ನೂತನ ಟ್ರಾಫಿಕ್ ನಿಯಮ ಜಾರಿಯಾದ ಬೆನ್ನಲ್ಲೇ ಬೃಹತ್ ದಂಡ ಕಟ್ಟಿ ವಾಹನ ಚಾಲಕರು ಹೈರಾಣಾಗುತ್ತಿದ್ದಾರೆ. 100 ರೂ ಎಂದು ಸಿಂಗ್ನಲ್ ಜಂಪ್ ಮಾಡಿದರೆ, ಕೊನೆಗೆ ವಾಹನ ಮಾರಿ ದಂಡ ಕಟ್ಟಬೇಕಾದ ಪರಿಸ್ಥಿತಿ ಎದುರಾಗಬಹುದು. ಹೀಗಾಗಿ ನೂತನ ಟ್ರಾಫಿಕ್ ನಿಮಯ ಹಾಗೂ ದಂಡದ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಬೆಂಗಳೂರು(ಸೆ.06): ದೇಶದೆಲ್ಲೆಡೆ ಹೊಸ ಟ್ರಾಫಿಕ್ ನಿಯಮ ಹಾಗೂ ದಂಡ ಜಾರಿಯಾಗಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲೂ ಕಟ್ಟು ನಿಟ್ಟಾಗಿ ಹೊಸ ನಿಯಮದನ್ವಯ ದಂಡ ವಸೂಲಿ ಮಾಡಲಾಗುತ್ತಿದೆ. ಈಗಾಗಲೇ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ನೂತನ ನಿಯಮ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿದ್ದಾರೆ. ಇಷ್ಟಾದರೂ ನಿಯಮ ಉಲ್ಲಂಘಿಸಿ ಹಲವು ಕಡೆ ಭಾರಿ ಮೊತ್ತದ ದಂಡ ಕಟ್ಟಿದ ಘಟನೆ ವರದಿಯಾಗುತ್ತಿದೆ.
ಇದನ್ನೂ ಓದಿ: ಜಾರಿಯಾಯ್ತು ಹೊಸ ರೂಲ್ಸ್; ಮನೆ ಮುಂದೆ ಕಾರು, ಶಾಲಾ ಹೊರಗಡೆ ಬಸ್ಸು ನಿಲ್ಸಿದ್ರೆ ದಂಡ!
undefined
ನೂತನ ನಿಮಯದ ಪ್ರಕಾರ ಟ್ರಾಫಿಕ್ ನಿಯಮ ಉಲ್ಲಂಘನೆ ಹಾಗೂ ದಂಡದ ಮಾಹಿತಿ ಇಲ್ಲಿದೆ.
ಸಣ್ಣ ತಪ್ಪಿಗೂ ಭಾರಿ ದಂಡ ಪಾವತಿಸಬೇಕು. ಹೀಗಾಗಿ ವಾಹನ ಚಾಲಕರು, ಸವಾರರು ಎಚ್ಚರ ವಹಿಸಬೇಕು. ವಿಮೆ, ಎಮಿಶನ್ ಟೆಸ್ಟ್, ಸಿಗ್ನಲ್ ಜಂಪ್, ನೋ ಪಾರ್ಕಿಂಗ್, ರಾಂಗ್ ಸೈಡ್ ಸೇರಿದಂತೆ ಹಲವು ನಿಯಮಗಳು ಹೆಚ್ಚಾಗಿ ಉಲ್ಲಂಘನೆಯಾಗುತ್ತದೆ. ಇದೀಗ ನೂತನ ನಿಯಮ ಇವೆಲ್ಲಕ್ಕೆ ಕಡಿವಾಣ ಹಾಕಲಿದೆ.