ಭಾರತಕ್ಕೆ ಕಾಲಿಡುತ್ತಿದೆ ಚೀನಾ ಗ್ರೇಟ್ ವಾಲ್ ಕಾರು; ಕರ್ನಾಟಕದಲ್ಲಿ ಘಟಕ?

By Web Desk  |  First Published Nov 11, 2019, 3:06 PM IST

ಚೀನಾ ಮೂಲಕ ಗ್ರೇಟ್ ವಾಲ್ ಮೋಟಾರ್ಸ್ ಭಾರತದಲ್ಲಿ ಕಾರು ಬಿಡುಗಡೆ ಮಾಡಲು ಮುಂದಾಗಿದೆ. ಭಾರತದಲ್ಲೇ ಉತ್ಪದನಾ ಘಟಕ ನಿರ್ಮಿಸಿ ಕಾರು ವಹಿವಾಟ ನಡೆಸಲು ಮುಂದಾಗಿದೆ. ಇದಕ್ಕಾಗಿ ಬರೋಬ್ಬರಿ 7,000 ಕೋಟಿ ರೂಪಾಯಿ ಬಂಡವಾಳ ಹೂಡುತ್ತಿದೆ.


ನವದೆಹಲಿ(ನ.11): ಭಾರತದಲ್ಲಿ ಅಟೋಮೊಬೈಲ್ ಮಾರುಕಟ್ಟೆ ನಿರೀಕ್ಷಿತ ಮಟ್ಟದಲ್ಲಿ ವಹಿವಾಟು ನಡೆಸುತ್ತಿಲ್ಲ. ದಸರಾ, ದೀಪಾವಳಿ ಹಬ್ಬದಲ್ಲಿ ವಾಹನ ಮಾರಾಟ ಕೊಂಚ ಏರಿಕೆ ಕಂಡರೂ ನಷ್ಟದಿಂದ ಕಂಪನಿಗಳು ಹೊರಬಂದಿಲ್ಲ. ಇದರ ನಡುವೆ ಸೌತ್ ಕೊರಿಯಾದ ಕಿಯಾ, ಎಂಜಿ ಮೋಟಾರ್ಸ್ ಸೇರಿದಂತೆ ಹಲವು ಆಟೋಮೊಬೈಲ್ ಕಂಪನಿಗಳು ಭಾರತದಲ್ಲಿ ಕಾರು ಬಿಡುಗಡೆ ಮಾಡಿ ಯಶಸ್ಸು ಕಂಡಿಗದೆ. ಇದೀಗ ಚೀನಾದ ಮತ್ತೊಂದು ಕಾರು ಭಾರತಕ್ಕೆ ಆಗಮಿಸುತ್ತಿದೆ.

Latest Videos

undefined

ಇದನ್ನೂ ಓದಿ: ಕಿಯಾ ಕಾರು ತುಮಕೂರಿನಿಂದ ಅನಂತಪುರಕ್ಕೆ ಹೋದದ್ದು ಏಕೆ?

ಚೀನಾದ ಗ್ರೇಟ್ ವಾಲ್ ಮೋಟಾರ್ಸ್ ಕಾರು ತಯಾರಿಕಾ ಕಂಪನಿ ಇದೀಗ ಭಾರತದಲ್ಲಿ ಬರೋಬ್ಬರಿ 7,000 ಕೋಟಿ ರೂಪಾಯಿ ಬಂಡವಾಳ ಹೂಡಲು ಮುಂದಾಗಿದೆ. ಈಗಾಗಲೇ ಪ್ರಧಾನ ಮಂತ್ರಿ ಕಾರ್ಯಾಲಯದ ಜೊತೆ ಮಾತುಕತೆಗೆ ಸಮಯ ಕೋರಿ ಪತ್ರ ಬರೆದಿದೆ. ಇದರ ಜೊತೆ ಕಾರು ಉತ್ಪಾದನಾ ಘಟಕವನ್ನು ದಕ್ಷಿಣ ಭಾರತದಲ್ಲಿ ನಿರ್ಮಿಸಲು ಕಂಪನಿ ಯೋಜನೆ ಹಾಕಿಕೊಂಡಿದೆ.

ಇದನ್ನೂ ಓದಿ: MG ಹೆಕ್ಟರ್ 700 ಕಾರು ಮಾರಾಟ; ದೀಪಾವಳಿಗೆ ದಾಖಲೆ!

ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡಿನಲ್ಲಿ ಸೂಕ್ತ ಸ್ಥಳ ಸಿಕ್ಕಿದರೆ ಕಂಪನಿ ಉತ್ಪಾದನಾ ಘಟಕ ನಿರ್ಮಾಣವಾಗಲಿದೆ. ಮಹಾರಾಷ್ಟ್ರ ಸರ್ಕಾರ ಜೊತೆ ಒಂದು ಸುತ್ತಿನ  ಮಾತುಕತೆ ನಡೆಸಿತ್ತು. ಸದ್ಯ ದೇವಿಂದ್ರ ಫಡ್ನವಿಸ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಬಿಜೆಪಿ ಸರ್ಕಾರ ರಚಿಸುವ ಲಕ್ಷಣಗಳು ಕಾಣುತ್ತಿಲ್ಲ. ಹೆಚ್ಚು ಸಮಯ ತೆಗೆದುಕೊಳ್ಳುತ್ತಿರುವ ಕಾರಣ, ಕಂಪನಿ ದಕ್ಷಿಣ ಭಾರತದತ್ತ ಮುಖಮಾಡಿದೆ.

ಸೌತ್ ಕೊರಿಯಾದ ಕಿಯಾ ಮೋಟಾರ್ಸ್ ಮೊದಲು ಕರ್ನಾಟಕ ಸರ್ಕಾರವನ್ನು ಸಂಪರ್ಕಿಸಿತ್ತು. ಆದರೆ ಸರ್ಕಾರ ಆಸಕ್ತಿ ತೋರದ ಕಾರಣ, ಕಿಯಾ ಮೋಟಾರ್ಸ್ ಆಂಧ್ರಪ್ರದೇಶದ ಅನಂತಪುರದಲ್ಲಿ ಉತ್ಪಾದನಾ ಘಟಕ ನಿರ್ಮಿಸಿತು. ಇದೀಗ ಗ್ರೇಟ್ ವಾಲ್ ಮೋಟಾರ್ಸ್ ಕೂಡ ಕರ್ನಾಟಕದತ್ತ ಚಿತ್ತ ಹರಿಸಿದೆ. 

ನವೆಂಬರ್ 11ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

click me!