕರರ ಸಂಘ ಆಗ್ರಹಿಸಿದೆ.
ಬಜಾಜ್ ಪಲ್ಸರ್ 125 ಡಬಲ್ ಸೀಟ್ ಬೈಕ್ ಬಿಡುಗಡೆ!.
undefined
ಲಾಕ್‌ಡೌನ್ ನಿಯಮ ಸಡಿಲದ ಬಳಿಕ ಎಲ್ಲಾ ಮಾರ್ಗಸೂಚಿ ಪಾಲಿಸಿದ ಬಜಾಜ್, ಘಟಕ ಆರಂಭಿಸಿತು. ಆದರೆ ಸಿಬ್ಬಂದಿಗೆ ಕೊರೋನಾ ವೈರಸ್ ಕಾಣಿಸಿಕೊಂಡಿದೆ. ಕಂಪನಿಯ ಇಬ್ಬರು ನೌಕರರು ಕೊರೋನಾ ವೈರಸ್‌ಗೆ ಬಲಿಯಾಗಿದ್ದಾರೆ. ಇನ್ನು 140 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಕುರಿತು ಬಜಾಜ್ ಜೂನ್ 26 ರಂದು ಪ್ರಕಟಣೆಯಲ್ಲಿ ತಿಳಿಸಿತ್ತು.
ಭಾನುವಾರ ಮತ್ತೊರ್ವ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಬಂದಿತ್ತು. ಇದೀಗ ಆತನ ಪುತ್ರಿಗೂ ಕೊರೋನಾ ಕಾಣಿಸಿಕೊಂಡಿದೆ. ಸಿಬ್ಬಂದಿಯಿಂದ ಅವರ ಕುಟುಂಬಕ್ಕೂ ಹಬ್ಬುತ್ತಿದೆ. ಈ ಕಾರಣಕ್ಕಾಗಿ ಘಟಕ ಸ್ಥಗಿತಗೊಳಿಸಲು ನೌಕರರ ಸಂಘ ಆಗ್ರಹಿಸಿದೆ.
ಬಜಾಜ್ ಔರಂಗಬಾದ್‌ನಲ್ಲಿ ವುಲು ಪ್ಲಾಂಟ್‌ನಲ್ಲಿ 8100 ನೌಕರರು ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಘಟಕ ಸ್ಥಗಿತಗೊಳಿಸದಿದ್ದರೆ ಬಹುದೊಡ್ಡ ಅನಾಹುತ ನಡೆಯಲಿದೆ ಎಂದು ನೌಕಕರ ಸಂಘ ಹೇಳಿದೆ.