ದೇಶದೆಲ್ಲಡೆ ಹೊಸ ಟ್ರಾಫಿಕ್ ನಿಯಮ; ಪ.ಬಂಗಾಳಕ್ಕೆ ಅನ್ವಯವಾಗಲ್ಲ!

By Web DeskFirst Published Aug 29, 2019, 7:34 PM IST
Highlights

ಸೆಪ್ಟೆಂಬರ್ 1 ರಿಂದ ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ 10 ಪಟ್ಟು ಹೆಚ್ಚು ದಂಡ ಪಾವತಿಸಬೇಕು. ಹೊಸ ಟ್ರಾಫಿಕ್ ನಿಯಮ ಕಟ್ಟು ನಿಟ್ಟಾಗಿ ಜಾರಿಗೊಳಿಸಲು ರಾಜ್ಯದ ಎಲ್ಲಾ ಪೊಲೀಸ್ ಇಲಾಖೆ ಸಜ್ಜಾಗಿದೆ. ಆದರೆ ಪಶ್ಚಿಮ ಬಂಗಾಳ ಸರ್ಕಾರ ಮಾತ್ರ ಈ ನಿಯಮ ಜಾರಿಗೊಳಿಸುತ್ತಿಲ್ಲ. ಇದಕ್ಕೆ ಕಾರಣವೇನು? ಇಲ್ಲಿದೆ ವಿವರ.

ಕೋಲ್ಕತಾ(ಆ.29): ದೇಶದೆಲ್ಲೆಡೆ ಹೊಸ ಟ್ರಾಫಿಕ್ ನಿಯಮ ಜಾರಿಯಾಗುತ್ತಿದೆ. ಸೆಪ್ಟೆಂಬರ್ 1 ರಿಂದ ನೂತನ ನಿಯಮ ಅನ್ವಯವಾಗಲಿದೆ. ನೂತನ ನಿಯಮದ ಪ್ರಕಾರ ದಂಡ ಮೊತ್ತ 10 ಪಟ್ಟು ಹೆಚ್ಚಿಸಲಾಗಿದೆ. ಭಾರತದಲ್ಲಿ ಟ್ರಾಫಿಕ್ ನಿಯಮ ಪಾಲನೆ ಮಾಡದ ಕಾರಣ, ದಂಡದ ಮೊತ್ತವನ್ನು ಹೆಚ್ಚಿಸಲಾಗಿದೆ. ಈ ಮೂಲಕ ನಿಯಮ ಪಾಲನೆಗೆ ಹೆಚ್ಚಿನ ಒತ್ತು ನೀಡಲು ಆದ್ಯತೆ ನೀಡಲಾಗಿದೆ. ಈ ತಿದ್ದುಪಡಿಗೆ ಲೋಕಸಭಾ ಹಾಗೂ ರಾಜ್ಯಸಭೆ ಅಂಗೀಕಾರ ಮಾಡಿ ರಾಷ್ಟ್ರಪತಿ ಅಂಕಿತ ಕೂಡ ಬಿದ್ದಿದೆ. ಹೀಗಾಗಿ ಎಲ್ಲಾ ರಾಜ್ಯ ಈ ನಿಯಮ ಪಾಲಿಸಲಿದೆ. ಆದರೆ ಪಶ್ಚಿಮ ಬಂಗಾಳದಲ್ಲಿ ಮಾತ್ರ ಹೊಸ ಟ್ರಾಫಿಕ್ ನಿಯಮ ಅನ್ವಯವಾಗುವುದಿಲ್ಲ.

ಇದನ್ನೂ ಓದಿ: ಸಂಚಾರಿ ನಿಯಮ ಉಲ್ಲಂಘನೆಗೆ ಸೆ.1ರಿಂದ ಭಾರಿ ದಂಡದ ಬರೆ

ದೇಶದೆಲ್ಲೆಡೆ ನಿಯಮ ಅನ್ವಯವಾದರೆ, ಪ.ಬಂಗಾಳಕ್ಕೆ ಈ ನಿಯಮ ಅನ್ವಯವಾಗುವುದಿಲ್ಲ ಯಾಕೆ ಅನ್ನೋ ಕುತೂಹಲ ಮೂಡುವುದು ಸಹಜ. ಈಗಾಗಲೇ ಮಮತಾ ಬ್ಯಾನರ್ಜಿ ವಿಧಾನ ಸಭೆಯಲ್ಲಿ ಈ ಮಾತನ್ನು ಸ್ಪಷ್ಟಪಡಿಸಿದ್ದಾರೆ. ನೂತನ ಟ್ರಾಫಿಕ್ ತಿದ್ದುಪಡಿಯ ಹಲವು ನಿಯಮಗಳಿಗೆ ಮಮತ ಬ್ಯಾನರ್ಜಿ ವಿರೋಧ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸಿದೆ. ಸದ್ಯ ಬಂಗಾಳದಲ್ಲಿ ಹಳೇ ನಿಯಮ ಮುಂದುವರಿಯಲಿದೆ ಎಂದು ಪಶ್ಚಿಮ ಬಂಗಾಳ ಸಾರಿಗೆ ಸಚಿವೆ ಸುವೆಂದು ಅಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ:  ಟ್ರಾಫಿಕ್ ನಿಯಮ ಉಲ್ಲಂಘಿಸಿದ್ರೆ ಯಾವುದಕ್ಕೆ ಎಷ್ಟು ದಂಡ?

ದಂಡ ಹೆಚ್ಚಿಸಿದ ಕೂಡಲೇ ನಿಯಮ ಪೂರ್ಣವಾಗುವುದಿಲ್ಲ. ಇದಕ್ಕೆ ಪೂರಕ ವ್ಯವಸ್ಥೆ ಹಾಗೂ ನಿಯಮ ಕೂಡ ಬದಲಾಗಬೇಕಿದೆ. ಈ ಕಾರಣಕ್ಕಾಗಿ ಕೇಂದ್ರ ಸರ್ಕಾದ ನೂತನ ಟ್ರಾಫಿಕ್ ನಿಯಮವನ್ನು ಪಶ್ಚಿಮ ಬಂಗಾಳ ವಿರೋಧಿಸುತ್ತಿದೆ. ಇಷ್ಟೇ ಈ ನಿಯಮ ಬಂಗಾಳದಲ್ಲಿ ಜಾರಿಯಾಗಲು ಅವಕಾಶ ಮಾಡಿಕೊಡುವುದಿಲ್ಲ ಎಂದು ಸುವೆಂದು ಹೇಳಿದ್ದಾರೆ.
 

click me!