ದ್ವಿಚಕ್ರ ಸವಾರನಿಗೆ ದುಬಾರಿ ದಂಡ; ಮೊತ್ತ ಕೇಳಿ ಬೈಕನ್ನೇ ಸುಟ್ಟ!

By Web DeskFirst Published Sep 6, 2019, 3:03 PM IST
Highlights

ಟ್ರಾಫ್ರಿಕ್ ನಿಯಮ ಉಲ್ಲಂಘಿಸಿ,  ದುಬಾರಿ ದಂಡ ಕಟ್ಟಲು ಸಾಧ್ಯವಾಗದೇ ಗೋಗೆರೆದ, ಮನವಿ ಮಾಡಿದ, ಪೊಲೀಸರಿಂದ ತಪ್ಪಿಸಿಕೊಂಡು ಹೋದ ಘಟನೆಗಳು ವರಿದಿಯಾಗಿದೆ. ಆದರೆ ದಂಡ ಮೊತ್ತ ಕೇಳಿ ತನ್ನ ಬೈಕನ್ನೇ ಸುಟ್ಟ ಘಟನೆ ನಡೆದಿದೆ.

ದೆಹಲಿ(ಸೆ.06): ಹೆಲ್ಮೆಟ್ ಹಾಕದೆ, ಸಿಗ್ನಲ್ ನೋಡದೆ, ಒನ್ ವೇ, ಪಾರ್ಕಿಂಗ್ ಗಮನಿಸದೆ, ನಾವು ನಡೆದಿದ್ದೇ ದಾರಿ ಎಂದು ಸವಾರಿ ಮಾಡುತ್ತಿದ್ದ ವಾಹನ ಸವಾರರು ಇದೀಗ ಟ್ರಾಫಿಕ್ ನಿಯಮ ಪಾಲಿಸುವಂತಾಗಿದೆ. ಒಂದೆರಡು ಸಿಗ್ನಲ್ ಜಂಪ್ ಮಾಡಿದರೆ ಸಾಕು ದಂಡ 20,000 ರೂಪಾಯಿ ದಾಟಿರುತ್ತೆ. ಹೀಗೆ ನಿಯಮ ಉಲ್ಲಂಘಿಸಿದ ಬೈಕ್ ಸವಾರ ದಂಡ ಮೊತ್ತ ಕೇಳಿ ತನ್ನ ಬೈಕನ್ನೇ ಸುಟ್ಟ ಘಟನೆ ನಡೆದಿದೆ.

Latest Videos

ಇದನ್ನೂ ಓದಿ: ಹೊಸ ಟ್ರಾಫಿಕ್ ರೂಲ್ಸ್: ವಾಹನ ಸವಾರರ ಐಡಿಯಾಗೆ ಪೊಲೀಸರೇ ದಂಗು!

ದೆಹಲಿಯ ಚಿರಾಗ್‌ ಬಳಿಯ ತ್ರಿವೇಣಿ ಕಾಂಪ್ಲೆಕ್ಸ್ ಹತ್ತಿರ ಟ್ರಾಫಿಕ್ ಪೊಲೀಸರು ಎಂದಿನಂತೆ ತಮ್ಮ ಕರ್ತವ್ಯದಲ್ಲಿ ತೊಡಗಿದ್ದರು. ತಪಾಸೆ ವೇಳೆ  ಸರ್ವೋದಯ ಎನ್‌ಕ್ಲೇವ್ ನಿವಾಸಿ ರಾಕೇಶ್  ಮಧ್ಯದ ಕುಡಿದಿರುವುದು ಖಚಿತಗೊಂಡಿದೆ. ನೂತನ ನಿಯಮದ ಪ್ರಕಾರ ಕುಡಿದು ವಾಹನ ಚಲಾಯಿಸಿದರೆ ಬರೋಬ್ಬರಿ 10,000 ರೂಪಾಯಿ ದಂಡ. ಪೊಲೀಸರು ತಡಮಾಡದೇ 10,000 ರೂಪಾಯಿ ದಂಡದ ಚಲನ್ ನೀಡಿದ್ದಾರೆ.

ಇದನ್ನೂ ಓದಿ: ಟ್ರಾಫಿಕ್ ನಲ್ಲಿ ಯಾವ ದಾಖಲೆ ತೋರಿಸಬೇಕು?

ಪೊಲೀಸರು ತಡೆದು ನಿಲ್ಲಿಸಿದ್ದಕ್ಕಾಗಿ ಸಿಟ್ಟಿನಲ್ಲಿದ್ದ ರಾಕೇಶ್, ದಂಡದ ಮೊತ್ತ ಕೇಳಿ ಬೆಚ್ಚಿ ಬಿದ್ದಿದ್ದಾರೆ. ಮೊದಲೇ ಅಮಲಿನಲ್ಲಿದ್ದ ರಾಕೇಶ್ ತನ್ನ ಬೈಕನ್ನೇ ಬೆಂಕಿ ಹಚ್ಚಿ ಸುಟ್ಟಿದ್ದಾರೆ. ಕರ್ತವ್ಯದಲ್ಲಿ ಇಬ್ಬರು ಪೊಲೀಸರು  ಮಾಲ್ವಿಯಾ ನಗರ ಪೊಲೀಸ್ ಠಾಣಗೆ ಕರೆ ಮಾಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ರಾಕೇಶನನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಹೊಸ ಟ್ರಾಫಿಕ್ ರೂಲ್ಸ್: ದಂಡದ ಸಂಪೂರ್ಣ ಪಟ್ಟಿ ಇಲ್ಲಿದೆ!

ರಾಕೇಶ್ ಸಾರ್ವಜನಿಕ ರಸ್ತೆಯಲ್ಲಿ ಬೆಂಕಿ ಹಚ್ಚೋ ಮೂಲಕ ನಿಯಮ ಉಲ್ಲಂಘಿಸಿದ್ದಾರೆ. ಹೀಗಾಗಿ  10,000 ರೂಪಾಯಿ ದಂಡದ ಜೊತೆ ಹೆಚ್ಚುವರಿ ದಂಡ ಕಟ್ಟಬೇಕಿದೆ. ಇಷ್ಟೇ ಅಲ್ಲ IPC ನಿಯಮದನ್ವಯ ರಾಕೇಶ್ ವಿರುದ್ಧ ಪ್ರಕರಣ ಕೂಡ ದಾಖಲಾಗಿದೆ. ರಾಕೇಶ್ ದಂಡದ ಮೊತ್ತ ಇದೀಗ ಕೋರ್ಟ್ ವಿಧಿಸಲಿದೆ. ದಂಡ, ಕೇಸ್ ಜೊತೆಗೆ ಇತ್ತ ಬೈಕ್ ಕೂಡ ಸುಟ್ಟು ಬೂದಿಯಾಗಿದೆ.

click me!